• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಮಿಳುನಾಡು: ಬಿಜೆಪಿ ನಾಯಕನ ಹತ್ಯೆ

|
Google Oneindia Kannada News

ಚೆನ್ನೈ ಮೇ 25: ತಮಿಳುನಾಡಿದ ರಾಜಧಾನಿ ಚೆನ್ನೈನಲ್ಲಿ ಬಿಜೆಪಿ ಎಸ್ಸಿ/ಎಸ್ಟಿ ಮೋರ್ಚಾ ನಾಯಕನನ್ನು ದುಷ್ಕರ್ಮಿಗಳ ಗುಂಪೊಂದು ಮಂಗಳವಾರ ರಾತ್ರಿ ಹತ್ಯೆ ಮಾಡಿದೆ.

ಚೆನ್ನೈ ದಕ್ಷಿಣ ಜಿಲ್ಲಾ ಬಿಜೆಪಿ ಎಸ್ಸಿ/ಎಸ್ಟಿ ಮೋರ್ಚಾ ಅಧ್ಯಕ್ಷರಾಗಿರುವ ಬಾಲಚಂದ್ರನ್ ಚೆನ್ನೈನ ಚಿಂದಾರಪೇಟೆಯ ಟೀ ಅಂಗಡಿಯೊಂದರಲ್ಲಿ ಮಂಗಳವಾರ ರಾತ್ರಿ ಟೀ ಸೇವಿಸುತ್ತಿದ್ದಾಗ ಮೂವರು ಅವರ ಮೇಲೆ ಹಲ್ಲೆ ನಡೆಸಿ, ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ಮಾಡಿದ್ದಾರೆ.

ಎಸ್ಟಿ ಸಮುದಾಯವನ್ನ ಗುರುತಿಸಿದ್ದು ಬಿಜೆಪಿ ಸರ್ಕಾರ ಮಾತ್ರ: ತಿಪ್ಪರಾಜು ಹವಾಲ್ದಾರ್ಎಸ್ಟಿ ಸಮುದಾಯವನ್ನ ಗುರುತಿಸಿದ್ದು ಬಿಜೆಪಿ ಸರ್ಕಾರ ಮಾತ್ರ: ತಿಪ್ಪರಾಜು ಹವಾಲ್ದಾರ್

ಬಾಲಚಂದ್ರನ್ ಸಣ್ಣ ಲೇವಾದೇವಿ ವ್ಯವಹಾರ ನಡೆಸುತ್ತಿದ್ದರು. ಅವರಿಗೆ ಪ್ರಾಣ ಬೆದರಿಕೆ ಕರೆಗಳು ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಅವರಿಗೆ ತಮಿಳುನಾಡು ಗೃಹ ಇಲಾಖೆಯಿಂದ ಒಬ್ಬರು ವೈಯಕ್ತಿಯ ಭದ್ರತಾ ಅಧಿಕಾರಿಯನ್ನು ನೇಮಿಸಲಾಗಿತ್ತು.

ಬಾಲಚಂದ್ರನ್ ಹತ್ಯೆಯು ಚೆನ್ನೈನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಹುಟ್ಟುಹಾಕಿದೆ. ಜನಸಂದಣಿಯಿಂದ ತುಂಬಿರುವ ಚೆನ್ನೈನ ಪ್ರಮುಖ ಟ್ರ್ಯಾಫಿಕ್ ಜಂಕ್ಷನ್ ನಲ್ಲೇ ಕೊಲೆಯಾಗಿದೆ.

Tamil Nadu BJP minority wing leader hacked to death

ಬಾಲಚಂದ್ರನ್ ಹತ್ಯೆ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆಯ ವೈಫಲ್ಯದ ವಿರುದ್ಧ ತಮಿಳುನಾಡು ವಿರೋಧ ಪಕ್ಷದ ನಾಯಕ, ಎಐಡಿಎಂಕೆ ಪಕ್ಷದ ಇ. ಕೆ. ಪಳನಿಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಳೆದ 20 ದಿನಗಳಲ್ಲಿ 18 ಹತ್ಯೆಗಳಿಂದ ಚೆನ್ನೈ 'ಕೊಲೆಗಳ ನಗರ' ವಾಗಿ ಮಾರ್ಪಟ್ಟಿದೆ ಎಂದು ಅವರು ದೂರಿದ್ದಾರೆ.

English summary
Tamil Nadu BJP minority wing leader Balachandran hacked to death in chennai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X