ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಸ್ತ್ರಚಿಕಿತ್ಸೆಯ ನಂತರ ಸಿದ್ದಗಂಗಾ ಶ್ರೀಗಳು ಹೇಗಿದ್ದಾರೆ?

|
Google Oneindia Kannada News

ಚೆನ್ನೈ, ಡಿಸೆಂಬರ್ 10: ಚೆನ್ನೈ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾದ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ಸ್ಥಿರವಾಗಿದ್ದು,ಅ ವರು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚೆನ್ನೈನ ರೇಲಾ ಇನ್ ಸ್ಟಿಟ್ಯೂಟ್ ಅಂಡ್ ಮೆಡಿಕಲ್ ಸೆಂಟರ್ ನ ಪ್ರಖ್ಯಾತ ವೈದ್ಯರಾದ ಮಹಮ್ಮದ್ ರೇಲಾ ಅವರ ನೇತೃತ್ವದಲ್ಲಿ ಶನಿವಾರ ಮೂರು ಗಂಟೆಗಳ ಕಾಲ ಹೃದಯದ ಯಶಸ್ವೀ ಶಸ್ತ್ರಚಿಕಿತ್ಸೆ ನಡೆದಿತ್ತು. ಬಿಜಿಎಸ್ ನ ಡಾ. ರವೀಂದ್ರ ಅವರ ಉಪಸ್ಥಿತಿಯಲ್ಲೇ ಶಸ್ತ್ರಚಿಕಿತ್ಸೆ ನಡೆದಿತ್ತು.

ಸಿದ್ದಗಂಗಾ ಶ್ರೀಗಳ ಭೇಟಿಗೆ ತೆರಳಿದ್ದ ಯಡಿಯೂರಪ್ಪನವರಿಗೆ ಕಾದಿತ್ತು ಅಚ್ಚರಿ!ಸಿದ್ದಗಂಗಾ ಶ್ರೀಗಳ ಭೇಟಿಗೆ ತೆರಳಿದ್ದ ಯಡಿಯೂರಪ್ಪನವರಿಗೆ ಕಾದಿತ್ತು ಅಚ್ಚರಿ!

ಶಸ್ತ್ರ ಚಿಕಿತ್ಸೆಯಾಗಿರುವುದರಿಂದ ಶ್ರೀಗಳು 8 ರಿಂದ 10 ವಾರಗಳ ವಿಶ್ರಾಂತಿ ಪಡೆಯಬೇಕಾಗುತ್ತದೆಂದು ವೈದ್ಯರು ತಿಳಿಸಿದ್ದು, 111 ವರ್ಷ ವಯಸ್ಸಿನ ಶ್ರೀಗಳು ವಿಶ್ರಾಂತಿ ಪಡೆಯುತ್ತಿದ್ದಾರೆ.

Siddaganga seer Shri Shivakumara Swamis health updates

ಆಸ್ಪತ್ರೆಯಲ್ಲಿ ಮಲಗಿಯೇ ಇರಲು ಬೇಸರ ಎನ್ನುತ್ತಿರುವ ಶ್ರೀಗಳು, ತಮ್ಮನ್ನು ಎತ್ತಿ ಬೆಡ್ ಮೇಲೆ ಕೂರಿಸುವಂತೆ ವೈದ್ಯರನ್ನು ಕೋರಿದ್ದರು. ಆದರೆ ಮೇಜರ್ ಸರ್ಜರಿಯಾಗಿರುವುದರಿಂದ ಕೆಲ ದಿನ ಮಲಗಿಯೇ ಇರುವಂತೆ ವೈದ್ಯರು ತಿಳಿಸಿದರು.

ಶ್ರೀಗಳನ್ನು ಕಾಣಲು ಅವರ ಶಿಷ್ಯರು ಮತ್ತು ಕೆಲ ಆಪ್ತ ಸಮುದಾಯದ ಚೆನ್ನೈ ಆಸ್ಪತ್ರೆಗೇ ತೆರಳುತ್ತಿದೆ.

ಚೆನ್ನೈಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದಗಂಗಾ ಶ್ರೀ ಈಗ ಹೇಗಿದ್ದಾರೆ?ಚೆನ್ನೈಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದಗಂಗಾ ಶ್ರೀ ಈಗ ಹೇಗಿದ್ದಾರೆ?

ಶ್ರೀಗಳನ್ನು ಯಾವಾಗ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಶ್ರೀಗಳಿಗೆ ಪಿತ್ತನಾಳದ ಸಣ್ಣ ಶಸ್ತ್ರಚಿಕಿತ್ಸೆಯೊಂದು ಆಗಬೇಕಿದ್ದು, ಕೆಲ ದಿನ ಅವರು ಚೆನ್ನೈ ಆಸ್ಪತ್ರೆಯಲ್ಲೇ ಉಳಿಯಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ.

ಸಿದ್ದಗಂಗಾ ಶ್ರೀಗಳಿಗೆ ಚೆನ್ನೈನಲ್ಲಿ ಯಶಸ್ವೀ ಶಸ್ತ್ರಚಿಕಿತ್ಸೆ, ಶ್ರೀಗಳು ಕ್ಷೇಮ ಸಿದ್ದಗಂಗಾ ಶ್ರೀಗಳಿಗೆ ಚೆನ್ನೈನಲ್ಲಿ ಯಶಸ್ವೀ ಶಸ್ತ್ರಚಿಕಿತ್ಸೆ, ಶ್ರೀಗಳು ಕ್ಷೇಮ

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿರುವ ಸ್ವಾಮೀಜಿ ಅವರ ಹೃದಯದಲ್ಲಿ ಹನ್ನೊಂದು ಸ್ಟೆಂಟ್ ಗಳನ್ನು ಅಳವಡಿಸಲಾಗಿದ್ದು, ಅವುಗಳನ್ನು ಬದಲಿಸುವ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದರು.

English summary
Siddaganga seer Shri Shivakumara Swami who was undergoing treatment in a Chennai hosptal is stable now. He is taking bed rest for few days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X