• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕಾದಲ್ಲಿ ಅಧ್ಯಯನ: ಬೇರೆ ದೇಶಗಳಿಗಿಂತ ಭಾರತೀಯರ ಸಂಖ್ಯೆ ಹೆಚ್ಚಳ

|

ಚೆನ್ನೈ: ನವೆಂಬರ್ 18: ಅಮೆರಿಕಾದ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಮೊದಲ ಬಾರಿಗೆ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 2 ಲಕ್ಷವನ್ನು ಮೀರಿದೆ ಎಂದು ಇಂದು ಬಿಡುಗಡೆಯಾದ 2019 ರ 'ಅಂತರಾಷ್ಟ್ರೀಯ ಶೈಕ್ಷಣಿಕ ವಿನಿಮಯದ ಮುಕ್ತ ಬಾಗಿಲು' ವರದಿ ಮಾಡಿದೆ. ಇದು 2017 ರಿಂದ ಶೇ, 2.9 ರಷ್ಡು ಹೆಚ್ಚಾಗಿದೆ. ದಾಖಲೆಯ 2,02,014 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.

ಅಮೆರಿಕಾ ಸಂಯುಕ್ತ ಸಂಸ್ಥಾನದ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಟ್ಟು ಅಂತರಾಷ್ಟ್ರೀಯ ವಿದ್ಯಾರ್ಥಿ ಸಂಖ್ಯೆಯ ಪ್ರತಿಶತ 18.4 ಪ್ರತಿನಿನಿಧಿಸುತ್ತದೆ. ಅಮೇರಿಕಾದಲ್ಲಿ ಅಧ್ಯಯನ ಮಾಡುವ ಅಂತರಾಷ್ಟ್ರೀಯ 5 ವಿದ್ಯಾರ್ಥಿಗಳಲ್ಲಿ ಭಾರತದ ಒಬ್ಬ ವಿದ್ಯಾರ್ಥಿ ಇದ್ದಾನೆ.

ಮಾತು ಸಾಕು, ಕೆಲಸ ಜಾಸ್ತಿ ಮಾಡಬೇಕಿದೆ: ಪ್ರಧಾನಿ ಮೋದಿ

'ಓಪನ್ ಡೋರ್ಸ್' ವರದಿಯ ಆವಿಷ್ಕಾರಗಳ ಬಗ್ಗೆ ಪ್ರತಿಕ್ರಿಯಿಸಿರುವ ಯು.ಎಸ್ ಕಾನ್ಸುಲ್ ಜನರಲ್ ರಾಬರ್ಟ್ ಬರ್ಗೆಸ್,"ಅಮೆರಿಕಾ ವಿದೇಶ ವಿದ್ಯಾರ್ಥಿಗಳಿಗೆ ಉನ್ನತ ಶೈಕ್ಷಣಿಕ ತಾಣವಾಗಿದೆ. ಒಂದು ದಶಲಕ್ಷಕ್ಕೂ ಅಧಿಕ ವಿದೇಶಿ ವಿದ್ಯಾರ್ಥಿಗಳಿಗೆ ಆತಿಥ್ಯ ವಹಿಸಿದೆ. ಭಾರತೀಯರು ಈ ಶೈಕ್ಷಣಿಕ ವರ್ಷದ ಮೌಲ್ಯಯುತ ಭಾಗವಾಗಿದ್ದಾರೆ. ಉನ್ನತ ಶಿಕ್ಷಣವು ಜನರ ನಡುವೆ ಉತ್ತಮ ಸಂಬಂಧವನ್ನನು ರೂಪಿಸಲು ಸಹಾಯ ಮಾಡುತ್ತದೆ" ಎಂದು ಅವರು ಹೇಳಿದ್ದಾರೆ.

ಭಾರತೀಯ ವಿದ್ಯಾರ್ಥಿಗಳು ಮತ್ತು ಪೋಷಕರು ಯು.ಎಸ್ ನಲ್ಲಿ ಶಿಕ್ಷಣದ ಅವಕಾಶಗಳನ್ನು ಹುಡುಕುತ್ತಾರೆ. ಏಕೆಂದರೆ ಯು.ಎಸ್ ನ ಉನ್ನತ ಶಿಕ್ಷಣ ಸಂಸ್ಥೆಗಳು ವಿಶ್ವದಲ್ಲಿಯೇ ಅತ್ಯುತ್ತಮ ಸ್ಥಾನದಲ್ಲಿವೆ. ಇಲ್ಲಿ ನೀಡುವ ಪದವಿಗಳು ಜಾಗತಿಕವಾಗಿ ಅತ್ಯಂತ ಮೌಲ್ಯಯುತವೆಂದು ಗುರುತಿಸಲ್ಪಟ್ಟಿವೆ. ನಮ್ಮ ಶಿಕ್ಷಣ ವ್ಯವಸ್ಥೆಯು ಭಾರತೀಯ ವಿದ್ಯಾರ್ಥಿಗಳಿಗೆ ನೆಟ್ ವರ್ಕ್ ಮತ್ತು ಸಂಪರ್ಕಗಳಿಗೆ ಜೀವಮಾನದ ಅವಕಾಶಗಳನ್ನು ಒದಗಿಸುತ್ತದೆ. ಎಂದು ತಿಳಿಸಿದ್ದಾರೆ.

