ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೈಂಗಿಕ ಕಿರುಕುಳ: ಶಿಕ್ಷಕನ ವಿರುದ್ದ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ದೂರು

|
Google Oneindia Kannada News

ಚೆನ್ನೈ, ಮೇ 28: ಚೆನ್ನೈನಲ್ಲಿ ಶಾಲಾ ಶಿಕ್ಷಕನನ್ನು ವಿದ್ಯಾರ್ಥಿಗಳ ಮೇಲೆ ಲೈಂಗಿಕ ಕಿರುಕುಳ ನಡೆಸಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಇದಾದ ಕೆಲವು ದಿನಗಳ ನಂತರ ಚೆನ್ನೈನ ಮತ್ತೊಂದು ಶಾಲೆಯ ವಿದ್ಯಾರ್ಥಿಗಳು ತಮಗೆ ನಡೆದಿರುವ ಲೈಂಗಿಕ ಕಿರಕುಳದ ಬಗ್ಗೆ ಬಹಿರಂಗ ಪಡಿಸಲು ಮುಂದೆ ಬಂದಿದ್ದಾರೆ. ವಿದ್ಯಾರ್ಥಿನಿಯೋರ್ವಳು ತನ್ನ ಶಾಲೆಯ ವಾಣಿಜ್ಯ ಶಿಕ್ಷಕರೊಬ್ಬರು ವರ್ಷಗಳಿಂದ ಲೈಂಗಿಕ ಕಿರುಕುಳ ನಡೆಸುತ್ತಿದ್ದಾರೆ, ಬೆದರಿಕೆಯನ್ನೂ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾಳೆ.

ಈ ಆರೋಪದ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ ಇಮೇಲ್‌ ಒಂದರ ಮೂಲಕ ಹಳೆ ವಿದ್ಯಾರ್ಥಿಗಳು ಮಾಹಿತಿ ನೀಡುವಂತೆ ತಿಳಿಸಿದ್ದರು. ಈ ಓರ್ವ ಶಿಕ್ಷಕನ ವಿರುದ್ದ ಪ್ರಸ್ತುತ ವಿದ್ಯಾರ್ಜನೆ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಮಾಜಿ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಬ್ಯಾಚ್‌ಗಳ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಲೈಂಗಿಕ ಕಿರುಕುಳದ ಆರೋಪ ಮಾಡಿ ಸಂದೇಶ ಕಳುಹಿಸಿದ್ದಾರೆ ಎಂದು ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘ ಹೇಳಿದೆ. ಈ ಎಲ್ಲಾ ಬೆಳವಣಿಗಳ ನಡುವೆ ಶಾಲೆಯ ಆಡಳಿತವು ಆರೋಪಿ ಶಿಕ್ಷಕನನ್ನು ಅಮಾನತುಗೊಳಿಸಿದೆ.

ಲೈಂಗಿಕ ಕಿರುಕುಳ ಕೇಸ್: ತೆಹಲ್ಕಾ ಸಹ ಸಂಸ್ಥಾಪಕ ತರುಣ್ ತೇಜಪಾಲ್ ಖುಲಾಸೆಲೈಂಗಿಕ ಕಿರುಕುಳ ಕೇಸ್: ತೆಹಲ್ಕಾ ಸಹ ಸಂಸ್ಥಾಪಕ ತರುಣ್ ತೇಜಪಾಲ್ ಖುಲಾಸೆ

"ನಾವು ಈ ಆರೋಪವನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ವಿಚಾರಣೆ ಮತ್ತು ವರದಿಗಾಗಿ ನಾವು ಅದನ್ನು ಆಂತರಿಕ ಸಮಿತಿಗೆ ಸೂಚಿಸಿದ್ದೇವೆ. ವಿಚಾರಣೆ ನ್ಯಾಯಯುತ ಮತ್ತು ಪಾರದರ್ಶಕವಾಗಿರುತ್ತದೆ. ಎಲ್ಲಾ ದೂರುಗಳು ಮತ್ತು ಆರೋಪಗಳನ್ನು ಸ್ವೀಕರಿಸಲಾಗುತ್ತದೆ. ಅದರ ವಿಚಾರಣೆ ನಡೆಸಲು ಸಮಿತಿಗೆ ತಿಳಿಸಲಾಗುತ್ತದೆ. ವಿಚಾರಣಾ ವರದಿಯನ್ನು ಸ್ವೀಕರಿಸಿದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಾವು ವಿದ್ಯಾರ್ಥಿಗಳಿಗೆ ಭರವಸೆ ನೀಡುತ್ತೇವೆ " ಎಂದು ಶಾಲೆಯ ಆಡಳಿತವು ತಿಳಿಸಿದೆ.

Sexual harassment: Complaints from more than 500 students against a teacher in Chennai

"ಶಾಲೆಯ ಯಾವುದೇ ಹಳೆ ಅಥವಾ ಪ್ರಸ್ತುತ ವಿದ್ಯಾರ್ಜನೆ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಸಂಪರ್ಕಿಸದಂತೆ ನಾವು ಶಿಕ್ಷಕನಿಗೆ ನಿರ್ದೇಶನ ನೀಡಿದ್ದೇವೆ. ವಿದ್ಯಾರ್ಥಿಗಳನ್ನು ನಮ್ಮ ನಮ್ಮ ಸ್ವಂತ ಮಕ್ಕಳೆಂದು ಪರಿಗಣಿಸುವ ನಾವು ವಿದ್ಯಾರ್ಥಿಗಳ ಯೋಗಕ್ಷೇಮ ಮತ್ತು ಕಲ್ಯಾಣಕ್ಕೆ ಮಹತ್ವ ನೀಡುತ್ತೇವೆ. ಇಂತಹ ದುಷ್ಕೃತ್ಯ ಸಹಿಸಲಾಗದು" ಎಂದೂ ಶಾಲಾಡಳಿತ ಹೇಳಿದೆ.

