ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಐಟಿ ಮದ್ರಾಸ್ ನಲ್ಲಿ ಮತ್ತೆ ಗೋ ಮಾಂಸ ಭಕ್ಷಣೆ

ಕಳೆದ ಭಾನುವಾರ (ಮೇ 28) ಐಐಟಿ ಮದ್ರಾಸ್ ನಲ್ಲಿ ನಡೆದಿದ್ದ ಬೀಫ್ ಫೆಸ್ಟ್ ನಲ್ಲಿ ಭಾಗವಹಿಸಿದ್ದರೆಂದು ಆರೋಪಿಸಿ ಸೂರಜ್ ಆರ್. ಎಂಬ ಪಿಎಚ್ ಡಿ ವಿದ್ಯಾರ್ಥಿಯ ಮೇಲೆ ಇತ್ತೀಚೆಗೆ ಹಲ್ಲೆಯಾಗಿದ್ದಕ್ಕೆ ಖಂಡನೆ.

|
Google Oneindia Kannada News

ಚೆನ್ನೈ, ಮೇ 31: ಬೀಫ್ ಫೆಸ್ಟ್ ನಲ್ಲಿ ಭಾಗಿಯಾಗಿದ್ದಕ್ಕೆ ಹಲ್ಲೆಗೊಳಗಾದ ಮದ್ರಾಸ್ ಐಐಟಿಯ ಪಿಎಚ್ ಡಿ ವಿದ್ಯಾರ್ಥಿಯೊಬ್ಬರಿಗೆ ಬೆಂಬಲವಾಗಿ ನಿಂತ ಸಂಸ್ಥೆಯ ಕೆಲ ವಿದ್ಯಾರ್ಥಿಗಳು, ಘಟನೆಯನ್ನು ಸಾಂಕೇತಿಕವಾಗಿ ವಿರೋಧಿಸಿದ್ದಾರೆ.

ಐಐಟಿ ಮದ್ರಾಸ್ ಕ್ಯಾಂಪಸ್ ನ ಮುಂಭಾಗದಲ್ಲಿ ಗೋ ಮಾಂಸ ತಿನ್ನುವ ಮೂಲಕ ಅವರು, ಈ ಹಲ್ಲೆಯ ಘಟನೆಗೆ ಪ್ರತೀಕಾರ ವ್ಯಕ್ತಪಡಿಸಿದರು.[ಕಣ್ಣೂರಿನ ನಂತರ ಐಐಟಿ, ಮದ್ರಾಸಿನಲ್ಲಿ ಬೀಫ್ ಫೆಸ್ಟಿವಲ್]

Students eat beef outside IIT-Madras to protest attack on research scholar

ಈ ಪ್ರತಿಭಟನೆಯಲ್ಲಿ ರೆವೆಲ್ಯೂಷನರಿ ಸ್ಟೂಡೆಂಟ್ ಯೂತ್ ಫ್ರಂಟ್ (ಆರ್ ಎಸ್ ವೈ ಎಫ್), ತಾಂತೈ ಪೆರಿಯಾರ್ ದ್ರಾವಿಡಾರ್ ಕಳಗಂ (ಟಿಪಿಡಿಕೆ) ಕಾರ್ಯಕರ್ತರು ಹಾಗೂ ಐಐಟಿ ಕ್ಯಾಂಪಸ್ ನ ಕೆಲ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು.[ಗೋಕಿಂಕರರು ಬೀಫ್ ಫೆಸ್ಟ್ ತಡೆಯಲು ಕಾರ್ಯತಂತ್ರ ರೂಪಿಸಿದ್ದು ಹೀಗೆ]

ಮೇ 28ರಂದು ಭಾನುವಾರ ಕ್ಯಾಂಪಸ್ಸಿನಲ್ಲಿ ಉದ್ದೇಶಿತವಾಗಿ ಪಾರ್ಟಿಯೊಂದನ್ನು ಆಯೋಜಿಸಿದ್ದ ಕೆಲ ವಿದ್ಯಾರ್ಥಿಗಳಲ್ಲಿ ಗೋ ಮಾಂಸ ಭಕ್ಷಣೆ ಮಾಡುವ ಮೂಲಕ ಗೋ ಹತ್ಯೆ ಕಾನೂನು ಜಾರಿಗೆ ತಂದಿದ್ದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದ್ದರು. ಅದರಲ್ಲಿ ಭಾಗವಹಿಸಿದ್ದವರು ಎನ್ನಲಾದ ಪಿಎಚ್ ಡಿ ವಿದ್ವಾಂಸರಾದ ಸೂರಜ್ ಆರ್. ಅವರ ಮೇಲೆ ಇತ್ತೀಚೆಗೆ ಕೆಲವರು ಹಲ್ಲೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಏತನ್ಮಧ್ಯೆ, ಪಿಎಚ್ ಡಿ ವಿದ್ಯಾರ್ಥಿಯ ಮೇಲೆ ಹಲ್ಲೆ ಪ್ರಕರಣದಲ್ಲಿ ಚೆನ್ನೈ ಪೊಲೀಸರು 9 ಜನರನ್ನು ಬುಧವಾರ ಬಂಧಿಸಿದ್ದಾರೆ.

English summary
A group of protestors challenged cow vigilantes by openly eating beef while protesting at the Indian Institute of Technology (IIT) Madras on Wednesday against the attack on the institution's research scholar who participated in the beef fest on the campus on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X