ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ABP C-Voter Exit Poll: ತಮಿಳುನಾಡಿನಲ್ಲಿ ಡಿಎಂಕೆಗೆ ಜಯ

|
Google Oneindia Kannada News

ಚೆನ್ನೈ, ಏಪ್ರಿಲ್ 29: ತಮಿಳುನಾಡು ವಿಧಾನಸಭೆ ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಹೊರಬಿದ್ದಿದೆ.

ಎಬಿಪಿ ಸಿ-ವೋಟರ್ ಸಮೀಕ್ಷೆ ಫಲಿತಾಂಶ ಹೀಗಿದೆ. ಈ ಬಾರಿ ತಮಿಳುನಾಡಿನಲ್ಲಿ ಡಿಎಂಕೆ ಜಯಭೇರಿ ಭಾರಿಸಲಿದೆ ಎಂದು ಹೇಳಲಾಗಿದೆ.

ಎಐಎಡಿಎಂಕೆಗೆ 58-70 ಸ್ಥಾನಗಳನ್ನು ಪಡೆಯಲಿದೆ, ಡಿಎಂಕೆ 160-172 ಸ್ಥಾನಗಳನ್ನು ಪಡೆಯಲಿದೆ, ಎಂಎನ್‌ಎಂ- ಇಲ್ಲ, ಇತರೆ 0-7 ಸ್ಥಾನಗಳನ್ನು ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ.

Tamil Nadu Assembly Elections ABP C-Voter Exit polls Results 2021

ಎಬಿಪಿ-ಸಿವೋಟರ್‌ ಸಮೀಕ್ಷೆ: ಚುನಾವಣೆ ಘೋಷಣೆಯಾದ ಮರುದಿನವೇ ಸಮೀಕ್ಷೆಯನ್ನು ಪ್ರಕಟಿಸಿದ್ದ ಸಿ-ವೋಟರ್‌, ಈ ಬಾರಿ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಕಾಂಗ್ರೆಸ್‌ 154-162 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ ಎಂದು ಹೇಳಿತ್ತು. ಎಐಎಡಿಎಂಕೆ ಮತ್ತು ಬಿಜೆಪಿ ಈ ಬಾರಿ ಕೇವಲ 58-66 ಸ್ಥಾನಗಳಿಗೆ ತೃಪ್ತಿಪಡೆಬೇಕಾಗುತ್ತದೆ ಎಂದೂ ಹೇಳಿತ್ತು.

ಈ ಬಾರಿಯ ಶೇಕಡವಾರು ಮತಗಳಿಕೆಯಲ್ಲಿಯೂ ಡಿಎಂಕೆ ಮೈತ್ರಿಕೂಟ ಭರ್ಜರಿ ಮುನ್ನಡೆ ಸಾಧಿಸುವ ಸಾಧ್ಯತೆಯನ್ನು ಸಮೀಕ್ಷೆ ಬಿಚ್ಚಿಟ್ಟಿತ್ತು. ಡಿಎಂಕೆಗೆ 41% ಮತಗಳು ಬಿದ್ದರೆ, ಎಐಎಡಿಎಂಕೆಗೆ ಕೇವಲ 21% ಮತಗಳು ಲಭಿಸಲಿವೆ ಎಂದಿತ್ತು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ತಮಿಳುನಾಡಿನಲ್ಲಿ ಕೇವಲ 14 ಸೀಟುಗಳನ್ನು ಡಿಎಂಕೆ ಪಡೆದಿತ್ತು. ಎಐಎಡಿಎಂಕೆ 43 ಸೀಟುಗಳನ್ನು ಪಡೆದಿತ್ತು. ಈ ಪ್ರದೇಶದಲ್ಲಿ ಡಿಎಂಕೆ ತನ್ನ ಪ್ರಾಬಲ್ಯವನ್ನು ಹೆಚ್ಚಿಸುವುದು ಅನಿವಾರ್ಯ. ಅದರಲ್ಲೂ 13 ಸ್ಥಾನಗಳಲ್ಲಿ ಎಐಎಡಿಎಂಕೆ ಕೇವಲ 5% ಮತಗಳ ಅಂತರದಿಂದ ಗೆದ್ದಿದ್ದರೆ, 23 ಕ್ಷೇತ್ರಗಳಲ್ಲಿ ಮತಗಳ ಅಂತರ 7.5%ರಷ್ಟಿತ್ತು.

English summary
Check out Tamil Nadu Assembly Elections ABP C-Voter Opinion and Exit Poll Results 2021 in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X