ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ವಿಡಿಯೋ: ಮೋದಿ-ಕ್ಸಿ 'ಅರ್ಜುನ ತಪಸ್ಸಿನ ಶಿಲಾಕೆತ್ತನೆ' ನೋಡುವಾಗ

|
Google Oneindia Kannada News

ಚೆನ್ನೈ, ಅಕ್ಟೋಬರ್ 11: ಪಲ್ಲವ ಸಾಮ್ರಾಜ್ಯದ ಶಿಲ್ಪಕಲಾ ವೈಭವ ನಗರಿಯಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವೆ 2ನೇ ಅನೌಪಚಾರಿಕ ಸಭೆ ನಡೆದಿದೆ. ಈ ಇಬ್ಬರು ನಾಯಕರು ಮಹಾಬಲಿಪುರಂನ ಶಿಲ್ಪಕಲೆಯನ್ನು ನೋಡುವಾಗ ಪ್ರಮಾದವೊಂದು ಸಂಭವಿಸಿದೆ. ಎಲ್ಲಿಂದಲೋ ಕರಿನಾಯಿಯೊಂದು ನುಸುಳಿ ಓಡಿ ಬಂದಿದೆ. ಈ ವಿಡಿಯೋ ನಿಧಾನಗತಿಯಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದೆ.

ದಿಗ್ಗಜರ ಭೇಟಿಯ ಐತಿಹಾಸಿಕ ಕ್ಷಣದಿಗ್ಗಜರ ಭೇಟಿಯ ಐತಿಹಾಸಿಕ ಕ್ಷಣ

ತಮಿಳುನಾಡಿನ ಸಾಂಪ್ರದಾಯಿಕ ಉಡುಗೆ ಬಿಳಿ ಪಂಚೆ, ಶರ್ಟ್​ ಮತ್ತು ಶಲ್ಯ ಧರಿಸಿದ್ದ ಪ್ರಧಾನಿ ಮೋದಿ ಹಾಗೂ ಕ್ಸಿ ಜಿನ್​ಪಿಂಗ್​ ಮಹಾಬಲಿಪುರಂ ದೇಗುಲವನ್ನು ಸುತ್ತು ಹಾಕಿ ಅಲ್ಲಿನ ವಾಸ್ತುಶಿಲ್ಪ ಕಂಡರು. ನರೇಂದ್ರ ಮೋದಿಯವರು ಜಿನ್​ಪಿಂಗ್​ಗೆ ವಿವರಣೆ ನೀಡಿದರು.

ಮಹಾಬಲಿಪುರಂ ದೇಗುಲದ ಬಗ್ಗೆ ಪ್ರಧಾನಿ ಮೋದಿ ವಿವರಿಸಿದ್ದನ್ನು ದುಭಾಷಿಗಳ ಸಹಾಯದಿಂದ ಜಿನ್​ಪಿಂಗ್​ ವಿವರಿಸಲಾಗುತ್ತಿತ್ತು. ವಿಶೇಷವಾಗಿ ಮಹಾಭಾರತದಲ್ಲಿ ಬರುವ ಕಿರಾತಾರ್ಜುನ ತಪಸ್ಸು ಮಾಡಿದ್ದ ಎನ್ನಲಾದ ಅರ್ಜುನ ತಪಸ್ಸಿನ ಶಿಲಾಕೆತ್ತನೆ ಸ್ಥಳದ ಬಗ್ಗೆ ಪ್ರಧಾನಿ ಮೋದಿ ತುಂಬಾ ಹೊತ್ತು ವಿವರಣೆ ನೀಡಿದರು.

ಮೋದಿ ಅವರು ಈ ಕೆತ್ತನೆ ಬಗ್ಗೆ ವಿವರಿಸುವಾಗ ಕಪ್ಪು ನಾಯಿಯೊಂದು ಎಡದಿಂದ ಬಲಕ್ಕೆ ಹಾದು ಹೋಗಿದೆ. ಅತ್ಯಂತ ಬಿಗಿ ಭದ್ರತೆ, ಸುರಕ್ಷತೆಯನ್ನು ಒದಗಿಸುವ ಈ ತಾಣದಲ್ಲಿ ಈ ರೀತಿ ಪ್ರಮಾದ ಸಂಭವಿಸಿರುವುದಕ್ಕೆ ತಮಿಳುನಾಡಿನ ಸರ್ಕಾರ ತಲೆ ತಗ್ಗಿಸುವಂತಾಗಿದೆ.

