ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೇದಾಂತ ಸಂಸ್ಥೆ ತಾಮ್ರ ಘಟಕ ಮತ್ತೆ ಆರಂಭಕ್ಕೆ ಸುಪ್ರೀಂ ಹಸಿರು ನಿಶಾನೆ

|
Google Oneindia Kannada News

ಚೆನ್ನೈ/ನವದೆಹಲಿ, ಜನವರಿ 09: ದೇಶದೆಲ್ಲೆಡೆ ಭಾರಿ ಚರ್ಚೆಗೊಳಪಟ್ಟಿದ್ದ, ಗಲಭೆ, ಹಿಂಸಾಚಾರ ಪೊಲೀಸರ ಗೋಲಿಬಾರ್, 13 ಜನರ ಸಾವಿಗೆ ಕಾರಣವಾಗಿದ್ದ ವೇದಾಂತ ಸಮೂಹ ಸಂಸ್ಥೆಯ ಸ್ಟರ್ಲೈಟ್ ತಾಮ್ರ ಘಟಕ ಮತ್ತೆ ಆರಂಭಕ್ಕೆ ಸುಪ್ರೀಂಕೋರ್ಟ್ ಕೂಡಾ ಹಸಿರು ನಿಶಾನೆ ತೋರಿದೆ.

ತೂತ್ತುಕುಡಿ ಸ್ಟರ್ಲೈಟ್ ಕಾಪರ್ ಕಾರ್ಖಾನೆಗೆ ರಾಷ್ಟ್ರೀಯ ಹಸಿರು ಪ್ರಾಧಿಕಾರಿ(ಎನ್ ಜಿಟಿ) ಡಿಸೆಂಬರ್ ತಿಂಗಳಿನಲ್ಲಿ ಗ್ರೀನ್ ಸಿಗ್ನಲ್ ನೀಡಿತ್ತು. ವೇದಾಂತ ಸಮೂಹ ಸಂಸ್ಥೆಗೆ ಮೂರು ವಾರದೊಳಗೆ ಹೊಸ ಲೈಸನ್ಸ್ ನವೀಕರಣ ನೀಡಬೇಕೆಂದು ತಮಿಳುನಾಡು ಪರಿಸರ ನಿಯಂತ್ರಣ ಮಂಡಳಿಗೆ ಸೂಚಿಸಿತ್ತು. ಎನ್ ಜಿಟಿ ಆದೇಶಕ್ಕೆ ತಡೆ ನೀಡುವಂತೆ ಕೋರಿ, ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

SC paves way for re-opening of Sterlite plant in Tuticorin

ತಾಮ್ರ ಘಟಕದಿಂದ ಪರಿಸರಕ್ಕೆ ಹಾನಿಯಾಗುತ್ತಿದ್ದು, ಘಟಕದ ಸುತ್ತಮುತ್ತ ವಾಸಿಸುವ ಗ್ರಾಮಗಳು ಜನರು ನಿರಂತರವಾಗಿ ಅನಾರೋಗ್ಯದ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.

ಪರಿಸರವಾದಿಗಳಿಗೆ ಹಿನ್ನಡೆ, ತೂತ್ತುಕುಡಿ ತಾಮ್ರ ಘಟಕಕ್ಕೆ ಗ್ರೀನ್ ಸಿಗ್ನಲ್ಪರಿಸರವಾದಿಗಳಿಗೆ ಹಿನ್ನಡೆ, ತೂತ್ತುಕುಡಿ ತಾಮ್ರ ಘಟಕಕ್ಕೆ ಗ್ರೀನ್ ಸಿಗ್ನಲ್

ಹೀಗಾಗಿ ಘಟಕವನ್ನು ಸ್ಥಗಿತಗೊಳಿಸುವಂತೆ ಕಾನೂನು ಸಮರ ಮತ್ತು ಪ್ರತಿಭಟನೆಗಳು ತೀವ್ರಗೊಂಡಿತ್ತು. ಪೊಲೀಸರ ಗುಂಡೇಟಿಗೆ 12 ಮಂದಿ ಬಲಿಯಾದರು. ತಾಮ್ರ ಘಟಕ ಮುಚ್ಚಲು ತಮಿಳುನಾಡು ಸರ್ಕಾರವು ಕಳೆದ ವರ್ಷ ಮೇ ತಿಂಗಳಿನಲ್ಲಿ ಆದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.(ಪಿಟಿಐ)

English summary
The Supreme Court Tuesday paved the way for the re-opening of Vedanta's Sterlite copper plant at Tuticorin, which was at the centre of massive protests over pollution concerns, by refusing to stay the green tribunal order that had set aside the Tamil Nadu government's decision to close it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X