ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Times Now-C-Voter exit polls: 10 ವರ್ಷ ಬಳಿಕ ಡಿಎಂಕೆ ಅಧಿಕಾರಕ್ಕೆ

|
Google Oneindia Kannada News

ಐದು ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪದೇಶದಲ್ಲಿ ನಡೆದ ವಿಧಾನಸಭೆ ಚುನಾವಣೆ ಮುಕ್ತಾಯವಾಗಿದೆ. ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪುದುಚೆರಿ ವಿಧಾನಸಭೆ ಚುನಾವಣೆಗಳು ಏಪ್ರಿಲ್ 6ರಂದು ಮುಕ್ತಾಯಗೊಂಡರೆ, ಪಶ್ಚಿಮ ಬಂಗಾಳದಲ್ಲಿ 8ನೇ ಹಾಗೂ ಕೊನೆ ಹಂತದ ಮತದಾನ ಇಂದು(ಏಪ್ರಿಲ್ 29) ಸಂಪನ್ನವಾಗಿದೆ. ಪ್ರಮುಖ ಮಾಧ್ಯಮಗಳು ಸೇರಿದಂತೆ ಸ್ಥಳೀಯ ಖಾಸಗಿ ಸುದ್ದಿ ವಾಹಿನಿಗಳು ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಕಟಿಸುತ್ತಿವೆ. ಮೇ 2 ರಂದು ಅಂತಿಮ ಫಲಿತಾಂಶ ಪ್ರಕಟವಾಗಲಿದೆ.

ಟೈಮ್ಸ್ ನೌ ಹಾಗೂ ಸಿ ವೋಟರ್ ಸಂಸ್ಥೆ ನಡೆಸಿದ ಚುನಾವಣೋತ್ತರ ಸಮೀಕ್ಷೆಯಂತೆ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಈ ಬಾರಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ. 10 ವರ್ಷಗಳ ಬಳಿಕ ಮತ್ತೆ ಅಧಿಕಾರಕ್ಕೇರುವ ಸಾಧ್ಯತೆಯಿದ್ದು, ಎಂಕೆ ಸ್ಟಾಲಿನ್ ಮೊದಲ ಬಾರಿಗೆ ಸಿಎಂ ಆಗುವ ಕನಸು ನನಸಾಗುವ ದಿನ ಬಂದಿದೆ ಎಂಬ ವರದಿಯಿದೆ.

 Tamil Nadu Assembly Elections Times Now-C-Voter exit polls Results 2021

ತಮಿಳುನಾಡು (234 ಸ್ಥಾನ, 118 ಮ್ಯಾಜಿಕ್ ನಂಬರ್) 2021 ಎಕ್ಸಿಟ್ ಪೋಲ್ ಫಲಿತಾಂಶ:
ಎಐಎಡಿಎಂಕೆ+: 166
ಡಿಎಂಕೆ+: 64
ಎಎಂಎಂಕೆ+:1
ಇತರೆ: 3

2021 ಶೇಕಡಾವಾರು ಮತ ಗಳಿಕೆ

ಎಐಎಡಿಎಂಕೆ+: 35%
ಡಿಎಂಕೆ+: 46.7%
ಎಎಂಎಂಕೆ+: 3.8
ಇತರೆ: 14.5%

2016ರ ಫಲಿತಾಂಶ , ಶೇಕಡಾವಾರು ಮತ ಗಳಿಕೆ
ಎಐಎಡಿಎಂಕೆ: 134, 41.3%
ಡಿಎಂಕೆ: 89, 32.1%
ಕಾಂಗ್ರೆಸ್: 8, 65%
ಐಉಎಂಎಲ್: 1, 0.7%

ಮಾರ್ಚ್ 27ರಿಂದ ಏಪ್ರಿಲ್ 29ರ ಸಂಜೆ 7ರವರೆಗೂ ಎಕ್ಸಿಟ್ ಪೋಲ್ ಸಮೀಕ್ಷೆಗಳನ್ನು ಪ್ರಕಟಿಸುವಂತಿಲ್ಲ ಎಂದು ಆಯೋಗ ಆದೇಶಿಸಿತ್ತು. ವಿಧಾನಸಭೆ ಚುನಾವಣೆ ಅಥವಾ ಉಪ ಚುನಾವಣೆಯ ಪ್ರತಿ ಹಂತದ ಮತದಾನ ನಡೆದ ಬಳಿಕ ಆಯಾ ಪ್ರದೇಶಕ್ಕೆ ಸಂಬಂಧಿಸಿದಂತೆ 48 ಗಂಟೆಗಳವರೆಗೂ ಎಕ್ಸಿಟ್ ಪೋಲ್ ಅಥವಾ ಬೇರೆ ಯಾವುದೇ ರೀತಿಯ ಚುನಾವಣಾ ಸಮೀಕ್ಷೆಗಳ ಫಲಿತಾಂಶ ಪ್ರಕಟಿಸುವಂತಿಲ್ಲ ಎಂದು ಚುನಾವಣಾ ಆಯೋಗದ ನಿಯಮವಿದೆ.

ಪಶ್ಚಿಮ ಬಂಗಾಳದಲ್ಲಿ 294, ತಮಿಳುನಾಡಿನಲ್ಲಿ 234, ಕೇರಳದಲ್ಲಿ 140, ಪುದುಚೇರಿಯಲ್ಲಿ 30 ಹಾಗೂ ಅಸ್ಸಾಂನಲ್ಲಿ 126 ಸ್ಥಾನಕ್ಕಾಗಿ ಚುನಾವಣೆ ನಡೆಸಲಾಗಿದೆ.

English summary
Check out Tamil Nadu Assembly Elections Times Now-C-Voter Opinion and Exit Poll Results 2021 in Kannada which projects victory for DMK.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X