ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳು ಕೂಡಾ ದೇವರ ಭಾಷೆ ಎಂದ ಮದ್ರಾಸ್ ಹೈಕೋರ್ಟ್

|
Google Oneindia Kannada News

ಚೆನ್ನೈ, ಸೆ.13: ತಮಿಳುನಾಡಿನ ಹಿಂದೂ ದೇವಾಲಯಗಳಲ್ಲಿ ತಮಿಳು ಭಾಷೆಯಲ್ಲಿ ಅರ್ಚನೆ ಮಾಡುವುದರ ಬಗ್ಗೆ ಸರ್ಕಾರ ನೀಡಿರುವ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿ ಸಲ್ಲಿಸಿದ್ದ ಪ್ರಕರಣ ನೆನಪಿರಬಹುದು. ಸಂಸ್ಕೃತವಲ್ಲದೆ, ತಮಿಳಿನಲ್ಲೂ ಪೂಜೆ ಮಾಡಲು ತಮಿಳುನಾಡು ಧಾರ್ಮಿಕ ಮತ್ತು ದತ್ತಿ ಇಲಾಖೆ ಸೂಚಿಸಿರುವುದಕ್ಕೆ ಎಂದು ಆಕ್ಷೇಪಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಲು ಮದ್ರಾಸ್‌ ಹೈಕೋರ್ಟ್‌ ನಿರಾಕರಿಸಿತ್ತು. ಈಗ ದೇವರ ಭಾಷೆ ಬಗ್ಗೆ ಮದ್ರಾಸ್ ಹೈಕೋರ್ಟ್ ತನ್ನ ಅಭಿಪ್ರಾಯ ಪ್ರಕಟಿಸಿದೆ.

ತಮಿಳನ್ನು ದೇವರ ಭಾಷೆ ಎಂದು ಮದ್ರಾಸ್ ಹೈಕೋರ್ಟ್ ಕೊಂಡಾಡಿದೆ. ದೇಶದಾದ್ಯಂತ ದೇವಾಲಯದ ಪವಿತ್ರೀಕರಣಗಳನ್ನು ಅಳ್ವಾರ್, ಅರುಣಗಿರಿನಾಥರ್ ಮತ್ತು ನಾಯನ್ಮಾರ್ ಗಳಂತಹ ಸಂತರು ರಚಿಸಿದ ತಮಿಳು ಸ್ತೋತ್ರಗಳನ್ನು ಪಠಿಸಬೇಕು ಎಂದು ಹೇಳಿದೆ. ತಮಿಳು ಪ್ರಪಂಚದ ಪ್ರಾಚೀನ ಭಾಷೆಗಳಲ್ಲಿ ಒಂದು ಮಾತ್ರವಲ್ಲದೇ ದೇವರ ಭಾಷೆ ಕೂಡ ಆಗಿದೆ.

ದೇವರಿಗೆ ಅರ್ಚನೆಗೆ ತಮಿಳು ಮಂತ್ರ ಬಳಕೆ ತಪ್ಪೇನಿಲ್ಲ: ಕೋರ್ಟ್ದೇವರಿಗೆ ಅರ್ಚನೆಗೆ ತಮಿಳು ಮಂತ್ರ ಬಳಕೆ ತಪ್ಪೇನಿಲ್ಲ: ಕೋರ್ಟ್

ಪುರಾಣದ ಪ್ರಕಾರ, ಶಿವನು ನೃತ್ಯ ಮಾಡುವಾಗ ಶಿವನಿಂದ ಬಿದ್ದ ಢಮರುಗ ಅಥವಾ ಡಿಂಡಿಮದಿಂದ ತಮಿಳು ಭಾಷೆ ಹುಟ್ಟಿದೆ ಎಂದು ನಂಬಲಾಗಿದೆ.

