• search
 • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಗೆದ್ದ ಎಸ್‌ಪಿ ಬಾಲಸುಬ್ರಹ್ಮಣ್ಯಂಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಮುಂದುವರಿಕೆ

|

ಚೆನ್ನೈ, ಸೆಪ್ಟೆಂಬರ್ 07: ಕೊರೊನಾ ಗೆದ್ದ ಖ್ಯಾತ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ವೆಂಟಿಲೇಟರ್‌ನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರ ಪುತ್ರ ಮಾಹಿತಿ ನೀಡಿದ್ದಾರೆ.

   ಕಣ್ಣೀರಿಡುತ್ತ Zameer Ahmedರನ್ನು ಬೇಡಿಕೊಂಡರ Sanjjanaa Galrani | Oneindia Kannada

   ಫಿಸಿಯೋಥೆರಪಿಗೆ ಅವರು ಸ್ಪಂದಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.ಸ್ಟಾರ್ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಕೊರೊನಾ ವೈರಸ್‌ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದಿದೆ, ಮತ್ತು ಅವರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದ್ದರು.

   ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಕೊವಿಡ್ 19 ಸೋಂಕು ಮುಕ್ತ

   74 ವರ್ಷದ ಬಾಲಸುಬ್ರಹ್ಮಣ್ಯಂ ಹಲವಾರು ಭಾಷೆಗಳಲ್ಲಿ ಹಾಡುವ ಕೌಶಲ್ಯದಿಂದ ಹೆಚ್ಚು ಜನಪ್ರಿಯರಾಗಿದ್ದಾರೆ, ಅವರು ಆಗಸ್ಟ್ 5 ರಂದು ಎಂಜಿಎಂ ಹೆಲ್ತ್‌ಕೇರ್‌ ಆಸ್ಪತ್ರೆಗೆ ಅಡ್ಮಿಟ್‌ ಆಗಿದ್ದರು.

   ಆಗಸ್ಟ್ 22 ರಂದು ಬಿಡುಗಡೆಯಾದ ಆಸ್ಪತ್ರೆಯ ಬುಲೆಟಿನ್ ಪ್ರಕಾರ, ಪ್ಲೇಬ್ಯಾಕ್ ಗಾಯಕ ವೆಂಟಿಲೇಟರ್ ಸಹಾಯದೊಂದಿಗಿದ್ದು, ತೀವ್ರ ನಿಗಾ ಘಟಕದಲ್ಲಿದ್ದಾರೆ ಮತ್ತು ಎಕ್ಸ್‌ಟ್ರಾ ಕಾರ್ಪೊರಿಯಲ್ ಮೆಂಬರೇನ್ ಆಕ್ಸಿಜನ್ ಬೆಂಬಲದಲ್ಲಿದ್ದಾರೆ.

   ನನ್ನ ತಂದೆ ಉತ್ತಮ, ಸ್ಥಿರವಾಗಿದ್ದು, ಕೊರೊನಾ ವೈರಸ್‌ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಚಲನಚಿತ್ರ ನಿರ್ಮಾಪಕರೂ ಆಗಿರುವ ಚರಣ್ ಜನರ ಪ್ರಾರ್ಥನೆಗಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

   English summary
   Veteran Singer SP Balasubrahmanyam Tests Negative For Covid-19 Now, still under ventilator support but actively cooperating for physiotherapy sessions.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X