ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾತಿ, ಧರ್ಮವಿಲ್ಲದ ಪ್ರಮಾಣ ಪತ್ರ ಪಡೆದ ಭಾರತದ ಮೊದಲ ಪ್ರಜೆ ಸ್ನೇಹಾ

|
Google Oneindia Kannada News

ಚೆನ್ನೈ, ಫೆಬ್ರವರಿ 26: ನಮಗೆಲ್ಲರಿಗೂ ತಿಳಿದಿರುವ ಹಾಗೆ ಎಲ್ಲಿಗೆ ಹೋದರೂ, ಕೆಲವು ಸರ್ಟಿಫಿಕೇಟ್ ಪಡೆಯುವಾಗ ಅಥವಾ ಅರ್ಜಿ ಸಲ್ಲಿಸುವಾಗ ಖಡ್ಡಾಯವಾಗಿ ಒಂದು ಕಾಲಂ ಭರ್ತಿ ಮಾಡಬೇಕಾಗುತ್ತದೆ ಅದೇ ಜಾತಿ.

ಆ ಕಾಲಂನಲ್ಲಿ ನಾವು ಜಾತಿಯ ಜೊತೆ ಧರ್ಮವನ್ನೂ ನಮೂದಿಸಬೇಕಾಗುತ್ತದೆ. ಕೆಲವು ಕಾನೂನಿನ ಕಾರಣಗಳಿಗಾಗಿ ನಾವು ಈ ಕಾಲಂ ಅನ್ನು ಭರ್ತಿ ಮಾಡಲೇಬೇಕಾಗುತ್ತದೆ. ಆದರೆ ತಮಿಳುನಾಡಿನ ತಿರುಪತುರ್ ಮಹಿಳೆಯೊಬ್ಬರು ಚಿಕ್ಕವರಿದ್ದಾಗಿನಿಂದಲೂ ಜಾತಿಯ ಕಾಲಂನಲ್ಲಿ ತಮ್ಮ ಜಾತಿಯನ್ನೇ ನಮೂದಿಸಿಲ್ಲ.

ಜನನ, ಮರಣ ಪ್ರಮಾಣ ಪತ್ರ ಪಡೆಯಲು ಶುಲ್ಕ ಇಲ್ಲಜನನ, ಮರಣ ಪ್ರಮಾಣ ಪತ್ರ ಪಡೆಯಲು ಶುಲ್ಕ ಇಲ್ಲ

ಇನ್ನೊಂದು ಸ್ವಾರಸ್ಯವೆಂದರೆ ಇದೀಗ ಈ ಮಹಿಳೆ ತಹಶೀಲ್ದಾರ್ ಬಳಿ "ನನಗೆ ಯಾವುದೇ ಜಾತಿ, ಧರ್ಮವಿಲ್ಲ' ಎಂಬ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದಾರೆ. ಹೌದು. ಈ ಮಹಿಳೆಯ ಹೆಸರು ಎಂ.ಎ.ಸ್ನೇಹಾ ( 35). ವೃತ್ತಿಯಲ್ಲಿ ವಕೀಲೆ.

Sneha got caste and religion less person certificate

ಬಹಳ ಸಮಯದಿಂದ ಈ ರೀತಿ ಪ್ರಮಾಣಪತ್ರ ಪಡೆಯಬೇಕೆಂದುಕೊಂಡಿದ್ದ ಸ್ನೇಹಾಗೆ ಕೊನೆಗೂ ತಿರುಪಟ್ಟೂರಿನ ತಹಶೀಲ್ದಾರ್ ಟಿ.ಎಸ್‌.ಸತ್ಯಮೂರ್ತಿ ಬಳಿ ಪ್ರಮಾಣ ಪತ್ರ ಸಿಕ್ಕಿದೆ. ಈ ಮೂಲಕ ಇಂತಹದೊಂದು ಪ್ರಮಾಣ ಪತ್ರ ಪಡೆದುಕೊಂಡ ದೇಶದ ಮೊದಲ ಪ್ರಜೆ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ ಸ್ನೇಹಾ.

ಸ್ನೇಹಾ ಯಾಕೆ ಇಂತಹದೊಂದು ಪ್ರಮಾಣ ಪತ್ರ ಪಡೆದರು? ಅವರ ಉದ್ದೇಶವೇನು? ಮುಂತಾದ ವಿವರಗಳಿಗಾಗಿ ಈ ಲೇಖನ ಓದಿ...

 ಜನನ ಪ್ರಮಾಣ ಪತ್ರ ಪಡೆಯುವುದು ಹೇಗೆ? ಜನನ ಪ್ರಮಾಣ ಪತ್ರ ಪಡೆಯುವುದು ಹೇಗೆ?

