ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮ್ಮ ಆಲಯಂ, ಜಯಲಲಿತಾರಿಗೊಂದು ದೇಗುಲ

By Mahesh
|
Google Oneindia Kannada News

ಚೆನ್ನೈ, ಮಾ.01:: ತಮಿಳರ ಪಾಲಿನ 'ಅಮ್ಮ' ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರಿಗಾಗಿ ವಿಶೇಷ ದೇಗುಲವೊಂದು ವೆಲ್ಲೂರಿನಲ್ಲಿ ನಿರ್ಮಾಣವಾಗುತ್ತಿದೆ.ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ದೇಗುಲ ನಿರ್ಮಾಣವಾಗಿತ್ತು.

ಎಐಎಡಿಎಂಕೆ ಪಕ್ಷದ ನಿಷ್ಠಾವಂತ ಕಾರ್ಯಕರ್ತ 37 ವರ್ಷ ವಯಸ್ಸಿನ ಎಪಿ ಶ್ರೀನಿವಾಸನ್ ಅವರು 'ಅಮ್ಮ ಆಲಯಂ' ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಎಂಜಿಆರ್ ಯೂಥ್ ವಿಂಗ್ ನ ಕಾರ್ಯದರ್ಶಿಯಾಗಿರುವ ಶ್ರೀನಿವಾಸನ್ ಅವರು ಜಯಾ ಅಮ್ಮನ ಪರಮಭಕ್ತ.

'Amma Aalayam': Soon, a temple for Tamil Nadu CM Jayalalithaa

ದೇಗುಲ ವಿಶೇಷ: ವೆಲ್ಲೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಇಯೆಪ್ಪೆಡು ಗ್ರಾಮದಲ್ಲಿ 1,200 ಚದರ ಅಡಿ ವಿಸ್ತೀರ್ಣದ ಭೂಮಿಯಲ್ಲಿ,50 ಲಕ್ಷ ರು ವೆಚ್ಚದಲ್ಲಿ ಈ ದೇಗುಲ ನಿರ್ಮಾಣವಾಗುತ್ತಿದೆ. 6 ಅಡಿ ಎತ್ತರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದ್ದು, ಪ್ರತಿಮೆಯ ಸುತ್ತಾ ಪ್ರಭಾವಳಿಯಂತೆ ಜಯಲಲಿತಾ ಅವರ ಸಾಧನೆಗಳ ಚಿತ್ರಣ ಸಿಗಲಿದೆಯಂತೆ. [ಫ್ಯಾನ್ಸ್ ಪಾಲಿನ ದೇವರು: ಸೆಲೆಬ್ರಿಟಿಗಳಿಗೊಂದು ಗುಡಿ]

ಜೊತೆಗೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗಳಾದ ಸಿ.ಎನ್ ಅಣ್ಣಾದೊರೈ ಹಾಗೂ ಎಂಜಿ ರಾಮಚಂದ್ರನ್ ಅವರ ಪ್ರತಿಮೆಗಳನ್ನು ದೇಗುಲದ ಆವರಣದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ.

ಈ ಹಿಂದೆ ರಾಜ್ ಕೋಟ್ ನ ಕೊಥಾರಿಯಾ ರಸ್ತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ದೇಗುಲ ನಿರ್ಮಾಣ ಮಾಡಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಓಂ ಯುವ ಸಮೂಹದ ಜಯೇಶ್ ಪಟೇಲ್ ಅವರು ಮೋದಿ ದೇಗುಲದ ನಿರ್ಮಾಣದ ಹೊಣೆ ಹೊತ್ತಿದ್ದರು.

English summary
After PM Narendra Modi, now a 'devotee' of Tamil Nadu Chief Minister J Jayalalithaa has said that soon a temple dedicated to her will come up near Vellore in Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X