• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿ ಸಂದರ್ಶಕ ಅಕ್ಷಯ್ ಪೌರತ್ವದ ಬಗ್ಗೆ ಸಿದ್ದಾರ್ಥ್ ಕುಹಕ

|

ಚೆನ್ನೈ, ಮೇ 05: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಬೆಂಬಲಿಗರ ವಿರುದ್ಧ ನಿರಂತರವಾಗಿ ಟ್ವೀಟ್ ಮಾಡುತ್ತಾ ಬಂದಿರುವ ನಟ ಸಿದ್ದಾರ್ಥ್ ಅವರು ಮತ್ತೊಮ್ಮೆ ಮೋದಿ ಸಂದರ್ಶಕ ಅಕ್ಷಯ್ ಪೌರತ್ವದ ಬಗ್ಗೆ ಸಿದ್ದಾರ್ಥ್ ಕುಹಕವಾಡಿದ್ದಾರೆ.

ಪ್ರಧಾನಿ ಮೋದಿ ಅವರು ನಟ ಅಕ್ಷಯ್ ಕುಮಾರ್ ಅವರ ಜತೆ ರಾಜಕೀಯೇತರ ಮಾತುಕತೆ ನಡೆಸಿದ್ದರ ಬಗ್ಗೆ ನಟ ಸಿದ್ದಾರ್ಥ್ ಅವರು ಈ ಹಿಂದೆ ಕೂಡಾ ಟ್ವೀಟ್ ಮಾಡಿದ್ದರು. ಸಂದರ್ಶಕ ಅಕ್ಷಯ್ ಅವರ ಬಗ್ಗೆ ಪ್ರತಿಕ್ರಿಯಿಸಿ ಅಕ್ಷಯ್​ ಕುಮಾರ್ ಅವರು ಓರ್ವ ಖಳನಾಯಕರಂತಾಗಿ ತುಂಬಾ ಕೆಳಮಟ್ಟದಲ್ಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಮೋದಿ ಸಂದರ್ಶಕ ಅಕ್ಷಯ್ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸಿದ್ದಾರ್ಥ್

ಈಗ ಅಕ್ಷಯ್ ಅವರು ಭಾರತದ ಪೌರತ್ವ ಹೊಂದಿರದೆ ಕೆನಡಾದ ಪೌರತ್ವ ಪಡೆದಿರುವ ಅಕ್ಷಯ್, ಪ್ರಧಾನಿ ಮೋದಿ ಅವರನ್ನು ಸಂದರ್ಶಿಸಿದ್ದರ ಬಗ್ಗೆ ಪರೋಕ್ಷವಾಗಿ ಟೀಕಿಸಿದ್ದಾರೆ. ಅಕ್ಷಯ್ ಹೆಸರನ್ನು ಪ್ರಸ್ತಾಪಿಸದೆ ಟ್ವೀಟ್ ಮಾಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬಳಸಿಕೊಂಡು, ಅವರ ಅಧಿಕೃತ ಖಾತೆಗೂ ಟ್ಯಾಗ್ ಮಾಡಿ ಸಿದ್ದಾರ್ಥ್ ಅವರು ಮಾಡಿರುವ ಟ್ವೀಟ್ ಗೆ ಭಾರಿ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ. ಸಿದ್ಧಾರ್ಥ್​ ಅವರ ಟ್ವೀಟ್​ಗೆ ಮೋದಿ ಹಾಗೂ ಅಕ್ಷಯ್ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ.

ಅಕ್ಷಯ್ ಅವರು ಪೌರತ್ವ ವಿವಾದದ ಬಗ್ಗೆ ಪ್ರತಿಕ್ರಿಯಿಸಿ, ಕೆನಡಾ ಪೌರತ್ವ ಹೊಂದಿರುವುದನ್ನು ಒಪ್ಪಿಕೊಂಡಿದ್ದರು. ಆದರೆ, ಭಾರತದಲ್ಲೆ ಹೆಚ್ಚು ತೆರಿಗೆ ಪಾವತಿದಾರನಾಗಿದ್ದೇನೆ ಎಂದಿದ್ದರು.

ಸಿದ್ದಾರ್ಥ್ ಟ್ವೀಟ್ ನಲ್ಲಿ ಏನಿದೆ?

