ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲೂನ್‌ಗೆ ಹೋಗಿ ಮಾಲೀಕನಿಂದ ಕೊರೊನಾ ಅಂಟಿಸಿಕೊಂಡ ವ್ಯಕ್ತಿ

|
Google Oneindia Kannada News

ಚೆನ್ನೈ, ಏಪ್ರಿಲ್ 27: ಕೊರೊನಾ ವೈರಸ್‌ ಭೀತಿಯಲ್ಲಿ ಇಡೀ ದೇಶವನ್ನು ಲಾಕ್‌ಡೌನ್‌ ಮಾಡಲಾಗಿದೆ. ಲಾಕ್‌ಡೌನ್‌ನಿಂದ ಕೆಲವು ಉದ್ಯಮಗಳಿಗೆ ವಿನಾಯಿತಿ ನೀಡಲಾಗಿದೆ. ಆದರೆ, ಈವರೆಗೂ ಸಲೂನ್ ಶಾಪ್‌ಗೆ ರಿಲೀಫ್ ಸಿಕ್ಕಿಲ್ಲ.

ಬಹುಶಃ ಸಲೂನ್ ಅಂಗಡಿಗೆ ವಿನಾಯಿತಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ಈಗ ಅತಂಕ ಹೆಚ್ಚಿಸಿದೆ ಇಲ್ಲೊಂದು ಘಟನೆ. ಹೌದು, ಚೆನ್ನೈನಲ್ಲಿ ಲಾಕ್‌ಡೌನ್ ಉಲ್ಲಂಘಿಸಿ ಸಲೂನ್ ಅಂಗಡಿ ತೆರೆದಿದ್ದ ಮಾಲೀಕನಿಗೆ ಕೊರೊನಾ ಸೋಂಕು ತಗುಲಿದೆಯಂತೆ.

ಸ್ಪಷ್ಟನೆ ನೀಡಿದ ಕೇಂದ್ರ: ಕಟಿಂಗ್ ಶಾಪ್, ಸಲೂನ್ ತೆರೆಯುವಂತಿಲ್ಲಸ್ಪಷ್ಟನೆ ನೀಡಿದ ಕೇಂದ್ರ: ಕಟಿಂಗ್ ಶಾಪ್, ಸಲೂನ್ ತೆರೆಯುವಂತಿಲ್ಲ

ಕೇವಲ ಮಾಲೀಕನಿಗೆ ಮಾತ್ರವಲ್ಲ ಕ್ಷೌರ ಮಾಡಿಸಲು ಬಂದಿದ್ದ ವ್ಯಕ್ತಿಗೂ ಸೋಂಕು ಹರಡಿದೆ. ವಿಷಯ ತಿಳಿದ ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಸಲೂನ್ ಮಾಲೀಕ ಮತ್ತು ಆ ಗ್ರಾಹಕನನ್ನು ಕ್ವಾರೆಂಟೈನ್‌ಗೆ ಒಳಪಡಿಸಲಾಗಿದೆ. ಮುಂದೆ ಓದಿ...

7 ಜನರಿಗೆ ಕ್ವಾರೆಂಟೈನ್‌

7 ಜನರಿಗೆ ಕ್ವಾರೆಂಟೈನ್‌

ಚೆನ್ನೈನ ಕೋಯಂಬೇಡು ಮಾರುಕಟ್ಟೆ ಬಳಿ ಇದ್ದ ಸಲೂನ್ ಶಾಪ್ ಲಾಕ್‌ಡೌನ್‌ ನಡುವೆಯೂ ತೆರೆದಿದ್ದ. ಈ ಅಂಗಡಿ ಮಾಲೀಕನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಸಲೂನ್‌ಗೆ ಬಂದಿದ್ದ ಈರೋಡ್‌ ಮೂಲದ ಟ್ರಕ್‌ ಚಾಲಕನಿಗೂ ಕೊರೊನಾ ಖಚಿತವಾಗಿದೆ. ಈ ಹಿನ್ನೆಲೆ ಇಲ್ಲಿಗೆ ಭೇಟಿ ನೀಡಿದ್ದ 7 ಜನರನ್ನು ಸಂಪರ್ಕಿಸಿ ಆರೋಗ್ಯ ಅಧಿಕಾರಿಗಳು ಕ್ವಾರೆಂಟೈನ್‌ಗೆ ಒಳಪಡಿಸಿದ್ದಾರೆ.

