ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೃಹಿಣಿಯರಿಗೆ ಸಂಬಳ: ಕಮಲ್ ಹಾಸನ್ ಪಕ್ಷದ ಹೊಸ ವಿಷನ್

|
Google Oneindia Kannada News

ಚೆನ್ನೈ, ಫೆಬ್ರವರಿ 29: ಗೃಹಿಣಿಯರದ್ದೂ ಒಂದು ಉದ್ಯೋಗ ಅದಕ್ಕೆ ನಿವೃತ್ತಿ ಎನ್ನುವುದೇ ಇಲ್ಲ ಹಾಗಾಗಿ ಅವರಿಗೂ ಸಂಬಳ ನೀಡಬೇಕು ಎಂದು ನಟ ರಾಜಕಾರಣಿ ಕಮಲ್ ಹಾಸನ್ ಹೇಳಿದ್ದಾರೆ.

ಅವರು ತಮ್ಮ ವಿಷನ್ ಡಾಕ್ಯುಮೆಂಟ್‌ನಲ್ಲಿ ಈ ವಿಷಯ ಪ್ರಸ್ತಾಪಿಸಿದ್ದು, ಗೃಹಿಣಿಯರ ಕೆಲಸ ಸಾಮಾನ್ಯದ್ದಲ್ಲ, ಅವರಿಗೂ ಸಂಬಳ ನೀಡುವ ಕಾಲ ಬಂದಿದೆ. ಅದನ್ನು ಜಾರಿಗೆ ತರುವ ನಿಟ್ಟಿನಲ್ಲಿ ನಮ್ಮ ಪಕ್ಷ ಕೆಲಸ ಮಾಡಲಿದೆ ಎಂದು ಹೇಳಿದರು.

ಕಮಲ್, ರಜನಿ ರಾಜಕೀಯದಿಂದ ದೂರ ಇರಿ ಎಂದ ಚಿರಂಜೀವಿ ಕಮಲ್, ರಜನಿ ರಾಜಕೀಯದಿಂದ ದೂರ ಇರಿ ಎಂದ ಚಿರಂಜೀವಿ

ಕಳೆದ ಕೆಲ ವರ್ಷಗಳಿಂದ ತಮಿಳುನಾಡು ರಾಜಕಾರಣ ಸಾಗುತ್ತಿರುವ ದಿಕ್ಕು ಆತಂಕವನ್ನುಂಟುಮಾಡಿದೆ. ಮಹತ್ವಾಕಾಂಕ್ಷೆಯೊಂದಿಗೆ ಕೆಲಸ ಮಾಡುವಂತಹ ವಾತಾವರಣ ಸೃಷ್ಟಿಸುವ ಮೂಲಕ ನಮ್ಮ ಜನರ ಸಬಲೀಕರಣ ಮಾಡಲಾಗುವುದು ಎಂದು ಕಮಲ್ ಹಾಸನ್ ತಿಳಿಸಿದ್ದಾರೆ.

 ಗೃಹಿಣಿಯರ ಉದ್ಯೋಗಕ್ಕೆ ಸಂಬಳ

ಗೃಹಿಣಿಯರ ಉದ್ಯೋಗಕ್ಕೆ ಸಂಬಳ

ಗೃಹಿಣಿಯರದು ದೊಡ್ಡ ಕೆಲಸವಾಗಿದ್ದು, ಅವರಿಗೂ ಸಂಬಳ ನೀಡಬೇಕಾಗಿದೆ. ಅವರ ಉದ್ಯೋಗಕ್ಕೆ ಸಂಬಳ ನೀಡಬೇಕಾದ ಸಮಯ ಈಗ ಬಂದಿದೆ. ಅದನ್ನು ನಾವು ಈಡೇರಿಸುತ್ತೇವೆ ಎಂಬ ಭರವಸೆಯನ್ನು ವಿಷನ್ ಡಾಕ್ಯುಮೆಂಟ್ ನಲ್ಲಿ ನೀಡಿದ್ದಾರೆ.

