ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು: ವಿವಿಗಳಿಗೆ ಕುಲಪತಿ ನೇಮಕ ಮಾಡುವ ರಾಜ್ಯಪಾಲರ ಅಧಿಕಾರ ಮೊಟಕು

|
Google Oneindia Kannada News

ಚೆನ್ನೈ, ಏಪ್ರಿಲ್ 27: ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ನೇಮಕ ಮಾಡುವ ಅಧಿಕಾರವು ಸರ್ಕಾರದ ಹೊಣೆಯಾಗಿರುತ್ತದೆ ಎಂದು ಸೋಮವಾರ ತಮಿಳುನಾಡು ಸರ್ಕಾರವು ವಿಧಾನಸಭೆಯಲ್ಲಿ ಎರಡು ಮಹತ್ವದ ವಿಧೇಯಕಗಳನ್ನು ಅಂಗೀಕರಿಸಿದೆ.

ಈ ಮೂಲಕ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಕ ಮಾಡುವ ಅಧಿಕಾರ ವಿಶ್ವವಿದ್ಯಾಲಯಗಳ ಕುಲಾಧಿಪತಯೂ ಆಗಿರುವ ರಾಜ್ಯಪಾಲರಿಗೆ ಇದ್ದ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ.

'ರಾಜ್ಯಪಾಲರು ರಾಜ್ಯದಲ್ಲಿನ ವಿಶ್ವವಿದ್ಯಾನಿಲಯಗಳ ಕುಲಾಧಿಪತಿಯಾಗಿ, ತಜ್ಞರ ಸಮಿತಿಗಳ ಶಿಫಾರಸಿನ ಮೇರೆಗೆ ಉಪಕುಲಪತಿಗಳನ್ನು ನೇಮಿಸಬಹುದಿತ್ತು. ಆದರೆ, ಕುಲಪತಿಗಳ ನೇಮಕದಲ್ಲಿ ಇರುವ ಅಸಮರ್ಥತೆ ಉನ್ನತ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ. ಪ್ರಧಾನಿಯವರ ತವರು ರಾಜ್ಯ ಗುಜರಾತ್‌ ಸಹಿತ ಹಲವು ರಾಜ್ಯಗಳು ಈಗಾಗಲೇ ತಮ್ಮ ರಾಜ್ಯಗಳ ವಿಶ್ವವಿದ್ಯಾಲಯಕ್ಕೆ ಕುಲಪತಿಗಳನ್ನು ಸರ್ಕಾರಕ್ಕೇ ನೇಮಿಸುವ ಅಧಿಕಾರ ಹೊಂದಿವೆ' ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸದನದಲ್ಲಿ ಹೇಳಿದ್ದಾರೆ.

 Tamil Nadu Assembly adopts two Bills to reduce powers of Governor

ಗುಜರಾತ್‌ನಲ್ಲಿ 1949ರಿಂದಲೂ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ಆಯ್ಕೆ ಮಾಡುವ ಅಧಿಕಾರ ಮುಖ್ಯಮಂತ್ರಿಗೆ ಇದೆ. ಕಳೆದ ವರ್ಷವು ಮಹಾರಾಷ್ಟ್ರದಲ್ಲಿ ಈ ವಿಷಯದ ಬಗ್ಗೆ ಇದೇ ರೀತಿಯ ಮಸೂದೆಯನ್ನು ಅಂಗೀಕರಿಸಲಾಗಿದೆ ಎಂದು ವಿವರಿಸಿದರು.

ತಮಿಳುನಾಡಿನಲ್ಲಿ 13 ಸರ್ಕಾರಿ ವಿಶ್ವವಿದ್ಯಾಲಯಗಳಿವೆ ಮತ್ತು ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಹೊಣೆ ಹೊತ್ತಿರುವ ರಾಜ್ಯ ಸರ್ಕಾರವು ಕುಲಪತಿಗಳನ್ನು ನೇಮಿಸುವ ಅಧಿಕಾರವನ್ನು ಹೊಂದಿಲ್ಲದಿರುವುದು ಹೆಚ್ಚಿನ ಪರಿಣಾಮ ಬೀರುತ್ತಿದೆ ಎಂದು ಸ್ಟಾಲಿನ್ ತಮಿಳುನಾಡು ವಿಧಾನಸಭೆಯ ತಮ್ಮ ಭಾಷಣದಲ್ಲಿ ಹೇಳಿದರು.

 Tamil Nadu Assembly adopts two Bills to reduce powers of Governor

'ಉಪಕುಲಪತಿಗಳ ನೇಮಕ ಮಾಡುವ ಕುರಿತು ರಾಜ್ಯಪಾಲರು ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ' ಸರ್ಕಾರದ ಜೊತೆ ಸಮಾಲೋಚಿಸುವ ಪರಿಪಾಠವು ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿದೆ. ವಿಶೇಷವಾಗಿ ಕಳೆದ ನಾಲ್ಕು ವರ್ಷಗಳಿಂದ ವಿಸಿ ನೇಮಕದಲ್ಲಿ ರಾಜ್ಯಪಾಲರು ವಿಶೇಷ ಅಧಿಕಾರ ಎಂಬಂತೆ ವರ್ತಿಸುತ್ತಿದ್ದಾರೆ. ಉನ್ನತ ಶಿಕ್ಷಣ ನೀಡುವ ಕೆಲಸವನ್ನು ಹೊಂದಿರುವ ಸರಕಾರವನ್ನು ಗೌರವಿಸದ ಈ ಚಟ ಎದ್ದು ಕಾಣುತ್ತಿದೆ,' ಎಂದು ಸ್ಟಾಲಿನ್ ವಿಧಾನಸಭೆಯಲ್ಲಿ ರಾಜ್ಯಪಾಲರ ವಿರುದ್ಧ ಗುಡುಗಿದರು.

English summary
Tamil Nadu Assembly adopts two Bills to reduce powers of Governor in appointing Vice chancellors to 13 universities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X