ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನಲ್ಲಿ ವೇಗ ಹೆಚ್ಚಿಸಿದ ಮಹಾಮಾರಿ ಕೊರೊನಾ, ಸಂಕಷ್ಟದಲ್ಲಿ ಚೆನ್ನೈ

|
Google Oneindia Kannada News

ಚೆನ್ನೈ, ಮೇ 11: ದಕ್ಷಿಣ ಭಾರತದ ಪೈಕಿ ತಮಿಳುನಾಡು ಸರ್ಕಾರ ಕೊರೊನಾ ನಿಯಂತ್ರಣದ ಹಳಿ ತಪ್ಪಿದ್ಯಾ ಎಂಬ ಆತಂಕ ಕಾಡುತ್ತಿದೆ. ಯಾಕಂದ್ರೆ, ತಮಿಳುನಾಡಿನಲ್ಲಿ ಕೊರೊನಾ ಸೋಂಕಿತರ ಏರಿಕೆಯ ವೇಗ ಹೆಚ್ಚಿದೆ. ನೋಡು ನೋಡುತ್ತಿದ್ದ ಸೋಂಕಿತರ ಸಂಖ್ಯೆಯಲ್ಲಿ 7 ಸಾವಿರ ಗಡಿ ದಾಟಿದೆ.

ಎರಡನೇ ಲಾಕ್‌ಡೌನ್‌ ಮುಕ್ತಾಯದ ವೇಳೆ ಅಂದ್ರೆ ಮೇ 3ನೇ ತಾರೀಕಿನವರೆಗೂ ತಮಿಳುನಾಡಿನಲ್ಲಿ 3023 ಕೇಸ್ ಮಾತ್ರ ವರದಿಯಾಗಿತ್ತು. ನಂತರದ 8 ದಿನದಲ್ಲಿ 4001 ಜನರಿಗೆ ಸೋಂಕು ಹರಿಡಿದೆ ಈಗ ರಾಜ್ಯದಲ್ಲಿ ಒಟ್ಟು 7024 ಪ್ರಕರಣ ದಾಖಲಾಗಿದೆ. ಈ ಅಂಕಿ ಅಂಶ ಗಮನಿಸಿದರೆ ತಮಿಳುನಾಡಿನಲ್ಲಿ ಕೊರೊನಾ ಮೂರನೇ ಹಂತಕ್ಕೆ (ಸಮುದಾಯ) ಹೆಜ್ಜೆಯಿಟ್ಟಿದ್ಯಾ ಎಂಬ ಅನುಮಾನ ಕಾಡುತ್ತಿದೆ.

ಸಮೀಕ್ಷೆ, ಕೊರೊನಾ ನಿರ್ವಹಣೆಯಲ್ಲಿ ಯಾವ ಸಿಎಂ ಬೆಸ್ಟ್: ಬಿಎಸ್ವೈಗೆ ಎಷ್ಟನೇ ಸ್ಥಾನ? ಸಮೀಕ್ಷೆ, ಕೊರೊನಾ ನಿರ್ವಹಣೆಯಲ್ಲಿ ಯಾವ ಸಿಎಂ ಬೆಸ್ಟ್: ಬಿಎಸ್ವೈಗೆ ಎಷ್ಟನೇ ಸ್ಥಾನ?

ರಾಷ್ಟ್ರ ರಾಜಧಾನಿ ದೆಹಲಿಯನ್ನು ಹಿಂದಿಕ್ಕಿರುವ ತಮಿಳುನಾಡು ಈಗ ಗುಜರಾತ್‌ ಸನಿಹದಲ್ಲಿ. ಬಹುಶಃ ಮೋದಿ ರಾಜ್ಯವನ್ನು ಹಿಂದಿಕ್ಕಿ ಮಹಾರಾಷ್ಟ್ರ ನಂತರ ಸ್ಥಾನಕ್ಕೆ ತಮಿಳುನಾಡು ಜಿಗಿಯುವ ಎಲ್ಲಾ ಸಾಧ್ಯತೆ ಇದೆ. ಅಂದ್ಹಾಗೆ, ತಮಿಳುನಾಡಿನಲ್ಲಿ ಲಾಕ್‌ಡೌನ್‌ ರಿಲ್ಯಾಕ್ಸ್ ನೀಡಿದ್ದು ಈ ಸ್ಥಿತಿಗೆ ಕಾರಣ ಆಯ್ತಾ? ಮದ್ಯದಂಗಡಿ ತೆರೆದಿದ್ದು ಸಮಸ್ಯೆ ಆಯ್ತಾ? ಎಂಬ ಪ್ರಶ್ನೆ ಮೂಡುತ್ತಿದೆ. ಮುಂದೆ ಓದಿ....

