• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

Republic-CNX Exit Polls: ತಮಿಳುನಾಡಲ್ಲಿ ಡಿಎಂಕೆಗೆ ಭರ್ಜರಿ ಜಯ

|

ಐದು ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪದೇಶದಲ್ಲಿ ನಡೆದ ವಿಧಾನಸಭೆ ಚುನಾವಣೆ ಮುಕ್ತಾಯವಾಗಿದೆ. ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪುದುಚೆರಿ ವಿಧಾನಸಭೆ ಚುನಾವಣೆಗಳು ಏಪ್ರಿಲ್ 6ರಂದು ಮುಕ್ತಾಯಗೊಂಡರೆ, ಪಶ್ಚಿಮ ಬಂಗಾಳದಲ್ಲಿ 8ನೇ ಹಾಗೂ ಕೊನೆ ಹಂತದ ಮತದಾನ ಇಂದು(ಏಪ್ರಿಲ್ 29) ಸಂಪನ್ನವಾಗಿದೆ. ಪ್ರಮುಖ ಮಾಧ್ಯಮಗಳು ಸೇರಿದಂತೆ ಸ್ಥಳೀಯ ಖಾಸಗಿ ಸುದ್ದಿ ವಾಹಿನಿಗಳು ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಕಟಿಸುತ್ತಿವೆ. ಮೇ 2 ರಂದು ಅಂತಿಮ ಫಲಿತಾಂಶ ಪ್ರಕಟವಾಗಲಿದೆ.

ರಿಪಬ್ಲಿಕ್ ಟಿವಿ ಹಾಗೂ ಸಿಎನ್ಎಕ್ಸ್ ಸಂಸ್ಥೆ ನಡೆಸಿದ ಚುನಾವಣೋತ್ತರ ಸಮೀಕ್ಷೆಯಂತೆ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಈ ಬಾರಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ.

ತಮಿಳುನಾಡು(234 ಸ್ಥಾನ, 118 ಮ್ಯಾಜಿಕ್ ನಂಬರ್) 2021 ಎಕ್ಸಿಟ್ ಪೋಲ್ ಫಲಿತಾಂಶ:
ಎಐಎಡಿಎಂಕೆ+: 58-68
ಡಿಎಂಕೆ+: 160-170
ಎಂಎನ್ಎಂ +: 0-2
ಎಎಂಎಂಕೆ+: 4-6
ಇತರೆ: 0

2016ರ ಫಲಿತಾಂಶ , ಶೇಕಡಾವಾರು ಮತ ಗಳಿಕೆ
ಎಐಎಡಿಎಂಕೆ: 134, 41.3%
ಡಿಎಂಕೆ: 89, 32.1%
ಕಾಂಗ್ರೆಸ್: 8, 65%
ಐಉಎಂಎಲ್: 1, 0.7%

ಮಾರ್ಚ್ 27ರಿಂದ ಏಪ್ರಿಲ್ 29ರ ಸಂಜೆ 7ರವರೆಗೂ ಎಕ್ಸಿಟ್ ಪೋಲ್ ಸಮೀಕ್ಷೆಗಳನ್ನು ಪ್ರಕಟಿಸುವಂತಿಲ್ಲ ಎಂದು ಆಯೋಗ ಆದೇಶಿಸಿತ್ತು. ವಿಧಾನಸಭೆ ಚುನಾವಣೆ ಅಥವಾ ಉಪ ಚುನಾವಣೆಯ ಪ್ರತಿ ಹಂತದ ಮತದಾನ ನಡೆದ ಬಳಿಕ ಆಯಾ ಪ್ರದೇಶಕ್ಕೆ ಸಂಬಂಧಿಸಿದಂತೆ 48 ಗಂಟೆಗಳವರೆಗೂ ಎಕ್ಸಿಟ್ ಪೋಲ್ ಅಥವಾ ಬೇರೆ ಯಾವುದೇ ರೀತಿಯ ಚುನಾವಣಾ ಸಮೀಕ್ಷೆಗಳ ಫಲಿತಾಂಶ ಪ್ರಕಟಿಸುವಂತಿಲ್ಲ ಎಂದು ಚುನಾವಣಾ ಆಯೋಗದ ನಿಯಮವಿದೆ.

ಪಶ್ಚಿಮ ಬಂಗಾಳದಲ್ಲಿ 294, ತಮಿಳುನಾಡಿನಲ್ಲಿ 234, ಕೇರಳದಲ್ಲಿ 140, ಪುದುಚೇರಿಯಲ್ಲಿ 30 ಹಾಗೂ ಅಸ್ಸಾಂನಲ್ಲಿ 126 ಸ್ಥಾನಕ್ಕಾಗಿ ಚುನಾವಣೆ ನಡೆಸಲಾಗಿದೆ.

English summary
Check out Tamil Nadu Assembly Elections Republic-CNX Opinion and Exit Poll Results 2021 in Kannada which projects victory for DMK.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X