ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಜನೀಕಾಂತ್ ಪಕ್ಷದ ರೂಲ್ ಬುಕ್ ಸಿದ್ಧ, ಅದರಲ್ಲಿ ಏನೇನಿದೆ ಗೊತ್ತಾ?!

|
Google Oneindia Kannada News

Recommended Video

ರಜಿನಿಕಾಂತ್ ಪಕ್ಷ ರಜಿನಿ ಮಕ್ಕಳ್ ಮಂಡ್ರಮ್ ನ ರೂಲ್ ಬುಕ್ ಸಿದ್ದ | ಅದರಲ್ಲಿ ಏನೇನಿದೆ? | Oneindia Kannada

ಚೆನ್ನೈ, ಆಗಸ್ಟ್ 28: ನಟ ಹಾಗೂ ಇತ್ತೀಚೆಗೆ ರಾಜಕಾರಣ ಪ್ರವೇಶದ ಘೋಷಣೆ ಮಾಡಿದ ರಜನೀಕಾಂತ್ ರ ರಜಿನಿ ಮಕ್ಕಳ್ ಮಂಡ್ರಮ್ ನಿಂದ (ಆರ್ ಎಂಎಂ) ಸದಸ್ಯರು ಹಾಗೂ ಆಡಳಿತಾತ್ಮಕ ಹುದ್ದೆಗಳಲ್ಲಿ ಇರುವವರಿಗಾಗಿ ಕೆಲವು ನಿಯಮಗಳನ್ನು ರೂಪಿಸಿ, ಬಿಡುಗಡೆ ಮಾಡಿದೆ. ಆರ್ ಎಂಎಂ ಸೇರಲು ಬಯಸುವವರು ಹಾಗೂ ಪ್ರಸ್ತುತ ಸದಸ್ಯರಾಗಿರುವವರು ಕಡ್ಡಾಯವಾಗಿ ಪಾಲಿಸಲೇಬೇಕಿದೆ.

ಆ ಪೈಕಿ ಬಹಳ ಮುಖ್ಯವಾಗಿ ಹಾಕಿರುವ ನಿಯಮ ಏನೆಂದರೆ, ಯಾವುದೇ ಧರ್ಮ ಅಥವಾ ಜಾತಿ ಆಧಾರಿತ ಸಂಘಟನೆಯ ಭಾಗವಾಗಿರುವಂಥವರಿಗೆ ರಜಿನಿ ಮಕ್ಕಳ್ ಮಂಡ್ರಮ್ ಸದಸ್ಯರಾಗುವ ಅವಕಾಶ ಇಲ್ಲ. ಇತರ ನಿಯಮಗಳು ಏನೇನಿವೆ ಎಂದು ತಿಳಿದುಕೊಳ್ಳಲು ಮುಂದೆ ಓದಿ.

Rules framed for members of Rajini Makkal Mandram

* ಆರ್ ಎಂಎಂ ಕಾರ್ಯಕ್ರಮಗಳು ಇರುವ ಸಂದರ್ಭಗಳನ್ನು ಹೊರತುಪಡಿಸಿ ಇನ್ಯಾವುದೇ ವೇಳೆಯಲ್ಲಿ ಸದಸ್ಯರು ತಮ್ಮ ವಾಹನಗಳಲ್ಲಿ ತಮ್ಮ ಸಂಘಟನೆಯ ಬಾವುಟ ಹಾಕುವಂತಿಲ್ಲ

* ಆರ್ ಎಂಎಂ ಯುವ ಘಟಕ ಸದಸ್ಯರ ವಯಸ್ಸು ಮೂವತ್ತೈದರ ಒಳಗಿರಬೇಕು.

ರಜನಿ ತಮಿಳುನಾಡು ರಾಜಕಾರಣದ ಚಹರೆಯನ್ನೇ ಬದಲಾಯಿಸಬಲ್ಲರೆ?ರಜನಿ ತಮಿಳುನಾಡು ರಾಜಕಾರಣದ ಚಹರೆಯನ್ನೇ ಬದಲಾಯಿಸಬಲ್ಲರೆ?

* ಹದಿನೆಂಟು ವರ್ಷ ಮೇಲ್ಪಟ್ಟವರು ಆರ್ ಎಂಎಂ ಸದಸ್ಯರಾಗಬಹುದು.

* ಪಕ್ಷದ ಬಾವುಟವನ್ನು ಬಟ್ಟೆಯಿಂದಲೇ ತಯಾರಿಸಿರಬೇಕು.

