ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರದಲ್ಲೇ ವಿಮಾನದಲ್ಲಿ ಡಾಟಾ ಮತ್ತು ಕರೆ ಸೇವೆ

By Manjunatha
|
Google Oneindia Kannada News

ಚೆನ್ನೈ, ಜನವರಿ 23: ಇನ್ನು ಮುಂದೆ ವಿಮಾನದಲ್ಲಿ ಹಾರುತ್ತಿರುವ ಸಮಯದಲ್ಲೇ ಪ್ರಯಾಣಿಕರು ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್ ಮಾಡಬಹುದು.

ಇನ್ನು ಮುಂದೆ ವಿಮಾನದಲ್ಲಿ ವೈ-ಫೈ ಸೌಲಭ್ಯ ನೀಡುವ ಬಗ್ಗೆ ವಿಮಾನ ಯಾನ ಸಂಸ್ಥೆಗಳು ಚಿಂತನೆ ನಡೆಸಿವೆ. ಟ್ರಾಯ್ ಸೂಚನೆಗಳನ್ವಯ ವಿಮಾನದಲ್ಲಿಯೂ ಡಾಟಾ ಮತ್ತು ಕರೆ ಸೇವೆಗಳನ್ನು ನೀಡಲು ಪ್ರಯತ್ನಗಳು ಜಾರಿಯಲ್ಲಿವೆ. ಈ ಸೇವೆ ಜಾರಿಯಾದರೆ ಟಿಕೆಟ್ ದರ 20%-30% ಹೆಚ್ಚಾಗಬಹುದು.

ಹೊಟ್ಟೆ ಹುಣ್ಣಾಗುವಂತೆ ನಗಿಸುವ ಗುರ್ಗಾಂವಿನ ಖಗೋಳ ವಿಸ್ಮಯ!ಹೊಟ್ಟೆ ಹುಣ್ಣಾಗುವಂತೆ ನಗಿಸುವ ಗುರ್ಗಾಂವಿನ ಖಗೋಳ ವಿಸ್ಮಯ!

ವೈ-ಫೈ ಸೇವೆ ಪ್ರಾರಂಭವಾದರೆ ವಿಮಾನ ಸಂಸ್ಥೆಗಳು ತಮ್ಮ ಸೇವೆಯನ್ನು ಇನ್ನಷ್ಟು ಸುಧಾರಿಸಿಕೊಳ್ಳಲು ನೆರವಾಗುತ್ತದೆ ಅಷ್ಟೆ ಅಲ್ಲದೆ, ಪ್ರಯಾಣಿಕರಿಗೂ ಸಹಕಾರಿಯಾಗುತ್ತದೆ ಎನ್ನಲಾಗಿದೆ. ಈ ಸೇವೆಯು ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳಲ್ಲಿ ದೊರೆಯಲಿದೆ.

Soon there will be Wi-Fi in Flights

ವಿಮಾನದಲ್ಲಿ ಡಾಟಾ ಮತ್ತು ಕರೆ ಸೇವೆ ನೀಡಲು ಎರಡು ರೀತಿಯ ದಾರಿಗಳಿವೆ. ಒಂದು ನೆಲದ ಮೇಲೆ ಸ್ಥಾಪಿತ ಟವರ್‌ಗಳಿಂದ ಆಂಟೆನಾ ಮೂಲಕ ಸಿಗ್ನಲ್‌ಗಳನ್ನು ಹಿಡಿದು ಸೇವೆ ಒದಗಿಸುವುದು, ಈ ಮಾದರಿಯಲ್ಲಿ ಟವರ್‌ಗಳು ಬದಲಾಗುತ್ತಿರುತ್ತದಾದ್ದರಿಂದ ಗುಣಮಟ್ಟದ ನೆಟ್ವರ್ಕ್ ದೊರಕಲಾರದು.

ಎರಡನೇ ವಿಧಾನ, ವಿಮಾನಗಳು ನೇರವಾಗಿ ಸ್ಯಾಟಲೈಟ್‌ಗಳೋಂದಿಗೆ ಸಂಪರ್ಕ ಸಾಧಿಸಿ ಸಂಕೇತಗಳನ್ನು ಹಿಡಿಯುವುದು, ಇದು ಸ್ವಲ್ಪ ದುಬಾರಿ ಆದರೂ ಗುಣಮಟ್ಟದ್ದಾಗಿದೆ. ಕೆಲವೇ ತಿಂಗಳುಗಳ್ಳಿ ಈ ಸೇವೆ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ.

English summary
Airlines companies are planing to give WI-fi services in flight while on board. passengers can browse, chat, upload pictures to social media while traveling in flight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X