• search
 • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಮಿಳುನಾಡು ಚುನಾವಣೆಯಲ್ಲಿ ನಟ-ನಟಿಯರು: ಗೆದ್ದವರೆಷ್ಟು?

|

ತಮಿಳುನಾಡಿನಲ್ಲಿ ಸಿನಿಮಾ ಹಾಗೂ ರಾಜಕೀಯ ಬೇರೆ-ಬೇರೆ ಅಲ್ಲ. ಸಿನಿಮಾ ನಟರಾಗಿ ಜನಪ್ರಿಯರಾದವರು ರಾಜ್ಯದ ಮುಖ್ಯಮಂತ್ರಿಗಳಾಗಿ ಬಹುಕಾಲ ಆಳಿದ ದೊಡ್ಡ ಇತಿಹಾಸ ತಮಿಳುನಾಡಿನಲ್ಲಿದೆ.

ಸಿನಿಮಾ ತಾರೆಯರು ರಾಜಕೀಯ ಪಕ್ಷ ಕಟ್ಟಿ ಚುನಾವಣೆ ಎದುರಿಸುವ, ಬೇರೊಂದು ರಾಜಕೀಯ ಪಕ್ಷದೊಟ್ಟಿಗೆ ಗುರುತಿಸಿಕೊಂಡು ರಾಜಕೀಯ ಭವಿಷ್ಯ ಅರಸುವುದು ತಮಿಳುನಾಡಿನಲ್ಲಿ ಬಹಳ ಸಾಮಾನ್ಯ.

ಕೇರಳ ಚುನಾವಣೆ: ಗೆದ್ದ-ಬಿದ್ದ ಸಿನಿ ತಾರೆಯರು ಯಾರ್ಯಾರು?ಕೇರಳ ಚುನಾವಣೆ: ಗೆದ್ದ-ಬಿದ್ದ ಸಿನಿ ತಾರೆಯರು ಯಾರ್ಯಾರು?

ನಿನ್ನೆಯಷ್ಟೆ ತಮಿಳುನಾಡು ವಿಧಾನಸಭೆ ಚುನಾವಣೆ ಫಲಿತಾಂಶ ಬಂದಿದೆ. ಸ್ಟ್ಯಾಲಿನ್ ನೇತೃತ್ವದ ಡಿಎಂಕೆ ಪಕ್ಷವು ಬಹುಮತ ಪಡೆದಿದ್ದು ಆಡಳಿತಾರೂಢ ಎಐಎಡಿಎಂಕೆ ಪಕ್ಷಕ್ಕೆ ಸೋಲಾಗಿದೆ. ಆದರೆ ಈ ಬಾರಿ ಚುನಾವಣೆಗೆ ಯಾರ್ಯಾರು ಸಿನಿಮಾ ತಾರೆಯರು ಸ್ಪರ್ಧಿಸಿದ್ದರು, ಅದರಲ್ಲಿ ಗೆಲುವು ಎಷ್ಟು ಜನರ ಪಾಲಾಯಿತು? ಇಲ್ಲಿದೆ ಪಟ್ಟಿ.

ಪಶ್ಚಿಮ ಬಂಗಾಳ: ಕಣಕ್ಕಿಳಿದ ಸಿನಿ ತಾರೆಯರಲ್ಲಿ ಗೆದ್ದವರೆಷ್ಟು?ಪಶ್ಚಿಮ ಬಂಗಾಳ: ಕಣಕ್ಕಿಳಿದ ಸಿನಿ ತಾರೆಯರಲ್ಲಿ ಗೆದ್ದವರೆಷ್ಟು?