ಕೊರೊನಾ ಹಾಟ್‌ಸ್ಪಾಟ್ ಕೊಯಂಬೇಡು ಮಾರುಕಟ್ಟೆ

ಕೊರೊನಾ ಹಾಟ್‌ಸ್ಪಾಟ್ ಕೊಯಂಬೇಡು ಮಾರುಕಟ್ಟೆ

ತಮಿಳುನಾಡು ಪಾಲಿಗೆ ಚೆನ್ನೈನ ಕೊಯಂಬೇಡು ಮಾರುಕಟ್ಟೆ ಕೊರೊನಾ ಹಾಟ್‌ಸ್ಪಾಟ್‌ ಆಗಿ ಪರಿಣಮಿಸಿದೆ. ಲಾಕ್‌ಡೌನ್‌ ನಡುವೆಯೂ ಈ ಮಾರುಕಟ್ಟೆಯಲ್ಲಿ ತರಕಾರಿ ಮತ್ತು ಹಣ್ಣು ಸರಬರಾಜು ಕಾರ್ಯ ಮಾಡಲಾಗಿದೆ. ಮುಂಜಾಗ್ರತೆ ಕ್ರಮಗಳನ್ನಯ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ತಮಿಳುನಾಡಿನ ಒಟ್ಟು ಪ್ರಕರಣದಲ್ಲಿ ಸುಮಾರು 1500 ಕೇಸ್ ದಾಖಲಾಗಿರುವುದು ಇದೇ ಮಾರುಕಟ್ಟೆಯ ಸಂಪರ್ಕದಲ್ಲಿದ್ದವರಿಗೆ.

ಮದ್ಯದಂಗಡಿ ತೆರೆದಿದ್ದು ತಪ್ಪಾಯಿತೇ?

ಮದ್ಯದಂಗಡಿ ತೆರೆದಿದ್ದು ತಪ್ಪಾಯಿತೇ?

ಲಾಕ್‌ಡೌನ್‌ ವಿನಾಯಿತಿಯಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ಕೊಟ್ಟಿದ್ದು ತಪ್ಪಾಯಿತೇ ಎಂಬ ಚರ್ಚೆ ನಡೆಯುತ್ತಿದೆ. ಮದ್ಯದಂಗಡಿಗಳ ಬಳಿ ಜನರು ಗುಂಪು ಗುಂಪಾಗಿ ಸಾಲು ನಿಂತಿದ್ದರು. ಅನೇಕ ಕಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲಿಲ್ಲ. ಕೆಲವು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ನಂತರ ಮದ್ರಾಸ್ ಹೈ ಕೋರ್ಟ್ ಮದ್ಯದಂಗಡಿ ತೆರೆಯುವಂತಿಲ್ಲ. ಆನ್‌ಲೈನ್‌ ಮಾರಾಟ ಮಾಡಬಹುದು ಎಂದು ಆದೇಶ ನೀಡಿತ್ತು.

24 ಗಂಟೆಯಲ್ಲಿ 4213 ಕೇಸ್‌, ಸೋಂಕಿತರ ಸಂಖ್ಯೆ 67,152ಕ್ಕೆ ಏರಿಕೆ24 ಗಂಟೆಯಲ್ಲಿ 4213 ಕೇಸ್‌, ಸೋಂಕಿತರ ಸಂಖ್ಯೆ 67,152ಕ್ಕೆ ಏರಿಕೆ