ಮಧ್ಯ ಪ್ರದೇಶದಲ್ಲಿ 6 ಮಂದಿಗೆ ಸೋಂಕು

ಮಧ್ಯ ಪ್ರದೇಶದಲ್ಲಿ 6 ಮಂದಿಗೆ ಸೋಂಕು

ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ಸಲೂನ್‌ಗೆ ತೆರಳಿದ್ದ ಆರು ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇಂದೋರ್‌ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಸಲೂನ್‌ನಲ್ಲಿ ಕ್ಷೌರ ಮಾಡಿದ್ದಾನೆ. ಆತನಿಂದ ಸೋಂಕು ಹರಡಿದೆ. ಆತನಿಗೆ ಕ್ಷೌರ ಮಾಡಲು ಬಳಸಿದ ಬಟ್ಟೆಯನ್ನು ಇತರ ಆರು ಮಂದಿಗೆ ಸಲೂನ್ ಮಾಲೀಕ ಬಳಸಿದ್ದಾನೆ. ಆ ಆರು ಜನರಿಗೆ ಸೋಂಕು ತಗುಲಿದೆ. ಈಗ ಎಲ್ಲ ಆರು ಮಂದಿಯನ್ನು ಕ್ವಾರೆಂಟೈನ್‌ ಮಾಡಲಾಗಿದೆ.

ಅಲ್ಲಲ್ಲಿ ಕಣ್ತಪ್ಪಿಸಿ ಸಲೂನ್ ಓಪನ್

ಅಲ್ಲಲ್ಲಿ ಕಣ್ತಪ್ಪಿಸಿ ಸಲೂನ್ ಓಪನ್

ಹಲವು ಕಡೆ ಸಲೂನ್‌ಗಳು ಪೊಲೀಸರ ಕಣ್ತಪ್ಪಿಸಿ ಕಾರ್ಯನಿರ್ವಹಿಸಿದೆ. ಲಾಕ್‌ಡೌನ್‌ ಜಾರಿಯಲ್ಲಿದ್ದರೂ ಜನರು ಕೂಡ ಕ್ಷೌರ ಮಾಡಿಸಲು ಸಲೂನ್‌ಗಳಿಗೆ ಭೇಟಿ ನೀಡಿದ್ದಾರೆ. ಇದೀಗ, ಸಲೂನ್ ಮಾಲೀಕರಿಗೂ ಮತ್ತು ಗ್ರಾಹಕರಿಗೂ ಸೋಂಕು ತಗುಲಿರುವ ಸುದ್ದಿ ಸಹಜವಾಗಿ ಆತಂಕ ಮೂಡಿಸಿದೆ.

ಮನೆಗಳ ಬಳಿ ಬಂದು ಕ್ಷೌರ ಮಾಡುತ್ತಿದ್ದಾರೆ

ಮನೆಗಳ ಬಳಿ ಬಂದು ಕ್ಷೌರ ಮಾಡುತ್ತಿದ್ದಾರೆ

ಲಾಕ್‌ಡೌನ್‌ ಕಾರಣದಿಂದ ಸಲೂನ್‌ ತೆರೆಯುತ್ತಿಲ್ಲ. ಆದರೆ, ಕ್ಷೌರ ಮಾಡುವವರೇ ಮನೆಗಳ ಬಳಿಕ ಕಾಯಕ ಮಾಡಿರುವ ಘಟನೆಗಳು ಕೆಲವು ಪ್ರದೇಶಗಳಲ್ಲಿ ನಡೆದಿದೆ. ಇಂತಹ ಬೆಳವಣಿಗೆಗಳು ಕರ್ನಾಟಕದ ಹಲವು ಕಡೆ ನಡೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆಗಳು ಕೂಡ ಆಗಿದೆ.

English summary
Coronavirus Update: Salon shop owner tested covid19 positive In chennai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X