ಸ್ನೇಹಾ ಕುಟುಂಬದವರು ಮೊದಲಿನಿಂದಲೂ ಜಾತಿ ಮತ್ತು ಧರ್ಮದ ವಿರೋಧಿಗಳು. ಅವರು ಬೆಳೆದು ಬಂದ ಮನೆಯ ವಾತವರಣವೂ ಹಾಗೆಯೇ ಇತ್ತು. "ಅತ್ತೆ, ಮಾವ ಕೂಡ ವಕೀಲ ವೃತ್ತಿ ಮಾಡುತ್ತಿದ್ದಾರೆ. ಮತ್ತೆ ಅವರಿಬ್ಬರೂ ಬೇರೆಬೇರೆ ಜಾತಿಯವರು. ಎಲ್ಲಕ್ಕಿಂತ ಹೆಚ್ಚಾಗಿ ವಿಚಾರವಾದಿಗಳು ಮತ್ತು ಎಡಪಂಥೀಯರು" ಎಂದು ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ ಸ್ನೇಹಾ.

 ಆನ್ ಲೈನ್ ನಲ್ಲಿ ಪ್ರಮಾಣ ಪತ್ರ: ಫೆಬ್ರವರಿ ಮೊದಲ ವಾರದಲ್ಲಿ ಚಾಲನೆ ಆನ್ ಲೈನ್ ನಲ್ಲಿ ಪ್ರಮಾಣ ಪತ್ರ: ಫೆಬ್ರವರಿ ಮೊದಲ ವಾರದಲ್ಲಿ ಚಾಲನೆ

"ಯಾವುದೇ ಪ್ರಮಾಣಪತ್ರ ಕೊಟ್ಟಾಗಲೂ ನಾನು ಜಾತಿ, ಧರ್ಮದ ಜಾಗವನ್ನು ಭರ್ತಿ ಮಾಡುತ್ತಿರಲಿಲ್ಲ. ಶಾಲೆಯ ಪ್ರಮಾಣ ಪತ್ರಗಳಲ್ಲೂ ಕೂಡ. ಜಾತಿ, ಧರ್ಮವನ್ನು ಹೊರತುಪಡಿಸಿ ನನಗೊಂದು ಗುರುತು ಬೇಕಿತ್ತು 2010ರಿಂದಲೂ ಜಾತಿ, ಧರ್ಮವಿಲ್ಲದ ಗುರುತು ಪಡೆಯಲು ಯತ್ನಿಸಿದ್ದೇನೆ. ಆದರೆ, ಅಧಿಕಾರಿಗಳು ಇದಕ್ಕೆ ಕೆಲವು ಕಾರಣಗಳನ್ನು ನೀಡಿ ತಿರಸ್ಕರಿಸುತ್ತಿದ್ದರು. ಕೆಲವರಂತೂ ಭಾರತದಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಹೇಳಿದ್ದರು. 2017ರಲ್ಲಿ ''ನಾನು ಯಾವುದೇ ಸರಕಾರಿ ಯೋಜನೆಗಳು ಅಥವಾ ಮೀಸಲಾತಿಯನ್ನು ಪಡೆದುಕೊಂಡಿಲ್ಲ. ಆದ್ದರಿಂದ ಮನವಿಯನ್ನು ಸ್ವೀಕರಿಸಿ" ಎಂದು ಹೇಳಿದ್ದೆ ಎಂದು ಸ್ನೇಹಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸ್ನೇಹಾ ಮತ್ತು ಅವರ ಪತಿ ಕೆ.ಪ್ರತಿಭಾ ರಾಜ್ ಸಮಾನ ಮನಸ್ಕರಾಗಿದ್ದು, ತಮ್ಮ ಮೂರು ಜನ ಮಕ್ಕಳಿಗೂ ಕೂಡ ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಧರ್ಮದ ಹೆಸರಿಟ್ಟಿದ್ದಾರೆ. (ಆಧಿರೈ ನಾಸ್ರೀನ್, ಆದಿಲಾ ಐರೀನ್ ಮತ್ತು ಆರಿಫಾ ಜೆಸ್ಸಿ) ಅಷ್ಟೇ ಅಲ್ಲ, ಮಕ್ಕಳ ಶಾಲಾ ಪ್ರಮಾಣ ಪತ್ರಗಳಲ್ಲೂ ಜಾತಿ, ಧರ್ಮದ ಜಾಗವನ್ನು ಭರ್ತಿ ಮಾಡಿಲ್ಲ ಎಂದು ಆಕೆಯ ಪತಿ ತಿಳಿಸಿದ್ದಾರೆ.

"ಇನ್ನು ಕೆಲವೇ ದಿನಗಳಲ್ಲಿ ತಮ್ಮ ಮೂರು ಜನ ಮಕ್ಕಳು ಹಾಗೂ ನನ್ನ ಸಹೋದರಿಯರು ಯಾವುದೇ ಜಾತಿ, ಧರ್ಮವಿಲ್ಲ ಎಂಬ ಪ್ರಮಾಣ ಪತ್ರವನ್ನು ಪಡೆಯಲಿದ್ದಾರೆ" ಎಂದು ಸಂತಸದಿಂದ ನುಡಿಯುತ್ತಾರೆ ಸ್ನೇಹಾ.

English summary
Recently, the Tamil Nadu government issued Sneha a formal certificate that she is a caste and religion less person. Perhaps she is the first one in the country to be formally certified so.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X