ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಎನ್ಎಂ ಕಡೆಗೆ ಜನರ ಒಲವು: ಕಮಲ ಹಾಸನ್ ವಿಶ್ವಾಸ

|
Google Oneindia Kannada News

ಚೆನ್ನೈ, ಜನವರಿ 5: ಇದುವರೆಗೂ ಭ್ರಷ್ಟಾಚಾರದಲ್ಲಿ ಮುಳುಗಿದ್ದವರಿಂದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಮಿಳುನಾಡಿನ ಜನತೆ ಬದಲಾವಣೆಯನ್ನು ಬಯಸಿದ್ದಾರೆ. ಅದಕ್ಕೆ ಮಕ್ಕಳ್ ನೀಧಿ ಮಯ್ಯಮ್ ಪಕ್ಷವು ಹೆಚ್ಚು ಸೂಕ್ತವಾಗಿದೆ ಎಂದು ಪಕ್ಷದ ಮುಖ್ಯಸ್ಥ ಕಮಲ ಹಾಸನ್ ಹೇಳಿದ್ದಾರೆ.

ಎಐಎಡಿಎಂಕೆ ಮತ್ತು ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದ ಕಮಲ್ ಹಾಸನ್, ಜನರ ಪ್ರೀತಿ ತಮ್ಮ ಮತ್ತು ತಮ್ಮ ಪಕ್ಷದ ಕಡೆಗೆ ಹೆಚ್ಚುತ್ತಿರುವುದು ಇದಕ್ಕೆ ಸಾಕ್ಷಿ. ಎನ್‌ಎಂಎಂಗೆ ಬೆಂಬಲ ಹೆಚ್ಚುತ್ತಿರುವುದರ ಶ್ರೇಯಸ್ಸು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿರುವ ಅಭ್ಯಾಸ ಹೊಂದಿರುವವರಿಗೆ ಸಲ್ಲುಸುತ್ತದೆ ಎಂದು ಟೀಕಿಸಿದ್ದಾರೆ.

ರಜನಿಕಾಂತ್ ನಿರ್ಧಾರಕ್ಕೆ ನಟ ಕಮಲ್ ಹಾಸನ್ ಪ್ರತಿಕ್ರಿಯೆ...ರಜನಿಕಾಂತ್ ನಿರ್ಧಾರಕ್ಕೆ ನಟ ಕಮಲ್ ಹಾಸನ್ ಪ್ರತಿಕ್ರಿಯೆ...

ತಮಿಳುನಾಡಿನಾದ್ಯಂತ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದು ಆರೋಪಿಸಿದ ಅವರು, ಎಂಎನ್‌ಎಂಗೆ ಮತ ಹಾಕುವ ಮೂಲಕ ಮತದಾರರು ಇಂತಹ ಸನ್ನಿವೇಶವನ್ನು ಬದಲಾಯಿಸಬೇಕು. ಇದಕ್ಕಾಗಿ ಅವರು ಏಪ್ರಿಲ್-ಮೇ ತಿಂಗಳಿನಲ್ಲಿ ಸಿಗುವ ಐತಿಹಾಸಿಕ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

Tamil Nadu Assembly Election 2021: Kamal Haasan Says People Yearning For A Change

'ಜನರು ಈಗ ಬದಲಾವಣೆಗೆ ಬೇಡಿಕೆ ಇರಿಸಲು ಆರಂಭಿಸಿದ್ದಾರೆ. ನೀವು ಬದಲಾವಣೆ ಮಾಡಿ. ಚುನಾವಣೆಗೆ ಇನ್ನು ಮೂರು ತಿಂಗಳು ಮಾತ್ರ ಬಾಕಿ ಇದೆ. ಜನರು ನನ್ನ ಮೇಲೆ ಮತ್ತು ಎಂಎನ್‌ಎಂ ಮೇಲೆ ತೋರಿಸುತ್ತಿರುವ ಪ್ರೀತಿ ಹಾಗೂ ಒಲವು ಉತ್ತಮ ಬದಲಾವಣೆಯು ಮುಂದೆ ಬರಲಿದೆ ಎಂಬುದಕ್ಕೆ ಪುರಾವೆಯಾಗಿದೆ' ಎಂದು ತಿಳಿಸಿದ್ದಾರೆ.

ಎಐಎಡಿಎಂಕೆ ವಿರುದ್ಧ ಲಂಚದ ಪಟ್ಟಿ ಬಿಡುಗಡೆ ಮಾಡಿದ ಕಮಲ್ ಹಾಸನ್ಎಐಎಡಿಎಂಕೆ ವಿರುದ್ಧ ಲಂಚದ ಪಟ್ಟಿ ಬಿಡುಗಡೆ ಮಾಡಿದ ಕಮಲ್ ಹಾಸನ್

ಮಹಿಳೆಯರು ತಮ್ಮ ಪಕ್ಷದ ಸಭೆಗಳಲ್ಲಿ ಮಾತ್ರವೇ ನಿರ್ಭೀತಿಯಿಂದ ಮಾತನಾಡುತ್ತಿದ್ದಾರೆ. ಇದು ತಮಗೆ ದೊಡ್ಡ ಆತ್ಮವಿಶ್ವಾಸ ನೀಡಿದೆ. ಶೀಘ್ರವೇ ರಾಜ್ಯದಾದ್ಯಂತ ಅವರ ಸುರಕ್ಷತೆ ಮತ್ತು ಭದ್ರತೆಯನ್ನು ಕಾಪಾಡುವ ಕರ್ತವ್ಯ ತಮ್ಮದಾಗಲಿದೆ. ಅದರ ಸೂಚನೆಗಳನ್ನು ತಾವು ಕಾಣುತ್ತಿರುವುದಾಗಿ ಹೇಳಿದ್ದಾರೆ.

English summary
Tamil Nadu Assembly Election 2021: MNM chief Kamal Haasan said people of Tamil Nadu were yearning for a change from whose who indulged in corruption.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X