ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಲ್ಲರೆಯಲ್ಲೇ 25000 ರೂ. ಭದ್ರತಾ ಠೇವಣಿ ಇರಿಸಿದ ತ.ನಾಡು ಅಭ್ಯರ್ಥಿ!

|
Google Oneindia Kannada News

ಚೆನ್ನೈ, ಮಾರ್ಚ್ 26: ಲೋಕಸಭೆ ಚುನಾವಣೆಯ ಮೊದಲ ಹಂತದ ನಾಮಪತ್ರ ಸಲ್ಲಿಕೆ ಅವಧಿ ಸೋಮವಾರ ಮುಕ್ತಾಯಗೊಂಡಿದೆ. ಎರಡನೆಯ ಹಂತದ ಅವಧಿ ಮಂಗಳವಾರ ಮುಗಿಯಲಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ನಾಮಪತ್ರ ಸಲ್ಲಿಕೆಯ ವೇಳೆ ಭದ್ರತಾ ಠೇವಣಿ ಎಂದು 25 ಸಾವಿರ ರೂಪಾಯಿ ಕೂಡ ಸಲ್ಲಿಸಬೇಕು. ಸಾಮಾನ್ಯವಾಗಿ ಎಲ್ಲ ಅಭ್ಯರ್ಥಿಗಳು ಕರೆನ್ಸಿ ನೋಟುಗಳಲ್ಲಿ ಈ ಭದ್ರತಾ ಠೇವಣಿಯನ್ನು ಇರಿಸುತ್ತಾರೆ. ಆದರೆ, ತಮಿಳುನಾಡಿನ ಸ್ವತಂತ್ರ ಅಭ್ಯರ್ಥಿಯೊಬ್ಬರು ವಿಶಿಷ್ಟ ರೀತಿಯಲ್ಲಿ ಭದ್ರತಾ ಠೇವಣಿ ಸಲ್ಲಿಸಿದ್ದಾರೆ.

ಕೊಪ್ಪಳ ಬಿಜೆಪಿ ಅಭ್ಯರ್ಥಿಯಾಗಿ ಬಿ.ಶ್ರೀರಾಮುಲು ಕಣಕ್ಕೆ? ಕೊಪ್ಪಳ ಬಿಜೆಪಿ ಅಭ್ಯರ್ಥಿಯಾಗಿ ಬಿ.ಶ್ರೀರಾಮುಲು ಕಣಕ್ಕೆ?

ಚೆನ್ನೈ ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಕುಪ್ಪಲ್ಜಿ ದೇವದಾಸ್ ಭದ್ರತಾ ಠೇವಣಿಯಾಗಿ ಸಂಪೂರ್ಣ 25 ಸಾವಿರ ರೂಪಾಯಿ ಹಣವನ್ನು ಚಿಲ್ಲರೆ ಮೂಲಕವೇ ಪಾವತಿಸಿದ್ದಾರೆ.

Tamil Nadu chennai south Independent candidate Kuppalji Devadoss pays 25000 security deposite in coins

ದಕ್ಷಿಣ ಚೆನ್ನೈ ವಲಯ ಕಚೇರಿಗೆ ಸೋಮವಾರ ಕೆಲವು ಬೆಂಬಲಿಗರೊಂದಿಗೆ ಬಂದ ದೇವದಾಸ್, ಪಾತ್ರೆಗಳನ್ನು ಹೊತ್ತುಕೊಂಡು ಬಂದಿದ್ದರು. ಒಂದು ಪಾತ್ರೆಯಲ್ಲಿ 10 ರೂಪಾಯಿ ನಾಣ್ಯವಿದ್ದರೆ, ಇನ್ನುಳಿದ ಪಾತ್ರೆಗಳಲ್ಲಿ 5, 2 ಮತ್ತು 1 ರೂಪಾಯಿ ಮೌಲ್ಯದ ನಾಣ್ಯಗಳಿದ್ದವು.

ಪಕ್ಷ ಬೆಂಬಲವಿಲ್ಲದ ಅಭ್ಯರ್ಥಿಗಳು ಜನರನ್ನು ಸೆಳೆಯಲು ವಿವಿಧ ಕಸರತ್ತುಗಳನ್ನು ನಡೆಸುತ್ತಾರೆ. ಅದರಲ್ಲಿ ಇಂತಹ ವಿಚಿತ್ರ ಪ್ರಯತ್ನಗಳೂ ನಡೆಯುತ್ತವೆ. ದೇವದಾಸ್ ಅವರು ನಾಮಪತ್ರ ಸಲ್ಲಿಸುವ ಮುನ್ನ ತಾವು ತಂದಿದ್ದ 'ಭದ್ರತಾ ಠೇವಣಿ'ಯನ್ನು ಪ್ರದರ್ಶಿಸಿ ಗಮನ ಸೆಳೆದರು.

ಮೈತ್ರಿ ಅಭ್ಯರ್ಥಿ ವಿಜಯ್ ಶಂಕರ್ ಎರಡು ಬಾರಿ ನಾಮಪತ್ರ ಸಲ್ಲಿಸಿದ್ದೇಕೆ? ಮೈತ್ರಿ ಅಭ್ಯರ್ಥಿ ವಿಜಯ್ ಶಂಕರ್ ಎರಡು ಬಾರಿ ನಾಮಪತ್ರ ಸಲ್ಲಿಸಿದ್ದೇಕೆ?

ಅವರೇನೋ ಪಾತ್ರೆಗಳಲ್ಲಿ ಚಿಲ್ಲರೆ ತುಂಬಿಸಿಕೊಂಡು ತಂದು ಕೊಟ್ಟಿರಬಹುದು. ಆದರೆ, ಅಷ್ಟೂ ಚಿಲ್ಲರೆಯನ್ನು ಲೆಕ್ಕಹಾಕಿ 25,000 ಕೂಡಿರುವಾಗ ಚುನಾವಣಾ ಆಯೋಗದ ಸಿಬ್ಬಂದಿಯ ಕಥೆ ಏನಾಗಿರಬಹುದು?

English summary
Chennai South Independent candidate Kuppalji Devadoss who files his nomination, pays amount of 25,000 Rs for security deposite completely with coins.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X