ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು: ಟಾಮ್‌ನ ನೆನಪಿಗಾಗಿ ಪ್ರತಿಮೆ ನಿರ್ಮಿಸಿದ 82 ವರ್ಷದ ವ್ಯಕ್ತಿ

|
Google Oneindia Kannada News

ಚೆನ್ನೈ ಏಪ್ರಿಲ್ 5: ಸಾಕು ಪ್ರಾಣಿಗಳು ಅಂದರೆ ಯಾರಿಗೆ ತಾನೆ ಇಷ್ಟ ಆಗೋದಿಲ್ಲ ಹೇಳಿ. ಅವುಗಳ ಮುಗ್ಧತೆ, ತುಂಟಾಟ, ಪ್ರೀತಿಗೆ ಮಾರು ಹೋಗದವರಿಲ್ಲ. ಅದರಲ್ಲೂ ಸಾಕು ಪ್ರಾಣಿಗಳಲ್ಲಿ ನಾಯಿಗಳೆಂದರೆ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿ ಮಾಡುವವರು ನಮ್ಮ ನಡುವೆ ಇದ್ದಾರೆ. ಮನಷ್ಯರಿಗಿಂತಲೂ ಚೆನ್ನಾಗಿ ನೋಡಿಕೊಂಡು ಅದರ ಪೋಷಣೆ ಮಾಡುವಂತವರು ಹೆಚ್ಚಾಗಿ ಕಾಣಸಿಗುತ್ತಾರೆ. ಆದರೆ ಸಾಕು ಪ್ರಾಣಿಗಳನ್ನ ಎಷ್ಟೇ ಪ್ರೀತಿಸುತ್ತಿದ್ದರೂ ಅವುಗಳ ಅಗಲಿಕೆಯ ನಂತರ ಅವುಗಳನ್ನು ನೆನಪಿಸಿಕೊಳ್ಳುವವರು ತುಂಬಾ ವಿರಳ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಪ್ರೀತಿಯ ಸಾಕು ನಾಯಿ ಅಗಲಿಕೆದ ನಂತರ ಅದರ ಪ್ರತಿಮೆಯನ್ನು ನಿರ್ಮಿಸಿ ನಿತ್ಯ ಪೂಜೆ ಮಾಡುತ್ತಾರೆ.

ತಮಿಳುನಾಡಿನ 82 ವರ್ಷದ ಮುತ್ತು ತನ್ನ ಇತ್ತೀಚೆಗೆ ಸತ್ತುಹೋದ ತನ್ನ ನಾಯಿ ಟಾಮ್ ನೆನಪಿಗಾಗಿ ಅಮೃತಶಿಲೆಯ ಪ್ರತಿಮೆಯನ್ನು ನಿರ್ಮಿಸಿದ್ದಾರೆ. ಶಿವಗಂಗೆಯ ಮನಮದುರೈನಲ್ಲಿ ಸ್ಥಾಪಿಸಿರುವ ಈ ಪ್ರತಿಮೆಗೆ ನಿವೃತ್ತ ಸರ್ಕಾರಿ ನೌಕರ ಮುತ್ತು ಬರೋಬ್ಬರಿ 80,000 ರೂ. ಖರ್ಚು ಮಾಡಿದ್ದಾರೆ.

Tamil nadu: 82-year-old man built a temple in the memory of his late dog named Tom

"ನನಗೆ ನನ್ನ ಮಗುವಿಗಿಂತ ಹೆಚ್ಚಾಗಿ ನನ್ನ ನಾಯಿಯ ಮೇಲೆ ಪ್ರೀತಿ ಇದೆ. ಟಾಮ್ 2010 ರಿಂದ ನನ್ನೊಂದಿಗೆ ಇದ್ದನು. ಆದರೆ ಕಳೆದ ಜನವರಿಯಲ್ಲಿ ನಿಧನ ಹೊಂದಿದೆ. ನನ್ನ ಅಜ್ಜಿ ಮತ್ತು ತಂದೆ ಎಲ್ಲರೂ ನಾಯಿ ಪ್ರೇಮಿಗಳು" ಎಂದು 82 ವರ್ಷದ ಶ್ವಾನ ಪ್ರೇಮಿ ಮುತ್ತು ಹೇಳುತ್ತಾರೆ. ಈ ದಿವಂಗತ ಲ್ಯಾಬ್ರಡಾರ್ನ ಟಾಮಿಯ ಅಮೃತಶಿಲೆಯ ಪ್ರತಿಮೆಯನ್ನು ಈ ವರ್ಷದ ಜನವರಿಯಲ್ಲಿ ಸ್ಥಾಪಿಸಲಾಯಿತು.