ಉದ್ಯೋಗ ಸ್ಥಳದಲ್ಲಿ ಲೈಂಗಿಕ ಕಿರುಕುಳ: ಹೈಕೋರ್ಟ್ ಮಹತ್ವದ ತೀರ್ಪುಉದ್ಯೋಗ ಸ್ಥಳದಲ್ಲಿ ಲೈಂಗಿಕ ಕಿರುಕುಳ: ಹೈಕೋರ್ಟ್ ಮಹತ್ವದ ತೀರ್ಪು

ಶಿಕ್ಷಕನು ವಿದ್ಯಾರ್ಥಿಗಳಿಗೆ ತಾನು ತಂದೆಯ ಸಮಾನ ಎಂದು ಹೇಳಿ ಅವರನ್ನು ಮಡಿಲಲ್ಲಿ ಕೂರಿಸಿ ಚುಂಬಿಸುತ್ತಿದ್ದ, ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಶಿಕ್ಷಕನು ತನ್ನ ಮಾತಿಗೆ ಒಪ್ಪದ "ವಿದ್ಯಾರ್ಥಿಗಳನ್ನು ತರಗತಿಯಲ್ಲಿ ಅವಮಾನಿಸುತ್ತಿದ್ದ" ಎಂಬ ಆರೋಪವೂ ಇದೆ. ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುವುದಲ್ಲದೇ, ವಿದ್ಯಾರ್ಥಿಗಳಿಗೆ ದೈಹಿಕವಾಗಿ ಹಲ್ಲೆ ನಡೆಸಿ ಅವಾಚ್ಯ ಪದಗಳಿಂದ ಶಿಕ್ಷಕ ಬೈಯುತ್ತಿದ್ದ. ಈ ಬಗ್ಗೆ ದೂರು ನೀಡದಂತೆ ಬೆದರಿಕೆ ಹಾಕುತ್ತಿದ್ದ. ವಿದ್ಯಾರ್ಥಿಗಳ ವೈಯಕ್ತಿಕ ಮಾಹಿತಿಯನ್ನು ದುರುಪಯೋಗಪಡಿಸಿದ್ದಾನೆ" ಎಂದು ಹೇಳಲಾಗಿದೆ.

ಮಂಗಳೂರು: ಚೈಲ್ಡ್ ಕೇರ್ ಸೆಂಟರ್ ನಲ್ಲಿ ಮಕ್ಕಳಿಗೆ ಲೈಂಗಿಕ ಕಿರುಕುಳ..!

ವಿದ್ಯಾರ್ಥಿನಿಯೋರ್ವಳಿಗೆ ಬೆಳಿಗ್ಗೆ 7:00 ಗಂಟೆಗೆ ತರಗತಿ ಇರುವುದಾಗಿ ಎಸ್‌ಎಂಎಸ್ ಮಾಡಿದ್ದು, ವಿದ್ಯಾರ್ಥಿನಿ ತರಗತಿಗೆ ಹೋದಾಗ, ಆಕೆಗೆ ಶಿಕ್ಷಕ ಚುಂಬಿಸಿದ್ದಾನೆ. ದೂರು ನೀಡಲು ಮುಂದಾದಾಗ, ವಿದ್ಯಾರ್ಥಿನಿ ಸುಳ್ಳು ಹೇಳುತ್ತಿರುವುದಾಗಿ ಆರೋಪ ತಳ್ಳಿ ಹಾಕಿದ್ದಾನೆ. ವಿದ್ಯಾರ್ಥಿನಿ ಕೆನ್ನೆಗೆ ಹೊಡೆದಿದ್ದಾನೆ. ಅನೇಕ ಬಾರಿ ದೈಹಿಕ ಹಲ್ಲೆ ನಡೆಸಿದ್ದಾನೆ. ಹಾಗೆಯೇ ಕೋಚಿಂಗ್‌ ನೆಪದಲ್ಲಿ ವಿದ್ಯಾರ್ಥಿಗಳನ್ನು ನಿಲ್ಲಿಸಿ ತಬ್ಬಿಕೊಳ್ಳುವುದು, ಚುಂಬಿಸುವುದು ಮಾತ್ರವಲ್ಲದೆ, ವಿದ್ಯಾರ್ಥಿಗಳನ್ನು ತನ್ನ ತೊಡೆಯ ಮೇಲೆ ಕೂರಿಸುತ್ತಿದ್ದನು ಎಂದು ಹಳೆಯ ವಿದ್ಯಾರ್ಥಿಗಳ ಸಂಘ ಆರೋಪಿಸಿದೆ.

(ಒನ್ಇಂಡಿಯಾ ಸುದ್ದಿ)

English summary
More than 500 students Complaints Sexual harassment allegation against a teacher in Chennai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X