* ಆರ್ ಎಂಎಂ ಕಾರ್ಯಕರ್ತರ ನೇಮಕ, ಪದಚ್ಯುತಿ ನಿರ್ಧಾರಗಳ ವಿಚಾರದಲ್ಲಿ ವರಿಷ್ಠರ ತೀರ್ಮಾನವೇ ಅಂತಿಮ

* ಪಕ್ಷದಲ್ಲಿ ಒಂದು ಕುಟುಂಬದಿಂದ ಒಬ್ಬರಿಗೇ ಹುದ್ದೆ ನೀಡಲಾಗುವುದು

* ಸದಸ್ಯರು ಮಹಿಳೆಯರನ್ನು ಕಡ್ಡಾಯವಾಗಿ ಗೌರವಿಸಬೇಕು ಹಾಗೂ ಕಾನೂನು ಕಟ್ಟಳೆಗೆ ಒಳಪಟ್ಟ ನಾಗರಿಕರಾಗಿರಬೇಕು

* ವಿವಾದಾತ್ಮಕ ವಿಚಾರಗಳ ಬಗ್ಗೆ ಮಾತನಾಡುವ ವ್ಯಕ್ತಿ, ನಾಯಕ, ಮುಖಂಡರ ವಿರುದ್ಧ ವೈಯಕ್ತಿಕ ದಾಳಿಗಳನ್ನು ಕಡ್ಡಾಯವಾಗಿ ಮಾಡುವಂತಿಲ್ಲ

ರಜನಿ ರಾಜಕೀಯ ಭವಿಷ್ಯ; ಚಾಣಕ್ಯರಾಗಬೇಕು ಚಂದ್ರಗುಪ್ತರಲ್ಲರಜನಿ ರಾಜಕೀಯ ಭವಿಷ್ಯ; ಚಾಣಕ್ಯರಾಗಬೇಕು ಚಂದ್ರಗುಪ್ತರಲ್ಲ

* ಆರ್ ಎಂಎಂನ ಲಿಖಿತ ಮನವಿ ಇಲ್ಲದೆ ಯಾವುದೇ ಹಣ ಅಥವಾ ವಸ್ತುಗಳಿಗೆ ಬೇಡಿಕೆ ಅಥವಾ ಮನವಿ ಸಲ್ಲಿಸುವಂತಿಲ್ಲ

* ಆರ್ ಎಂಎಂ ಟ್ಯಾಗ್ ಅಥವಾ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವಂತಿಲ್ಲ

* ಪಕ್ಷದ ಜಿಲ್ಲಾ ಮಟ್ಟದ ಹುದ್ದೆಗಳಿಗಾಗಿ ಅದಕ್ಕಾಗಿ ಪ್ರತ್ಯೇಕವಾಗಿ ನೇಮಿಸಿದ ಸಮಿತಿಯ ಕಣ್ಗಾವಲಿನಲ್ಲಿ ಚುನಾವಣೆಗಳು ನಡೆಯುತ್ತವೆ.

ಕಳೆದ ಡಿಸೆಂಬರ್ ನಲ್ಲಿ ರಜನೀಕಾಂತ್ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಘೋಷಣೆ ಮಾಡಿದ್ದರು. ಆಯಾ ಜಿಲ್ಲೆಗಳಲ್ಲಿ ಪಕ್ಷದ ಬೆಂಬಲಿಗರನ್ನು ಒಗ್ಗೂಡಿಸುವಂತೆ ಅಭಿಮಾನಿಗಳಿಗೆ ಸೂಚಿಸಿದ್ದರು. ಆ ನಂತರ ತಮಿಳುನಾಡು ರಾಜ್ಯದಾದ್ಯಂತ ನೋಂದಣಿ ಅಭಿಯಾನ ಶುರುವಾಗಿತ್ತು. ಜಿಲ್ಲಾ ಮಟ್ಟದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿತ್ತು. ಅಶಿಸ್ತಿನ ಕಾರಣಕ್ಕೆ ಜಿಲ್ಲಾ ಮಟ್ಟದ ಮುಖಂಡರೊಬ್ಬರನ್ನು ಉಚ್ಚಾಟನೆ ಮಾಡಲಾಗಿತ್ತು.

English summary
Actor- politician Rajinikanth started Rajini Makkal Mandram framed rules for members. Here is the some of highlights of rules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X