ವಿಡಿಯೋ: 'ನಾಗ'ಪ್ಪನ್ನು ಕೆಣಕಿ ಆಸ್ಪತ್ರೆ ಹಾಸಿಗೆ ಹಿಡಿದ ಸಾಯದ್!ವಿಡಿಯೋ: 'ನಾಗ'ಪ್ಪನ್ನು ಕೆಣಕಿ ಆಸ್ಪತ್ರೆ ಹಾಸಿಗೆ ಹಿಡಿದ ಸಾಯದ್!

Tamil nadu: 82-year-old man built a temple in the memory of his late dog named Tom

ಮುತ್ತು ಅವರ ಸೋದರಳಿಯ ಮನೋಜ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, "ಟಾಮ್ ಅನ್ನು ನನ್ನ ಸಹೋದರ ಅರುಣ್ ಕುಮಾರ್ 11 ವರ್ಷಗಳ ಹಿಂದೆ ಖರೀದಿಸಿದ್ದರು. ಆದರೆ ಅದನ್ನು ನಮ್ಮೊಂದಿಗೆ ಇಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ಆದ್ದರಿಂದ ನಾವು ಆರು ತಿಂಗಳ ನಂತರ ಅವನನ್ನು ನಮ್ಮ ಮಾವನಿಗೆ ಒಪ್ಪಿಸಿದ್ದೆವು. ಟಾಮ್ ಅವರ ಒಡನಾಡಿಯಾಗಿದ್ದನು. ಇಬ್ಬರ ನಡುವೆ ಪರಸ್ಪರ ಪ್ರೀತಿ ಬೇರ್ಪಡಿಸಲಾಗದಷ್ಟು ಹೆಚ್ಚಾಗಿತ್ತು. ಆದರೆ ಟಾಮ್ ಕಳೆದ ವರ್ಷ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಚಿಕಿತ್ಸೆಗೆ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ. ಜನವರಿ 2022 ರಲ್ಲಿ ನಿಧನ ಹೊಂದಿತು. ಮುತ್ತು ಅವರು ನಾಯಿಯೊಂದಿಗೆ ಸುಮಾರು 11 ವರ್ಷಗಳನ್ನು ಕಳೆದರು" ಎಂದು ಅವರು ಹೇಳಿದರು.

Tamil nadu: 82-year-old man built a temple in the memory of his late dog named Tom

ನಾಯಿಯ ಮರಣದ ನಂತರ, ವಯಸ್ಸಾದ ವ್ಯಕ್ತಿ ತನ್ನ ಪ್ರೀತಿಯ ನಾಯಿಗಾಗಿ ಮನಮದುರೈ ಬಳಿಯ ಕೃಷಿಭೂಮಿಯಲ್ಲಿ ಸಣ್ಣ ದೇವಾಲಯವನ್ನು ಸ್ಥಾಪಿಸಿದರು. ವರದಿಗಳ ಪ್ರಕಾರ, ಅಮೃತಶಿಲೆಯ ಪ್ರತಿಮೆಯನ್ನು ನಿರ್ಮಿಸಲು ಅವರು ತಮ್ಮ ಜೀವನದ ಉಳಿತಾಯದಿಂದ 80,000 ರೂ. ಖರ್ಚು ಮಾಡಿದ್ದಾರೆ. ದೇವಾಲಯವು ಎಲ್ಲರಿಗೂ ತೆರೆದಿರುತ್ತದೆ ಮತ್ತು ನಾಯಿಯ ಪ್ರತಿಮೆಗೆ ಪ್ರತಿದಿನ ನೈವೇದ್ಯವನ್ನು ಮಾಡಲಾಗುತ್ತದೆ. ವಿಶೇಷ ಸಂದರ್ಭಗಳಲ್ಲಿ ನಾಯಿಯ ನೆಚ್ಚಿನ ಆಹಾರವನ್ನು ನೈವೇದ್ಯಕ್ಕೆ ಇಡಲಾಗುತ್ತದೆ.

English summary
Muthu, an 82-year-old retired government employee has built a temple in the memory of his late dog named Tom in Sivaganga's Manamadurai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X