Tamil is the Language of Gods, says Madras High Court

ತಮಿಳು ಕವಿಗಳ ಜ್ಞಾನವನ್ನು ಪರೀಕ್ಷಿಸಲು ಶಿವನು ತಿರುವಿಲಯಾಡಲ್ ನುಡಿಸಿದನೆಂದು ನಂಬಲಾಗಿದೆ. ಮೇಲಿನವು ತಮಿಳು ಭಾಷೆ ದೇವರೊಂದಿಗೆ ಸಂಪರ್ಕ ಹೊಂದಿದೆ ಎಂದರ್ಥ. ಇದು ದೇವರೊಂದಿಗೆ ಸಂಪರ್ಕ ಹೊಂದಿದೆ, ಇದು ದೈವಭಕ್ತಿಯ ಭಾಷೆಯಾಗಿದೆ ಎಂದು ಪೀಠ ಹೇಳಿದೆ.

ತಮಿಳು ಭಾಷೆಯನ್ನು ಆಳ್ವಾರರು (ವೈಷ್ಣವ ಸಂತರು) ಅಭಿವೃದ್ಧಿಪಡಿಸಿದ್ದಾರೆ ಎಂಬ ಮಾತನ್ನು ನ್ಯಾಯಾಲಯವು ಉಲ್ಲೇಖಿಸಿ, ಅಂದಿನಿಂದ ಇಂದಿನವರೆಗೂ ತಿರುಪತಿಯ ಪವಿತ್ರ ತಿರುಮಲಾ ಬೆಟ್ಟಗಳಲ್ಲಿ, ತಮಿಳು ಹಿಂದೂ ಪಂಚಾಂಗ ಪ್ರಕಾರ ಮಾರ್ಗಳಿ (ಡಿಸೆಂಬರ್-ಜನವರಿ) ಯಲ್ಲಿ, ವೈಷ್ಣವ ಸಂತ ಸಂತ ಆಂಡಾಳ್ ಅವರಿಂದ ನಿರೂಪಿಸಲ್ಪಟ್ಟ "ತಿರುಪಾವೈ" ಮಾತ್ರ ದೇವರನ್ನು ಸ್ತುತಿಸಲು ಬಳಸಲಾಗುತ್ತದೆ.

ಭಗವತ್ ಗೀತೆಯ ಪ್ರಕಾರ, ಶ್ರೀಕೃಷ್ಣನು ತಾನು ಮಾರ್ಗಳಿ ತಿಂಗಳಲ್ಲಿ ತನ್ನನ್ನು ತಾನು ಪ್ರಕಟಪಡಿಸಿಕೊಳ್ಳುವುದಾಗಿ ಹೇಳಿದ್ದಾನೆ. ಹೀಗಾಗಿ, ತಿರುಮಲ ದೇವರು ತಾನು ಇಷ್ಟಪಡುವ ಮಾರ್ಗಳಿ ತಿಂಗಳಲ್ಲಿ ತಮಿಳು ತಿರುಪಾವೈ ಕೇಳಲು ಬಯಸುತ್ತಾನೆ. ವೈಷ್ಣವ ಧರ್ಮವು ತಮಿಳು ಸ್ತುತಿಗೀತೆಗಳಿಗೆ ಪ್ರಾಮುಖ್ಯತೆ ನೀಡಿದ್ದು, ಶೈವ ಧರ್ಮ ಅನುಯಾಯಿಗಳು ಕೂಡಾ ಇದೇ ವೇಳೆ ಭಕ್ತಿ ಪರಂಪರೆಯ ಫಲವಾಗಿ ಲಭ್ಯ ಸಾಹಿತ್, ವಿಶೇಷವಾಗಿ ಭಕ್ತಿ ಸಾಹಿತ್ಯವನ್ನು ಬಳಸಿ ತಮಿಳಿಗೆ ಅಷ್ಟೇ ಮಹತ್ವವನ್ನು ನೀಡಿದೆ.

