ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುತ್ರ ಕೇಂದ್ರ ಸಚಿವನಾದರೂ ಕೃಷಿ ಕಾರ್ಮಿಕರಾಗಿ ದುಡಿಯುವ ತಂದೆ-ತಾಯಿ

|
Google Oneindia Kannada News

ಚೆನ್ನೈ, ಜು.18: ಪುತ್ರ ಕೇಂದ್ರ ಸಚಿವನಾಗುವ ಮೂಲಕ ರಾಜಕೀಯದ ಏರಿಕೆಯನ್ನು ಕಂಡು ಬಂದಿದ್ದರು, ಪೋಷಕರು ಮಾತ್ರ ಕೃಷಿ ಕಾರ್ಮಿಕರಾಗಿ ದುಡಿದು ದಿನ ಸಾಗಿಸುವ ಸ್ವಾಭಿಮಾನಿ ಜೀವಿಗಳಾಗಿದ್ದಾರೆ.

ಇತ್ತೀಚೆಗೆ ಎಲ್‌ ಮುರುಗನ್‌ರನ್ನು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ, ಮಾಹಿತಿ ಪ್ರಸಾರ ಸಚಿವರಾಗಿ ನೇಮಿಸಲಾಯಿತು. ಕೇಂದ್ರ ಸಚಿವರಾಗುವ ಮೊದಲು ಮುರುಗನ್ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿದ್ದರು.

ರಾಜಕೀಯ ಬಿಟ್ಟು ಗದ್ದೆಗಿಳಿದು ಉಳುಮೆ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷರು!ರಾಜಕೀಯ ಬಿಟ್ಟು ಗದ್ದೆಗಿಳಿದು ಉಳುಮೆ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷರು!

ಆದರೆ ಪೋಷಕರಾದ ಲೋಗನಾಥನ್ ಮತ್ತು ವರುದಮ್ಮಲ್, ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ಕೊನೂರ್ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿಯೇ ಕೃಷಿ ಕಾರ್ಮಿಕರಾಗಿ ದಿನಸಾಗಿಸುತ್ತಿದ್ದಾರೆ.

Son becomes Union minister but parents choose to continue as farm labourers

ವರದಿಯ ಪ್ರಕಾರ, ದಂಪತಿಗಳು ಸ್ವತಂತ್ರವಾಗಿ ತನ್ನ ಜೀವನವನ್ನು ನಡೆಸಲು ಬಯಸಿದ್ದು, ಅದರಂತೆ ಜೀವಿಸುತ್ತಿದ್ದಾರೆ. ಲೋಗನಾಥನ್ ಮತ್ತು ವರುದಮ್ಮಲ್ ದಲಿತ ಉಪವಿಭಾಗದ ಅರುಂತಥಿಯಾರ್ ಸಮುದಾಯದವರು ಎಂದು ವರದಿ ಉಲ್ಲೇಖಿಸಿದೆ.

ದಂಪತಿಗಳು ಇಬ್ಬರ ಪುತ್ರ ಕೇಂದ್ರ ಸಚಿವನಾಗಿದ್ದರೂ ಈ ದಂಪತಿಗಳಿಬ್ಬರು ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮುರುಗನ್ ಕೇಂದ್ರ ಸಚಿವರಾಗಲಿದ್ದಾರೆ ಎಂಬ ಸುದ್ದಿ ಕೇಳಿ ಬಂದ ಸಂದರ್ಭದಲ್ಲೂ ಈ ದಂಪತಿ ಕೃಷಿ ಕೂಲಿ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ವರದಿಯಾಗಿದೆ.

ಸರ್ಕಾರದ ನಿರ್ಲಕ್ಷ್ಯ; ರಾಮನಗರದಲ್ಲಿ 26 ಹಸುಗಳು ಬಲಿಸರ್ಕಾರದ ನಿರ್ಲಕ್ಷ್ಯ; ರಾಮನಗರದಲ್ಲಿ 26 ಹಸುಗಳು ಬಲಿ

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ತಾಯಿ ವರುದಮ್ಮಲ್, ''ಮಗನ ಬಗ್ಗೆ ಹೆಮ್ಮೆಪಡುತ್ತೇವೆ. ಆದರೆ ನಾನು ಮಗನ ವೃತ್ತಿಜೀವನದ ಭವಿಷ್ಯವನ್ನು ಹೆಚ್ಚಿಸಲು ಏನನ್ನೂ ಮಾಡಲಿಲ್ಲ,'' ಎಂದು ಹೇಳಿದ್ದಾರೆ. ಹಣ ಸಾಲ ಪಡೆದು, ಸ್ವಂತ ಶ್ರಮದಿಂದ, ಪೋಷಕರು ತಮ್ಮ ಮಗನ ಶಿಕ್ಷಣವನ್ನು ಬೆಂಬಲಿಸಿದರು ಎಂದು ವರದಿ ತಿಳಿಸಿದೆ.

ಮುರುಗನ್‌ ಅಭ್ಯಾಸ ಮಾಡುತ್ತಿರುವ ವಕೀಲರಾಗಿದ್ದು, ಚೆನ್ನೈನ ಡಾ.ಅಂಬೇಡ್ಕರ್ ಕಾನೂನು ಕಾಲೇಜಿನಲ್ಲಿ ಕಾನೂನು ಅಧ್ಯಯನ ಮಾಡಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರಾದರು. ವಕೀಲರಾಗಿ ತಮ್ಮ ವೃತ್ತಿಜೀವನದ ಅವಧಿಯಲ್ಲಿ ಬಿಜೆಪಿಯಹಲವಾರು ಪ್ರಕರಣಗಳ ವಕೀಲರಾಗಿದ್ದರು.

ಇನ್ನು ಈ ಬಗ್ಗೆ ವರದಿಯನ್ನು ಉಲ್ಲೇಖಿಟಿ ಟ್ವೀಟ್‌ ಮಾಡಿರುವ ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ, ''ಹೃದಯಸ್ಪರ್ಶಿ ಕಥೆ. ಮಗ ಕೇಂದ್ರ ಮಂತ್ರಿ, ಆದರೆ ಎಲ್ ಮುರುಗನ್ ತಾಯಿ ಮತ್ತು ತಂದೆ ಸ್ವತಂತ್ರವಾಗಿ ಹೊಲದಲ್ಲಿ ಶ್ರಮಿಸುತ್ತಿದ್ದಾರೆ. ಹೃದಯಂತರಾಳದ ಧನ್ಯವಾದ,'' ಎಂದು ಹೇಳಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Son L Murugan becomes Union minister but parents choose to continue as farm labourers. Read more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X