ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು ಚುನಾವಣಾ ಪೂರ್ವ ಸಮೀಕ್ಷೆ; ಬಿಜೆಪಿಗೆ ನಿರಾಸೆ!

|
Google Oneindia Kannada News

ಚೆನ್ನೈ, ಫೆಬ್ರವರಿ 28: ಕೇಂದ್ರ ಚುನಾವಣಾ ಆಯೋಗ ತಮಿಳುನಾಡು ರಾಜ್ಯದ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. 234 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಏಪ್ರಿಲ್ 6ರಂದು ಮತದಾನ ನಡೆಯಲಿದೆ. ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.

ಚುನಾವಣೆ ಘೋಷಣೆಯಾದ ತಕ್ಷಣ ಚುನಾವಣಾ ಪೂರ್ವ ಸಮೀಕ್ಷೆಗಳು ಸಹ ಪ್ರಕಟವಾಗಿವೆ. ಎಬಿಪಿ ಸಿ-ವೋಟರ್ ತಮಿಳುನಾಡು ಸೇರಿದಂತೆ ಚುನಾವಣೆ ಘೋಷಣೆಯಾದ ರಾಜ್ಯಗಳ ಸಮೀಕ್ಷೆಯನ್ನು ನಡೆಸಿದೆ.

ತಮಿಳುನಾಡು ಚುನಾವಣೆ:ಎಐಎಡಿಎಂಕೆ,ಬಿಜೆಪಿಯಿಂದ ಸ್ಥಾನ ಹಂಚಿಕೆ ಕುರಿತು ಮಾತುಕತೆ ತಮಿಳುನಾಡು ಚುನಾವಣೆ:ಎಐಎಡಿಎಂಕೆ,ಬಿಜೆಪಿಯಿಂದ ಸ್ಥಾನ ಹಂಚಿಕೆ ಕುರಿತು ಮಾತುಕತೆ

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಅಧಿಕಾರ ಹಿಡಿಯಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ. ಇದರಿಂದಾಗಿ ದಕ್ಷಿಣದ ರಾಜ್ಯಗಳಲ್ಲಿ ಅಧಿಕಾರ ಹಿಡಿಯುವ ಬಿಜೆಪಿಯ ಕನಸಿಗೆ ಮತ್ತೆ ಹಿನ್ನಡೆಯಾಗಿದೆ.

ತಮಿಳುನಾಡು ಚುನಾವಣೆ: ಮತದಾನ, ಫಲಿತಾಂಶ ಯಾವಾಗ?ತಮಿಳುನಾಡು ಚುನಾವಣೆ: ಮತದಾನ, ಫಲಿತಾಂಶ ಯಾವಾಗ?

ಬಿಜೆಪಿ ತಮಿಳುನಾಡು ರಾಜ್ಯದ ವಿಧಾನಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಪ್ರಚಾರವನ್ನು ಆರಂಭಿಸಿದ್ದಾರೆ.

ತಮಿಳುನಾಡು ಚುನಾವಣೆ ದಿನಾಂಕ ನಿಗದಿ ಮೊದಲೇ ತಮಿಳುನಾಡು ಚುನಾವಣೆ ದಿನಾಂಕ ನಿಗದಿ ಮೊದಲೇ

ಮೈತ್ರಿಯಿಂದ ಮತಗಳಿಕೆ ಹೆಚ್ಚಳ

ಮೈತ್ರಿಯಿಂದ ಮತಗಳಿಕೆ ಹೆಚ್ಚಳ

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಎಐಎಡಿಎಂಕೆ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲಿದೆ. ಇದರಿಂದಾಗಿ ಪಕ್ಷದ ವರ್ಚಸ್ಸು ಹೆಚ್ಚಾಗಲಿದೆ. ಆದರೆ, ಅಧಿಕಾರ ಪಡೆಯಲು ಸಾಧ್ಯವಿಲ್ಲ ಎಂದು ಎಬಿಪಿ ಸಿ-ವೋಟರ್ ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ.

ಮೈತ್ರಿಕೂಟಕ್ಕೆ ಎಷ್ಟು ಸೀಟು?

ಮೈತ್ರಿಕೂಟಕ್ಕೆ ಎಷ್ಟು ಸೀಟು?

ಎಬಿಪಿ ಸಿ-ವೋಟರ್ ಸಮೀಕ್ಷೆ ಪ್ರಕಾರ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಕೂಟ ವಿಧಾನಸಭೆ ಚುನಾವಣೆಯಲ್ಲಿ 56-66 ಸ್ಥಾನಗಳಲ್ಲಿ ಜಯಗಳಿಸಲಿದೆ. ಪ್ರಸ್ತುತ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಎಐಎಡಿಎಂಕೆ ಅಧಿಕಾರವನ್ನು ಕಳೆದುಕೊಳ್ಳಲಿದೆ.

ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟ

ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟ

ಎಬಿಪಿ ಸಿ-ವೋಟರ್ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟ ರಾಜ್ಯದಲ್ಲಿ ಅಧಿಕಾರ ಹಿಡಿಯಲಿದೆ. ಮೈತ್ರಿಕೂಟಕ್ಕೆ 154-162 ಸ್ಥಾನಗಳು ಲಭ್ಯವಾಗಲಿವೆ. ಇತರೆ ಪಕ್ಷದವರು 8-20 ಸ್ಥಾನದಲ್ಲಿ ಜಯಗಳಿಸಬಹುದು ಎಂದು ವರದಿ ಹೇಳಿದೆ.

ಸೀಟು ಹಂಚಿಕೆ ಲೆಕ್ಕಾಚಾರ

ಸೀಟು ಹಂಚಿಕೆ ಲೆಕ್ಕಾಚಾರ

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಎಐಎಡಿಎಂಕೆ ಲೆಕ್ಕಾಚಾರ ತಲೆನೋವಾಗಿದೆ. ರಾಮದಾಸ್ ಸ್ಥಾಪಿತ ಎಐಎಡಿಎಂಕೆ ಅಂಗಪಕ್ಷ ಪಿಎಂಕೆ ಉತ್ತರ ತಮಿಳುನಾಡು ಭಾಗದಲ್ಲಿ ಪ್ರಬಲವಾಗಿದೆ. ಈ ಪಕ್ಷಕ್ಕೆ 10 ರಿಂದ 15 ಕ್ಷೇತ್ರ ಬಿಟ್ಟುಕೊಡಲು ಎಐಎಡಿಎಂಕೆ ಚಿಂತಿಸಿತ್ತು. ಆದರೆ, ಪಕ್ಷ 25 ಕ್ಷೇತ್ರಗಳಿಗಾಗಿ ಬೇಡಿಕೆ ಇಟ್ಟಿದೆ. ಮತ್ತೊಂದು ಕಡೆ ಬಿಜೆಪಿ 60 ಸ್ಥಾನಗಳನ್ನು ನೀಡಬೇಕು ಎಂದು ಮನವಿ ಮಾಡಿದೆ.

English summary
ABP, C-voter Tamil Nadu assembly election 2021 pre poll survey announced. DMK and Congress alliance will get 154 to 162 and AIADMK-BJP alliance to bag 56-66 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X