ಓಪನ್ ಡೋರ್ಸ್ ನ ವಾರ್ಷಿಕ ವರದಿಯ ಪ್ರಕಾರ, 2018-19 ರ ಶೈಕ್ಷಣಿಕ ವರ್ಷದಲ್ಲಿ 10,95,299 ವಿದೇಶಿ ವಿದ್ಯಾರ್ಥಿಗಳು ಯು.ಎಸ್ ನಲ್ಲಿ ಅಧ್ಯಯನ ಮಾಡಿದ್ದಾರೆ. ಈ ಪೈಕಿ 2,02,014 ವಿದ್ಯಾರ್ಥಿಗಳು ಭಾರತ ಮೂಲದವರಾಗಿದ್ದು, ಚೀನಾದ ವಿದ್ಯಾಥಿಗಳು ಮಾತ್ರ ಇವರನ್ನು ಮೀರಿಸಿದ್ದಾರೆ. ಅಮೇರಿಕಾದಲ್ಲಿ ಅಧ್ಯಯನ ಮುಗಿದ ನಂತರ ಐಚ್ಛಿಕ ಪ್ರಾಯೋಗಿಕ ತರಬೇತಿ (ಒಪಿಟಿ) ಯಲ್ಲಿ ಭಾಗವಹಿಸುವ ವಿದೇಶಿ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಭಾರತೀಯರೇ ಅಗ್ರಸ್ಥಾನದಲ್ಲಿದ್ದಾರೆ.

ಭಾರತದೊಂದಿನ ಸಂಬಂಧದ ಸಂಭ್ರಮಾಚರಣೆ ಮಾಡಿದ ಅಮೆರಿಕ

ಓಪಿಟಿ ಮಾಡುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 2018-19 ರಲ್ಲಿ ಶೇ, 12.3 ರಷ್ಟು ಹೆಚ್ಚಳಗೊಂಡು 84,630 ಕ್ಕೆ ತಲುಪಿದೆ. ಯುಎಸ್ ನಲ್ಲಿ ಪದವಿ ಪೂರ್ವ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಶೇ, 6.3 ರಷ್ಟು ಹೆಚ್ಚಳಗೊಂಡು 24,813 ಕ್ಕೆ ತಲುಪಿದೆ. ಪದವಿ ಕೋರ್ಸ್ ಗಳನ್ನು ಓದುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 18.8 ರಷ್ಟು ಹಡಚ್ಚಳಗೊಂಡು 2,238 ಕ್ಕೆ ತಲುಪಿದೆ.

ಈ ವರ್ಷದ ಓಪನ್ ಡೋರ್ಸ್ ಡೇಟಾದ ಬಿಡುಗಡೆಯು ಯು,ಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಮತ್ತು ಶಿಕ್ಷಣ ಇಲಾಖೆಯ ವಾರ್ಷಿಕ ಜಂಟಿ ಉಪಕ್ರಮವಾದ ಅಂತರಾಷ್ಟ್ರೀಯ ಶಿಕ್ಷಣ ವಾರದ ಆಚರಣೆಗೆ ಸೇರುತ್ತದೆ. ಅಂತರಾಷ್ಟ್ರೀಯ ಶಿಕ್ಷಣ ವಾರವನ್ನು 1999 ರಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು. ಇದರ ಉಪಯೋಗಗಳನ್ನು ವಿಶ್ವಾದ್ಯಂತ ಆಚರಿಸಲು ಒಂದು ಅವಕಾಶವಾಗಿದೆ.

೨೧ನೇ ಶತಮಾನದಲ್ಲಿ ಅಮೆರಿಕಾದ ಜಾಗತಿಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಮತ್ತು ಯುಎಸ್ನಲ್ಲಿ ಅಧ್ಯಯನ ಮಾಡಿ ಅನುಭವಗಳನ್ನು ಕಲಿಯಲು ಮತ್ತು ಹಂಚಿಕೊಳ್ಳುವುದರೊಂದಿಗೆ ವಿಶ್ವದ ಭವಿಷ್ಯ ನಾಯಕರನ್ನು ಆಕರ್ಷಿಸಲು ವಿನ್ಯಾಸಗೊಳಿಸಿದರು. ಯುನೈಟೆಡ್ ಸ್ಟೇಟ್ಸ್-ಇಂಡಿಯಾ ಎಜುಕೇಶನಲ್ ಫೌಂಡೇಶನ್ (ಯುಎಸ್ಐಇಎಫ್) ಅಂತರಾಷ್ಟ್ರೀಯ ಶಿಕ್ಷಣ ವಾರದಲ್ಲಿ ಆನ್ ಲೈನ್ ಮತ್ತು ವೈಯಕ್ತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.

English summary
The 2019 'Open Doors Report On International Education Exchange' Released Today, Reports That The Number Of Indian Students At U.S Colleges and Universities Surpassed Two Hundred Thousand For The First Time Ever An Increase Of 2.9 Percent From The 2017-2018 Season.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X