• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡಬಯಸುವವರಿಗೆ ಹೊಸ ಮೊಬೈಲ್ ಅಪ್ಲಿಕೇಷನ್

|

ಚೆನ್ನೈ (ತಮಿಳುನಾಡು), ಜೂನ್ 13: ಚೆನ್ನೈನಲ್ಲಿ ಇರುವ ಅಮೆರಿಕ ರಾಯಭಾರ ಕಚೇರಿಯಿಂದ ಬುಧವಾರ ಐದನೇ ವಿದ್ಯಾರ್ಥಿ ವೀಸಾ ದಿನ ಆಚರಿಸಲಾಯಿತು. ಪ್ರತಿ ವರ್ಷ ಈ ಕಾರ್ಯಕ್ರಮ ನಡೆಯುತ್ತಿದ್ದು, ಅಮೆರಿಕ ಹಾಗೂ ಭಾರತದ ಮಧ್ಯೆ ಉನ್ನತ ವ್ಯಾಸಂಗಕ್ಕೆ ನಂಟು ಬೆಸೆಯುತ್ತದೆ. ಅರ್ಹ ಭಾರತೀಯ ವಿದ್ಯಾರ್ಥಿಗಳು ಅಮೆರಿಕದಲ್ಲಿ ವ್ಯಾಸಂಗ ಮಾಡುವುದಕ್ಕೆ ಸಿದ್ಧತೆ ನಡೆಸಲು ನೆರವಾಗುತ್ತದೆ.

ಅಮೆರಿಕಕ್ಕೆ ತೆರಳುವ ಮುಂಚಿತವಾಗಿ ತಿಳಿದುಕೊಳ್ಳಬೇಕಾದ ಮಾಹಿತಿ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಡಲಾಗುತ್ತದೆ. ಬುಧವಾರದಂದು ನಾಲ್ಕು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿ ಅಭ್ಯರ್ಥಿಗಳ ಸಂದರ್ಶನಕ್ಕೆ ಮೀಸಲಿಡಲಾಗಿತ್ತು. ಅಮೆರಿಕದಲ್ಲಿ ವ್ಯಾಸಂಗ ಮಾಡಲು ಬಯಸುವ ವಿದ್ಯಾರ್ಥಿಗಳಿಗಾಗಿಯೇ ಇಂಥದ್ದೊಂದು ಸಂದರ್ಭ ಮುಡಿಪಾಗಿ ಇಡಲಾಯಿತು.

ಅಮೆರಿಕ ವೀಸಾಗೆ ಇ ಮೇಲ್ ಐಡಿ, ಸೋಷಿಯಲ್ ಮೀಡಿಯಾ ಅಕೌಂಟ್, ಫೋನ್ ನಂಬರ್ ಎಲ್ಲ ನೀಡಬೇಕು

ರಾಯಭಾರ ಕಚೇರಿಯಿಂದ ಹತ್ತಿರ ಹತ್ತಿರ ಒಂದು ಸಾವಿರ ವಿದ್ಯಾರ್ಥಿಗಳಿಗೆ ವೀಸಾಗಾಗಿ ಸಂದರ್ಶನ ನಡೆಸಲಾಯಿತು. ಆ ನಂತರ ದಕ್ಷಿಣ ಭಾರತದ ವಿದ್ಯಾರ್ಥಿಗಳನ್ನು ಆರಿಸಲಾಯಿತು. ಅವರ ಪೋಷಕರು ಸಹ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಅಮೆರಿಕ ರಾಯಭಾರ ಜನರಲ್ ರಾಬರ್ಟ್ ಬರ್ಗೆಸ್ ವಿದ್ಯಾರ್ಥಿ ವೀಸಾಗಳನ್ನು ನೀಡಿದರು.

ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡಬೇಕು ಎಂದು ಬದುಕು ಬದಲಿಸಬಲ್ಲಂಥ ನಿರ್ಧಾರ ತೆಗೆದುಕೊಂಡ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಅಭಿನಂದನೆಗಳು. ನಾಲ್ಕು ಸಾವಿರದ ಏಳು ನೂರು ನೋಂದಾಯಿತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಕ್ಯಾಂಪಸ್ ಗಳಿಗೆ ಆಹ್ವಾನ ನೀಡುತ್ತಿದ್ದೇನೆ. ಅವುಗಳು ಅತ್ಯುತ್ತಮ ಜ್ಞಾನ, ಅನುಭವ, ಜೀವನಪೂರ್ತಿ ಸ್ನೇಹ ನೀಡುತ್ತವೆ ಎಂದು ಬರ್ಗೆಸ್ ಹೇಳಿದರು.