Security breach at Modi-XI summit, black dog spotted at Arjuna Penance monument

ನಂತರ ಪ್ರಧಾನಿ ಮೋದಿ ಹಾಗೂ ಚೀನಾ ಅಧ್ಯಕ್ಷ ಜಿನ್​ಪಿಂಗ್​ ಶೋರ್​ ದೇಗುಲ ತಲುಪಿ ವಿದೇಶಾಂಗ ಸಚಿವ ಎಸ್​. ಜೈಶಂಕರ್​ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್ ಅವರನ್ನು ಭೇಟಿ ಮಾಡಿದರು.

GoBackModi... ತಮಿಳುನಾಡಿನಲ್ಲಿ ಮೋದಿಗೆ ಧಿಕ್ಕಾರದ ಸುರಿಮಳೆ!GoBackModi... ತಮಿಳುನಾಡಿನಲ್ಲಿ ಮೋದಿಗೆ ಧಿಕ್ಕಾರದ ಸುರಿಮಳೆ!

ಬಂಗಾಳಕೊಲ್ಲಿ ಹೊಂದಿಕೊಂಡಿರುವ ಮಾಮಲ್ಲಪುರಂ ಬಂದರು ಜೊತೆಗೆ ವಾಸ್ತುಶಿಲ್ಪ ಶ್ರೀಮಂತಿಕೆ ಹೊಂದಿದೆ. ಪಂಚರಥ, ಕೃಷ್ಣನ ಬೆಣ್ಣೆಮುದ್ದೆ ಬಂಡೆ, ಅರ್ಜುನ ತಪಸ್ಸಿನ ಶಿಲಾಕೆತ್ತನೆ, ತೀರ ಪ್ರದೇಶದಲ್ಲಿ ದೇವಾಲಯವಿದೆ.

ಅಲ್ಲಾರಿಪ್ಪು, ಪುರಪದ್ದು, ಸೇತುಬಂಧಂ, ಭಜಾವ್​ ರೇ ಭಯ್ಯಾ ರಾಮ್​ ಗೋವಿಂದ್​ ಹರಿ, ತಿಲ್ಲಾನ ಮತ್ತು ಶಾಂತಿ ನಿಲವಾ. ಸಾಂಸ್ಕೃತಿಕ ಕಾರ್ಯಕ್ರಮ ಮುಗಿದ ಬಳಿಕ ಪ್ರಧಾನಿ ಮೋದಿ ಚೀನಾದ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ಗೆ ತಂಜಾವೂರ್​ ಚಿತ್ರವನ್ನು ಉಡುಗೊರೆಯಾಗಿ ನೀಡಿದರು.

ಪಲ್ಲವರ ಕಾಲದಲ್ಲಿ ಚೀನಾದ ಜೊತೆಗೆ ವ್ಯಾಪಾರ, ವಹಿವಾಟು ಜೋರಾಗಿ ನಡೆದಿತ್ತು ಚೀನಾ ಲಿಪಿಯ ನಾಣ್ಯ, ಶಾಸನಗಳು ತಮಿಳನಾಡಿನಲ್ಲಿ ಪತ್ತೆಯಾಗಿವೆ. ಭಾರತ-ಚೀನಾ ನಡುವೆ ರೇಷ್ಮೆ, ಸಾಂಬಾರ ಪದಾರ್ಥಗಳ ವಹಿವಾಟು ಚೆನ್ನಾಗಿದ್ದಾರೆ. ಕಾಂಚೀಪುರಂ ರೇಷ್ಮೆಗೆ ಬೇಕಾದ ಕಚ್ಚಾವಸ್ತು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು ಎಂದು ಚೀನಾದಿಂದ ಭಾರತಕ್ಕೆ ಮಹಾಬಲೀಪುರಂ ಮಾರ್ಗವಾಗಿ ಬಂದಿದ್ದ ಯಾತ್ರಿಕ ಹ್ಯೂಯೆನ್‍ತ್ಸಾಂಗ್ ಬರೆದಿದ್ದಾರೆ.

English summary
Prime Minister Narendra Modi received the Chinese President Xi Jinping at the Arjuna's penance monument and then headed towards Panch Rathas in Mahabalipuram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X