ಚೆನ್ನೈ ಬಿಟ್ಟು ಹೊರಗೆ ಲಾಕ್‌ಡೌನ್‌ ಇಲ್ಲ

ಚೆನ್ನೈ ಬಿಟ್ಟು ಹೊರಗೆ ಲಾಕ್‌ಡೌನ್‌ ಇಲ್ಲ

ಚೆನ್ನೈ ನಗರದಲ್ಲಿ ಈವರೆಗೂ 3834 ಕೇಸ್ ವರದಿಯಾಗಿದೆ. ಮೇ 3ರ ಬಳಿಕ ಕೇಂದ್ರ ಸರ್ಕಾರ ಲಾಕ್‌ಡೌನ್‌ ವಿನಾಯಿತಿ ಘೋಷಣೆ ಮಾಡಿದ ಬಳಿಕ, ತಮಿಳುನಾಡು ಸರ್ಕಾರ ಕೂಡ ಕೊರೊನಾ ಹಾಟ್‌ಸ್ಪಾಟ್‌ ನಗರ ಬಿಟ್ಟು ಉಳಿದ ಎಲ್ಲ ಕಡೆ ವಿನಾಯಿತಿ ನೀಡಿತು. ಅಗತ್ಯ ವಸ್ತುಗಳು, ಹಣ್ಣುಗಳು ಮತ್ತು ತರಕಾರಿಗಳನ್ನು ಮಾರಾಟ ಮಾಡುವ ಅಂಗಡಿಗಳು ಈಗ ಚೆನ್ನೈನಲ್ಲಿ ಬೆಳಿಗ್ಗೆ 6 ರಿಂದ ಸಂಜೆ 7 ರವರೆಗೆ ತೆರೆದಿರುತ್ತವೆ. ನಗರದ ಖಾಸಗಿ ಸಂಸ್ಥೆಗಳು ಬೆಳಿಗ್ಗೆ 10.30 ರಿಂದ ಸಂಜೆ 6 ರವರೆಗೆ ಶೇಕಡಾ 33 ರಷ್ಟು ಸಿಬ್ಬಂದಿಯೊಂದಿಗೆ ಕೆಲಸ ಮಾಡುತ್ತಿವೆ. ಬಹುಶಃ ಇದು ಚೆನ್ನೈಗೆ ಹಾಗೂ ತಮಿಳುನಾಡಿಗೆ ಸಂಕಷ್ಟ ತಂದೊಡ್ಡುತ್ತಾ?

ಕಳೆದ ಒಂದು ವಾರದಿಂದ ಏರಿಕೆ

ಕಳೆದ ಒಂದು ವಾರದಿಂದ ಏರಿಕೆ

ತಮಿಳುನಾಡಿನಲ್ಲಿ ಕಳೆದ ಒಂದು ವಾರದ ಅಂಕಿ ಅಂಶ ಆತಂಕ ಹೆಚ್ಚಿಸಿದೆ. ಮುಂದಿನ ದಿನಗಳ ಬಗ್ಗೆ ಭಯ ಹುಟ್ಟಿಸುತ್ತಿದೆ. ಮೇ 10 ರಂದು 669 ಕೇಸ್ ದಾಖಲಾಗಿದೆ. ಮೇ 9 ರಂದು 526 ಕೇಸ್, ಮೇ 8 ರಂದು 600 ಕೇಸ್, ಮೇ 7 ರಂದು 580 ಪ್ರಕರಣ, ಮೇ 6 ರಂದು 771 ಕೇಸ್, ಮೇ 5 ರಂದು 508 ಪ್ರಕರಣ, ಮೇ 4 ರಂದು 527 ಕೇಸ್ ಹಾಗೂ ಮೇ 3 ರಂದು 266 ಜನರಿಗೆ ಸೋಂಕು ದೃಢಪಟ್ಟಿದೆ.

ಮೂರನೇ ಸ್ಥಾನದಲ್ಲಿ ತಮಿಳುನಾಡು

ಮೂರನೇ ಸ್ಥಾನದಲ್ಲಿ ತಮಿಳುನಾಡು

ದೇಶದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರು ವರದಿಯಾಗಿರುವುದು ಮಹಾರಾಷ್ಟ್ರದಲ್ಲಿ. ಒಟ್ಟು 22,171 ಕೇಸ್ ಇಲ್ಲಿ ದಾಖಲಾಗಿದೆ. 832 ಜನರು ಮೃತಪಟ್ಟಿದ್ದಾರೆ. ನಂತರ ಗುಜರಾತ್‌ನಲ್ಲಿ 8,195 ಪ್ರಕರಣ ವರದಿಯಾಗಿದೆ. ಮೂರನೇ ಸ್ಥಾನಕ್ಕೆ ತಮಿಳುನಾಡು ಜಿಗಿದಿದ್ದು 7204 ಕೇಸ್ ಆಗಿದೆ. ದೆಹಲಿಯಲ್ಲಿ 6923 ಪ್ರಕರಣ ಬೆಳಕಿಗೆ ಬಂದಿದೆ.

English summary
COVID19 Update: Tamilnadu total coronavirus cases rise to 7204. now, TN stands 3rd place in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X