ಕಮಲ್‌ ಹಾಸನ್‌ಗೆ ನಿರಾಸೆ

ಕಮಲ್‌ ಹಾಸನ್‌ಗೆ ನಿರಾಸೆ

ದೊಡ್ಡ ರಾಜಕೀಯ ಮಹಾತ್ವಾಕಾಂಕ್ಷೆಯೊಂದಿಗೆ ಸ್ವಂತ ಪಕ್ಷ ಸ್ಥಾಪಿಸಿ ಚುನಾವಣೆಗೆ ಧುಮುಕಿದ್ದ ನಟ ಕಮಲ್ ಹಾಸನ್‌ಗೆ ತೀವ್ರ ನಿರಾಸೆಯಾಗಿದೆ. ಕಮಲ್‌ರ 'ಮಕ್ಕಳ ನಿಧಿ ಮಯಂ' ಪಕ್ಷದ ಯಾವೊಬ್ಬ ಅಭ್ಯರ್ಥಿಯೂ ಚುನಾವಣೆಯಲ್ಲಿ ಗೆದ್ದಿಲ್ಲ. ಸ್ವತಃ ಕಮಲ್‌ಗೆ ತೀವ್ರ ನಿರಾಸೆಯಾಗಿದ್ದು ಕೊಯಂಬತ್ತೂರು ದಕ್ಷಿಣ ಕ್ಷೇತ್ರದದಲ್ಲಿ 1540 ಮತಗಳ ಅಂತರದಿಂದ ಸೋಲುಂಡಿದ್ದಾರೆ.

ಖುಷ್ಬು ಸುಂದರ್‌ಗೆ ಸೋಲು

ಖುಷ್ಬು ಸುಂದರ್‌ಗೆ ಸೋಲು

ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಖುಷ್ಬು ಸುಂದರ್ ಬಿಜೆಪಿ ಅಭ್ಯರ್ಥಿಯಾಗಿ ಥೌಂಸಡ್ಸ್ ಲೈಟ್ಸ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಖುಷ್ಬು ಇಲ್ಲಿ ಸೋಲನುಭವಿಸಿದ್ದಾರೆ. ಖುಷ್ಬು ಅವರಿಗೆ ಇಲ್ಲಿ ಎರಡನೇ ಸ್ಥಾನ ಡಿಎಂಕೆ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಖುಷ್ಬು ಮೊದಲು ಕಾಂಗ್ರೆಸ್‌ನಲ್ಲಿದ್ದರು. ಅಲ್ಲಿಂದ ಬಿಜೆಪಿಗೆ ಸೇರ್ಪಡೆಯಾಗಿ ಈಗ ಸೋಲನುಭವಿಸಿದ್ದಾರೆ.

ಉದಯನಿಧಿ ಸ್ಟ್ಯಾಲಿನ್‌ಗೆ ಭಾರಿ ಗೆಲುವು

ಉದಯನಿಧಿ ಸ್ಟ್ಯಾಲಿನ್‌ಗೆ ಭಾರಿ ಗೆಲುವು

ತಮಿಳಿನ ಯುವ ನಾಯಕ, ಭಾವಿ ಸಿಎಂ ಸ್ಟ್ಯಾಲಿನ್ ಅವರ ಪುತ್ರ ಉದಯನಿಧಿ ಸ್ಟ್ಯಾಲಿನ್ ಅವರು ತಮ್ಮ ತಾತನ ಕ್ಷೇತ್ರ ಚೆಪಾಕ್‌ನಿಂದ ಸ್ಪರ್ಧಿಸಿ ಭಾರಿ ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಉದಯನಿಧಿ ಸ್ಟ್ಯಾಲಿನ್ ಎದುರು ಸ್ಪರ್ಧಿಸಿದ್ದ ಎಲ್ಲರೂ ಠೇವಣಿ ಕಳೆದುಕೊಂಡಿದ್ದಾರೆ!

  Corona ಕಡಿಮೆಯಾಗಿದೆ ಎಂದು ವರದಿಯಾಗಲು ಇದೇ ಕಾರಣ | Oneindia Kannada
  ಶ್ರೀಪ್ರಿಯ, ಸ್ನೇಹನ್‌ಗೆ ಸೋಲು

  ಶ್ರೀಪ್ರಿಯ, ಸ್ನೇಹನ್‌ಗೆ ಸೋಲು

  ತಮಿಳಿನ ಹಿರಿಯ ನಟಿ ಶ್ರೀಪ್ರಿಯ ಕಮಲ್ ಹಾಸನ್ ಅವರ ಮಕ್ಕಳ ನಿಧಿ ಮಯಂ ಪಕ್ಷದಿಂದ ಚೆನ್ನೈನ ಮೈಲಾಪೋರ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ನಟ, ಗೀತರಚನೆಕಾರ ಸ್ನೇಹನ್ ಸಹ ಕಮಲ್ ಪಕ್ಷದಿಂದಲೇ ವಿರುಗಂಬಕ್ಕಮ್ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದಾರೆ.

  English summary
  Tamil Nadu assembly election 2021: Some movie stars contested in Tamil Nadu assembly election, here is the list of who won and who loose.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X