 ಗೃಹಿಣಿಯರ ಸಬಲೀಕರ ನಮ್ಮ ಗುರಿ

ಗೃಹಿಣಿಯರ ಸಬಲೀಕರ ನಮ್ಮ ಗುರಿ

ಗೃಹಿಣಿಯರಿಗೆ ಸಂಬಳ, ಜನರನ್ನು ಸಬಲೀಕರಣಗೊಳಿಸಿ ಉದ್ಯಮಶೀಲತಾ ಮನೋಭಾವವನ್ನು ಉತ್ತೇಜಿಸುವ ವಾತಾವರಣವನ್ನು ಸೃಷ್ಟಿಸುವುದು ಮತ್ತಿತರ ಎಂಟರ್ ಪ್ರೈಸ್ ಎಕಾನಮಿ ಅಂಶಗಳ ಮೂಲಕ ತಮಿಳುನಾಡನ್ನು ಮರುರೂಪಿಸುವುದಾಗಿ ನಟ , ರಾಜಕಾರಣಿ ಕಮಲ್ ಹಾಸನ್ ಪ್ರಕಟಿಸಿದ್ದಾರೆ.

 ವಿಷನ್ ಡಾಕ್ಯುಮೆಂಟ್ ಟ್ವೀಟ್

ವಿಷನ್ ಡಾಕ್ಯುಮೆಂಟ್ ಟ್ವೀಟ್

ಮಕ್ಕಳ್ ನಿಧಿ ಮೈಮ್ ಪಕ್ಷದ ಅಧ್ಯಕ್ಷರೂ ಆಗಿರುವ ಕಮಲ್ ಹಾಸನ್, ತಮ್ಮ ಪಕ್ಷದ ವಿಷನ್ ಡಾಕ್ಯುಮೆಂಟನ್ನು ಟ್ವೀಟ್ ಮಾಡಿದ್ದಾರೆ.ಈ ಕೇಂದ್ರಿತ ಸಿದ್ದಾಂತದೊಂದಿಗೆ ಎರಡು ಪಟ್ಟು ಬದಲಾವಣೆ ತರುವ ನಿಟ್ಟಿನಲ್ಲಿ ಪಕ್ಷ ಕಾರ್ಯನಿರ್ವಹಿಸುತ್ತಿದೆ. ತಮಿಳುನಾಡನ್ನು ಮರು ರೂಪಿಸಲಾಗುವುದು, ರಾಜಕೀಯದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.

 ಭ್ರಷ್ಟಾಚಾರದಿಂದ ರಾಜ್ಯದ ವರ್ಚಸ್ಸನ್ನು ಕಡಿಮೆ ಮಾಡಿದೆ

ಭ್ರಷ್ಟಾಚಾರದಿಂದ ರಾಜ್ಯದ ವರ್ಚಸ್ಸನ್ನು ಕಡಿಮೆ ಮಾಡಿದೆ

ಅತಿಯಾದ ಭ್ರಷ್ಟಾಚಾರ ರಾಜ್ಯದ ವರ್ಚಸ್ಸನ್ನು ಕಡಿಮೆ ಮಾಡಿದೆ ಮತ್ತು ಅಭಿವೃದ್ಧಿ ಹೊಂದುವ ಸಾಮರ್ಥ್ಯವನ್ನು ಕಡಿಮೆ ಮಾಡಿದೆ ಎಂದಿರುವ ಕಮಲ್ ಹಾಸನ್, ಎಂಟರ್ ಪೈಸ್ ಎಕಾನಮಿಯಿಂದ ಉದ್ಯೋಗ ಸೃಷ್ಟಿಯಾಗಲಿದ್ದು, ಪ್ರತಿ ತಮಿಳು ಜನರು ಸಮೃದ್ಧಿಯನ್ನು ಸಾಧಿಸಬಹುದು ಎಂದು ಅವರು ಹೇಳಿದ್ದಾರೆ.

English summary
Salary for housewives, stop doling of mere benefit, empowering people, creating an environment the promotes entrepreneurial spirit are some of components of 'Enterprise Economy' announced by actor-turned-politician Kamal Haasan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X