ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಮಲ್ ಹಾಸನ್‌ಗೆ ತೀವ್ರ ನಿರಾಸೆ: ಅಂತಿಮ ಸುತ್ತಿನಲ್ಲಿ ಸೋಲು

|
Google Oneindia Kannada News

ತಮಿಳುನಾಡು ವಿಧಾನಸಭೆ ಚುನಾವಣೆ ಪ್ರಚಾರ ಸಮಯದಲ್ಲಿ ಗಮನ ಸೆಳೆದಿದ್ದ ಕಮಲ್ ಹಾಸನ್‌ ಸ್ಥಾಪಿತ ಹೊಸ ಪಕ್ಷ 'ಮಕ್ಕಳ್ ನಿಧಿ ಮಯಂ' ಫಲಿತಾಂಶದಲ್ಲಿ ಗುರುತು ಮೂಡಿಸಲು ವಿಫಲವಾಗಿದೆ.

ಸ್ವತಃ ಕಮಲ್ ಹಾಸನ್ ಸೇರಿದಂತೆ ಪಕ್ಷದ ಯಾವೊಬ್ಬ ಅಭ್ಯರ್ಥಿ ಸಹ ಚುನಾವಣೆಯಲ್ಲಿ ಗೆಲುವು ಸಾಧಿಸಲು ವಿಫಲರಾಗಿದ್ದಾರೆ. ಅಂತಿಮ ಸುತ್ತಿನವರೆಗೂ ಮುನ್ನಡೆಯಲ್ಲಿದ್ದ ಕಮಲ್ ಹಾಸನ್ ಗೆಲುವಿನ ನಿರೀಕ್ಷೆ ಹುಟ್ಟಿಸಿದ್ದರಾದರೂ ಅಂತಿಮವಾಗಿ ಅವರೂ ಸೋಲು ಕಂಡಿದ್ದಾರೆ.

ಕಮಲ್ ಹಾಸನ್ ಅವರ ಮಕ್ಕಳ್ ನಿಧಿ ಮಯಂ ಪಕ್ಷವು 193 ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಿತ್ತು. ಕಮಲ್ ಹಾಸನ್ ಅವರು ಕೊಯಂಬತ್ತೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆರಂಭದ ಕೆಲವು ಸುತ್ತುಗಳ ಮತ ಎಣಿಕೆ ಬಳಿಕ ಮುನ್ನಡೆ ಸಾಧಿಸಿದ್ದ ಕಮಲ್ ಹಾಸನ್ ಕೊನೆಯ ಸುತ್ತಿನಲ್ಲಿ ಸೋಲನುಭವಿಸಿದ್ದಾರೆ.

 Tamil Nadu Assembly Election 2021: Kamal Haasan Lose In A Close Fight

ಅಂತಿಮ ಮತ ಎಣಿಕೆ ಮುಗಿದಾಗ ಕಮಲ್ ಹಾಸನ್ 49,561 ಮತಗಳನ್ನು ಪಡೆದಿದ್ದರೆ ಬಿಜೆಪಿಯ ಅಭ್ಯರ್ಥಿ ವನತಿ ಶ್ರೀನಿವಾಸ್ 50,798 ಮತಗಳನ್ನು ಪಡೆದು ಜಯಗಳಿಸಿದ್ದಾರೆ. 1237 ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ. ಕಾಂಗ್ರೆಸ್‌ನ ಮಯೂರ ಜಯಕುಮಾರ್ 41,081 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.

'ಮಕ್ಕಳ್ ನಿಧಿ ಮಯಂ' ಪಕ್ಷವು 2019 ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಿಂದ ಸ್ಪರ್ಧಿಸಿತ್ತು ಆದರೆ ಆಗಲೂ ಯಾವೊಬ್ಬ ಅಭ್ಯರ್ಥಿಯೂ ಸಹ ಜಯ ಸಾಧಿಸಿರಲಿಲ್ಲ. ಈಗ ವಿಧಾನಸಭೆ ಚುನಾವಣೆಯಲ್ಲಿ ಕೆಲವು ಸೀಟಾದರೂ ಗೆಲ್ಲುವ ನಿರೀಕ್ಷೆ ಇದೆಯೆಂದು ಕಮಲ್ ಹಾಸನ್ ಹೇಳಿದ್ದರು ಆದರೆ ಅದೂ ಸುಳ್ಳಾಗಿದೆ.

English summary
Actor, politician Kamal Haasan lose in a close fight in Tamil Nadu assembly election 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X