"ದೇವರಿಗೆ ತಮಿಳು ಅರ್ಥವಾಗದಿದ್ದರೆ, ಶಿವ, ತಿರುಮಲದ ತಿಮ್ಮಪ್ಪ, ಮುರುಗ ಮುಂತಾದ ದೇವರನ್ನು ಪೂಜಿಸಲು ಬದ್ಧರಾಗಿರುವ ಇಲ್ಲಿನ ಭಕ್ತರು ದೇವರನ್ನು ಶ್ಲಾಘಿಸಲು ಅನೇಕ ಸ್ತೋತ್ರಗಳನ್ನು ತಮಿಳು ಭಾಷೆಯಲ್ಲಿ ರಚಿಸುವುದು ಹೇಗೆ ಸಾಧ್ಯ? ಆದ್ದರಿಂದ, ದೇವರು ಕೇವಲ ಒಂದು ಭಾಷೆಯನ್ನು ಮಾತ್ರ ಅರ್ಥಮಾಡಿಕೊಳ್ಳುತ್ತಾನೆ ಎಂಬ ಸಿದ್ಧಾಂತವನ್ನು ನಂಬಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರು ತಮಿಳು ಪದ್ಯಗಳನ್ನು ಪಠಿಸುವ ಮೂಲಕ ದೇವಸ್ಥಾನದಲ್ಲಿ ಪೂಜೆ ಮಾಡಲು ಬಯಸುತ್ತಾರೆ. ಇದು ಆ ದೇವಸ್ಥಾನಕ್ಕೆ ಮಾತ್ರವಲ್ಲದೆ ದೇಶದಾದ್ಯಂತ, ಎಲ್ಲಾ ದೇವಾಲಯಗಳನ್ನು ತಮಿಳು ತಿರುಮುರೈ ಮತ್ತು ಅಳ್ವಾರ್ ಮತ್ತು ನಾಯನ್ಮಾರ್ ರಂಥ ಋಷಿ, ಸಾಧು ಸಂತರು ರಚಿಸಿದ ಇತರ ಸ್ತೋತ್ರಗಳನ್ನು ಪಠಿಸುವ ಮೂಲಕ ಪವಿತ್ರಗೊಳಿಸಬೇಕು ಎಂದು ನ್ಯಾ ಕಿರುಬಾಕರನ್ ಅಭಿಪ್ರಾಯಪಟ್ಟರು.

ಮನುಷ್ಯರು ಭಾಷೆ ಸೃಷ್ಟಿಸಲು ಸಾಧ್ಯವಿಲ್ಲ, ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಮೌಖಿಕವಾಗಿ ಶತ ಶತಮಾನಗಳಿಂದ ವಿವಿಧ ರೂಪಗಳಿಂದ ಹರಿದು ಬಂದಿದೆ. ಭಾಷೆಯ ಅಭಿವೃದ್ಧಿಯನ್ನು ಅಗತ್ಯಕ್ಕೆ ತಕ್ಕಂತೆ ಮಾನವರು ರೂಪಿಸಿಕೊಂಡಿದ್ದಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಇನ್ನೊಂದು ಪ್ರಕರಣದಲ್ಲಿ ''ತಮ್ಮ ಇಷ್ಟದ ಭಾಷೆಯಲ್ಲಿ ಮಂತ್ರ ಹೇಳಲು ಭಕ್ತರು ಸ್ವತಂತ್ರರು,ಮಂತ್ರವನ್ನು ತಮಿಳು ಅಥವಾ ಸಂಸ್ಕೃತದಲ್ಲಿ ಹೇಳಬೇಕೋ, ಬೇಡವೋ ಎಂಬುದು ಭಕ್ತರ ಆಯ್ಕೆಯಾಗಿದೆ'' ಎಂದು ಮುಖ್ಯ ನ್ಯಾಯಮೂರ್ತಿ ಬ್ಯಾನರ್ಜಿ ಮೌಖಿಕವಾಗಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.(ಪಿಟಿಐ)

English summary
A bench of Justice N Kirubakaran, since retired, and Justice B Pugalendhi, in a recent order also said that in our country "it is made to believe that Sanskrit alone is Gods' language."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X