"ಹಾಯ್ ಡೊನಾಲ್ಡ್ ಟ್ರಂಪ್, ನೀವು ಮತ್ತೊಂದು ಚುನಾವಣೆಗೆ ಸಿದ್ಧರಾಗುತ್ತಿದ್ದೀರಿ. ಚುನಾವಣೆ ಸಂದರ್ಭದಲ್ಲಿ ನಾನು ನಿಮ್ಮನ್ನು ಸಂದರ್ಶಿಸಿದರೆ ಹೇಗೆ? ನೀವು ಹೇಗೆ ಹಣ್ಣು ತಿನ್ನುತ್ತೀರಿ, ನಿಮ್ಮ ನಿದ್ರೆ-ಕೆಲಸದ ಸಮಯ, ವ್ಯಕ್ತಿತ್ವ ಇತ್ಯಾದಿ ಬಗ್ಗೆ ತಿಳಿಯುವ ಕುತೂಹಲ ಇದೆ. ಅಂದಹಾಗೆ ನಾನು ಭಾರತೀಯ ಪಾಸ್‍ ಪೋರ್ಟ್ ಹೊಂದಿದ್ದೇನೆ, ಏನಂತ ನೀವು ನನಗೆ ಡೈರೆಕ್ಟ್ ಮೆಸೇಜ್ ಮಾಡಿ....." ಎಂದು ಕೇಳಿಕೊಂಡಿದ್ದಾರೆ.

ನಿಮ್ಗೆ ಈಗ ಮಾಡಲು ಬೇರೆ ಕೆಲ್ಸ ಇಲ್ಲ ಅನ್ಸುತ್ತೆ

ನಿಮ್ಗೆ ಈಗ ಮಾಡಲು ಬೇರೆ ಕೆಲ್ಸ ಇಲ್ಲ ಅನ್ಸುತ್ತೆ, ನೀವು ಈ ಬಿಡುವಿನ ವೇಳೆಯಲ್ಲಿ ಏನು ಮಾಡುತ್ತಿದ್ದೀರಿ. ಸಮಯವನ್ನು ಹೇಗೆ ವ್ಯರ್ಥ ಮಾಡುತ್ತೀರಿ, ಕಡಿಮೆ ಕೆಲ್ಸ ಮಾಡುವುದು ಹೇಗೆ ಎಂಬುದರ ಬಗ್ಗೆ ನಿಮ್ಮನ್ನು ಸಂದರ್ಶಿಸಬೇಕಿದೆ. ನನ್ನ ಬಳಿ ರೇಷನ್ ಕಾರ್ಡ್ ಇದೆ ಎಂದು ಸಾರ್ವಜನಿಕರೊಬ್ಬರು ಟ್ವೀಟ್ ಮಾಡಿದ್ದಾರೆ.

ಕೆನಡಾ ಪಾಸ್‌ಪೋರ್ಟ್ ಇದೆ, ಆದರೆ ತೆರಿಗೆ ಕಟ್ಟುವುದು ಭಾರತಕ್ಕೆ: ಅಕ್ಷಯ್ ಕುಮಾರ್

ಟ್ರಂಪ್ ಸಂದರ್ಶನ ಮಾಡಲು ಸಾಧ್ಯ

ಯುಎಸ್ ನಾಗರಿಕರಿಗಾಗಿ ಒಳ್ಳೆ ಕಾರ್ಯ ಮಾಡಿರಬೇಕು, ಯುಎಸ್ ಆರ್ಮಿಗೆ ಸೇವೆ ಸಲ್ಲಿಸಿರಬೇಕು, ನೈಸರ್ಗಿಕ ವಿಕೋಪಕ್ಕೆ ಯಥೇಚ್ಛವಾಗಿ ದಾನ ಮಾಡಿರಬೇಕು. ಹೆಚ್ಚು ತೆರಿಗೆ ಕಟ್ಟಿರಬೇಕು ಆಗ ನೀವು ಕೂಡಾ ಸಂದರ್ಶಕರಾಗಬಹುದು.

ಅವರಿಗೆ ಹಾವಾಡಿಸಲು ಬರುವುದಿಲ್ಲ

ಆದರೆ, ಅವರಿಗೆ ಹಾವಾಡಿಸಲು ಬರುವುದಿಲ್ಲ, ಚುನಾವಣಾ ಭಾಷಣ ಮಾಡುವುದಿಲ್ಲ, ವಿಶ್ವಕಪ್ ಫುಟ್ಬಾಲ್ ನಲ್ಲಿ ಇಟಲಿ ಆಡುವುದನ್ನು ನೋಡುತ್ತಾರೆ, ಮುಸ್ಲಿಂ ಬಹುಸಂಖ್ಯಾತ ಕ್ಷೇತ್ರದಲ್ಲಿ ನಿಲ್ಲುವುದಿಲ್ಲ ಎಂದು ಟ್ರಂಪ್ ಬಗ್ಗೆ ಬರೆಯಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
South Indian actor Siddharth is known for making strong political comments on his social media pages. Recently, the actor in a single tweet managed to troll President of the US, Donald Trump, Bollywood actor Akshay Kumar and India's prime minister Narendra Modi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more