ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನನಗಿದ್ದಿದ್ದು ಒಬ್ಬಳೇ ಮಗಳು...' ಬಿಕ್ಕಿ ಬಿಕ್ಕಿ ಅತ್ತ ಶುಭಶ್ರೀ ತಂದೆ

|
Google Oneindia Kannada News

ಚೆನ್ನೈ, ಸೆಪ್ಟೆಂಬರ್ 14: "ನನಗಿದ್ದಿದ್ದು ಒಬ್ಬಳೇ ಮಗಳು. ಈ ಬ್ಯಾನರ್ ಸಂಸ್ಕೃತಿಯಿಂದ ನಾನು ಆಕೆಯನ್ನು ಕಳೆದುಕೊಂಡೆ..." ಎಂದು ನಿಯಂತ್ರಿಸಲಾಗದ ದುಃಖದಲ್ಲಿ ಬಿಕ್ಕುತ್ತಾರೆ ರವಿ.

ಚೆನ್ನೈಯಲ್ಲಿ ಫ್ಲೆಕ್ಸ್ ಬಿದ್ದ ಪರಿಣಾಮ ಅಪಘಾತಕ್ಕೀಡಾಗ ಮೃತಳಾದ 23 ವರ್ಷ ವಯಸ್ಸಿನ ಟೆಕ್ಕಿ ಶುಭಶ್ರೀ ತಂದೆ ರವಿ ಮತ್ತು ತಾಯಿಗೆ ಒಬ್ಬಳೇ ಮಗಳು. ಆದರೆ ಅಕ್ರಮವಾಗಿ ಹಾಕಲಾಗಿದ್ದ ಫ್ಲೆಕ್ಸ್ ವೊಂದು ಆಕೆ ಮಾಡದ ತಪ್ಪಿಗೆ ಚಿತ್ರಹಿಂಸೆ ಅನುಭವಿಸಿ ಸಾಯುವಂತೆ ಮಾಡಿದೆ.

ಟೆಕ್ಕಿ ಶುಭಶ್ರೀ ಸಾವಿನ ಕೊನೆಯ ಕ್ಷಣಗಳು ಕ್ಯಾಮರಾದಲ್ಲಿ ಸೆರೆಟೆಕ್ಕಿ ಶುಭಶ್ರೀ ಸಾವಿನ ಕೊನೆಯ ಕ್ಷಣಗಳು ಕ್ಯಾಮರಾದಲ್ಲಿ ಸೆರೆ

ಶುಭಶ್ರೀ ಸಾವಿನ ನಂತರ ಈ ಅಕ್ರಮ ಫ್ಲೆಕ್ಸ್ ಸಂಸ್ಕೃತಿಯ ಬಗ್ಗೆ ಮತ್ತೊಮ್ಮೆ ಆಕ್ರೋಶ ವ್ಯಕ್ತವಾಗಿದೆ. ಅನುಮತಿ ತೆಗೆದುಕೊಳ್ಳದೆ ಎಐಎಡಿಎಂಕೆ ನಾಯಕರೊಬ್ಬರು ತಮ್ಮ ಮಗನ ಮದುವೆಯ ಶುಭಹಾರೈಕೆಯ ಫ್ಲೆಕ್ಸ್ ಅನ್ನು ರಸ್ತೆಯ ಇಕ್ಕೆಲಗಳಲ್ಲಿ ಹಾಕಿಸಿದ್ದರು. ಇದೇ ಶುಭಶ್ರೀಯ ಸಾವಿಗೆ ಕಾರಣವಾಗಿದೆ.

ನಮ್ಮ ಮನೆಗೆ ಆಕೆ ಮರವಾಗಿದ್ದಳು!

ನಮ್ಮ ಮನೆಗೆ ಆಕೆ ಮರವಾಗಿದ್ದಳು!

"ನಮ್ಮ ಮನೆಗೆ ಅವಳು ಮರದಂತಿದ್ದಳು. ನಾವು ಅವಳ ನೆರಳಲ್ಲಿ ಬದುಕುತ್ತಿದ್ದೆವು. ಆದರೆ ಆ ಮರವನ್ನೇ ಕಡಿದು ಹಾಕಿದ್ದೀರಿ. ಇಂಥ ಅನ್ಯಾಯ, ದುಃಖ ಯಾವ ಕುಟುಂಬಕ್ಕೂ ಆಗದಿರಲಿ... ಆಕೆಯನ್ನು ಮರೆತು ಮೊದಲಿನಿಂತೇ ಬದುಕು ಸಾಗಿಸಲು ನಮಗೆ ಇನ್ನೆಂದಿಗೂ ಸಾಧ್ಯವಿಲ್ಲ" ಎಂದು ಉಮ್ಮಳಿಸುವ ದುಃಖವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಲೇ ರವಿ ಹೇಳುತ್ತಾರೆ.

ಇದ್ದಿದ್ದು ಒಬ್ಬಳೇ ಮಗಳು!

ಇದ್ದಿದ್ದು ಒಬ್ಬಳೇ ಮಗಳು!