ದೇಶದಾದ್ಯಂತ ಅಮೆರಿಕ ರಾಯಭಾರ ಕಚೇರಿಯಿಂದ ವಿದ್ಯಾರ್ಥಿ ವೀಸಾ ದಿನ ಆಚರಿಸಿದ್ದು, ಯುನೈಟೆಡ್ ಸ್ಟೇಟ್ಸ್ - ಇಂಡಿಯಾ ಎಜುಕೇಷನ್ ಫೌಂಡೇಷನ್ ನಿಂದ (ಯುಎಸ್ ಐಇಎಫ್) ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಲಾಯಿತು. ಅಮೆರಿಕದಲ್ಲಿ ವ್ಯಾಸಂಗ ಮಾಡುವುದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇದರಲ್ಲಿ ದೊರೆಯುತ್ತದೆ.

ಗ್ರೀನ್ ಕಾರ್ಡ್, ಎಚ್1ಬಿ ವೀಸಾ ಬಗ್ಗೆ ಟ್ರಂಪ್ ಮಹತ್ವದ ಘೋಷಣೆ

ಅಮೆರಿಕದಲ್ಲಿ ಶಿಕ್ಷಣ ಪಡೆಯುವುದು ಅಲ್ಲಿನ ಸರಕಾರದ ಕಾರ್ಯಕ್ರಮ. ಇದು ಅಲ್ಲಿನ ಸರಕಾರದಿಂದ ಸಿಗುವ ಅಧಿಕೃತ ಮಾಹಿತಿಯ ಮೂಲ. ಹೆಚ್ಚಿನ ಮಾಹಿತಿಗೆ ಈ ವೆಬ್ ಸೈಟ್ (www.educationusa.state.gov) ಭೇಟಿ ನೀಡಬಹುದು.

ಮೊಬೈಲ್ ಅಪ್ಲಿಕೇಷನ್ ಉಚಿತವಾಗಿದ್ದು, ವಿದ್ಯಾರ್ಥಿಗಳು, ಪೋಷಕರು, ಸಲಹೆಗಾರರಿಗೆ ಅತ್ಯುಪಯುಕ್ತ ಮಾಹಿತಿ ಒದಗಿಸುತ್ತದೆ. ಇನ್ನು ಮೊಬೈಲ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳುವ ಲಿಂಕ್ ಸಹ ಇಲ್ಲಿದೆ.

ಆಂಡ್ರಾಯಿಡ್ (bit.ly/EdUSAInAppDroid) ಹಾಗೂ ಆಪಲ್ ಐಒಎಸ್ ಗೆ (bit.ly/EdUSAInAppiOS) ಇಲ್ಲಿ ಕ್ಲಿಕ್ ಮಾಡಿ.

* ಸದ್ಯಕ್ಕೆ ಭಾರತದ ಎರಡು ಲಕ್ಷದ ತನಕ ವಿದ್ಯಾರ್ಥಿಗಳು ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ- ದೇಶದ ಇತಿಹಾಸದಲ್ಲೇ ಇದು ಅತ್ಯಧಿಕ ಸಂಖ್ಯೆ

* ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿರುವ ಎರಡನೆ ಅತಿ ದೊಡ್ಡ ಸಮುದಾಯ ಭಾರತೀಯ ವಿದ್ಯಾರ್ಥಿಗಳದು (ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಪೈಕಿ ಭಾರತೀಯರು ಶೇಕಡಾ ಹದಿನೆಂಟರಷ್ಟು).

* ವಿವಿಧ ಶುಲ್ಕಗಳ, ನಾಲ್ಕು ಸಾವಿರದ ಏಳು ನೂರಕ್ಕೂ ಹೆಚ್ಚು ನೋಂದಾಯಿತ ಕಾಲೇಜು, ವಿಶ್ವ ವಿದ್ಯಾಲಯಗಳು ಅಮೆರಿಕದಲ್ಲಿ ಇವೆ.

* ಅಮೆರಿಕದಲ್ಲಿ ವ್ಯಾಸಂಗ ಮಾಡಲು ಬಯಸುವ ಭಾರತೀಯ ವಿದ್ಯಾರ್ಥಿಗಳು ಈ ಏಳು ಸಲಹಾ ಕೇಂದ್ರದ (www.educationusa.state.gov) ಪೈಕಿ ಒಂದರಲ್ಲಿ ಸಲಹೆ ಪಡೆಯುವುದನ್ನು ಉತ್ತೇಜಿಸಲಾಗುತ್ತದೆ. ಅಲ್ಲಿ ಅಮೆರಿಕದಲ್ಲಿನ ಶೈಕ್ಷಣಿಕ ಅವಕಾಶದ ಬಗ್ಗೆ ತಿಳಿಸಲಾಗುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
On June 12, the U.S. Consulate General in Chennai joined the rest of U.S. Mission India to mark the fifth annual Student Visa Day. This yearly event celebrates higher education ties between the United States and India and helps qualified Indian students prepare for study in the United States by connecting them with EducationUSA for pre-departure information.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more