"ಶುಭಶ್ರೀ ನಮ್ಮ ಮನೆಯ ದೀಪವಾಗಿದ್ದಳು. ಆದರೆ ಇಂದು ಇದ್ದ ಒಬ್ಬಳೇ ಒಬ್ಬಳು ಮಗಳನ್ನು ಈ ಬ್ಯಾನರ್ ಸಂಸ್ಕೃತಿಯಿಂದ ಕಳೆದುಕೊಂಡಿದ್ದೇವೆ. ನಮ್ಮ ಸ್ಥಿತಿ ಯಾರಿಗೂ ಬಾರದಿರಲಿ" ಎಂದು ಬಿಕ್ಕುತ್ತಾರೆ ಶುಭಶ್ರೀ ತಂದೆ ರವಿ.

ಫ್ಲೆಕ್ಸ್ ಬಿದ್ದು, ಟ್ಯಾಂಕರ್ ಗುದ್ದಿ ಚೆನ್ನೈಯಲ್ಲಿ ಟೆಕ್ಕಿ ದುರಂತ ಸಾವುಫ್ಲೆಕ್ಸ್ ಬಿದ್ದು, ಟ್ಯಾಂಕರ್ ಗುದ್ದಿ ಚೆನ್ನೈಯಲ್ಲಿ ಟೆಕ್ಕಿ ದುರಂತ ಸಾವು

ಫ್ಲೆಕ್ಸ್ ಹಾಕಿಸಿದ್ದು ಯಾರು?

ಫ್ಲೆಕ್ಸ್ ಹಾಕಿಸಿದ್ದು ಯಾರು?

ಎಐಎಡಿಎಂಕೆ ಸ್ಥಳೀಯ ನಾಯಕ ಸಿ ಜಯಗೋಪಾಲ್ ಎಂಬುವವರು ತಮ್ಮ ಪುತ್ರನ ಮದುವೆಯ ಸಲುವಾಗಿ ಶುಭಾಶಯ ಕೋರಿ ರಸ್ತೆಯ ಇಕ್ಕೆಲಗಳಲ್ಲಿ ಫ್ಲೆಕ್ಸ್ ಹಾಕಿಸಿದ್ದರು. ಅನುಮತಿ ಇಲ್ಲದೆ ಬ್ಯಾನರ್ ಹಾಕಿದ್ದರಿಂದ ಇದೀಗ ಜಯಗೋಪಾಲ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಶುಭಶ್ರೀಯ ಮೇಲೆ ಟ್ರಕ್ ಹರಿಸಿದ ಟ್ರಕ್ ಚಾಲಕನ ವಿರುದ್ಧವೂ ಪ್ರಕರಣ ದಾಖಲಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಟ್ರಕ್ ಚಾಲಕ ವೇಗವಾಗಿ ಗಾಡಿ ಓಡಿಸದೆ ಇದ್ದಿದ್ದರೆ ಶುಭಶ್ರೀಯ ಜೀವ ಉಳಿಯುತ್ತಿತ್ತು ಎಂಬ ಮಾತೂ ಕೇಳಿಬರುತ್ತಿದೆ. ಆದರೆ ಇಷ್ಟೆಲ್ಲ ಘಟನೆಗೆ ಮೂಲ ಕಾರಣವಾದ ಎಐಎಡಿಎಂಕೆ ನಾಯಕನ್ನು ಪೊಲೀಸರು ಇನ್ನೂ ಬಂಧಿಸಿಲ್ಲದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಆಫೀಸಿನಿಂದ ಮನೆಗೆ ಹೊರಟಿದ್ದೇ ಆಕೆಯ ಕೊನೆಯ ಘಳಿಗೆ!

ಆಫೀಸಿನಿಂದ ಮನೆಗೆ ಹೊರಟಿದ್ದೇ ಆಕೆಯ ಕೊನೆಯ ಘಳಿಗೆ!

ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶುಭಶ್ರೀ, ಸೆಪ್ಟೆಂಬರ್ 12 ರಂದು ಗುರುವಾರ ಸಂಜೆ ದ್ವಿಚಕ್ರವಾಹನದಲ್ಲಿ ಆಫೀಸ್ ಮುಗಿಸಿ ಮನೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಪಲ್ಲವರಂ-ತೋರೈಪಕ್ಕಂ ರೇಡಿಯಲ್ ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಅಕ್ರಮ ಫ್ಲೆಕ್ಸ್ ವೊಂದು ಅವರ ಮೇಲೆ ಬಿದ್ದ ಪರಿಣಾಮ ಅವರು ಆಯತಪ್ಪಿ ರಸ್ತೆಗೆ ಬಿದ್ದರು. ಈ ಸಂದರ್ಭದಲ್ಲಿ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಟ್ರಕ್ ಶುಭಶ್ರೀ ಮೇಲೆ ಹರಿದ ಪರಿಣಾಮ ಆಕೆ ಸಾವನ್ನಪ್ಪಿದ್ದರು. ಆಕೆಯ ಕೊನೆಯ ಕ್ಷಣಗಳ ವಿಡಿಯೋ ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

English summary
"Subhasree is my only daughter" Chennai Techie's father Cried for Sweet daughter's death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X