ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಥಿಕ ಅಭಿವೃದ್ಧಿಗೆ ನಿಮ್ಮ ನೋಡಿ ಕಲಿಯುವುದು ಏನಿದೆ? ಕೇಂದ್ರ ಸರ್ಕಾರಕ್ಕೆ ಪಳನಿವೇಲ್ ತರಾಟೆ

|
Google Oneindia Kannada News

ಚೆನ್ನೈ, ಆಗಸ್ಟ್‌ 18: ತಮಿಳುನಾಡು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಅವರು ಕೇಂದ್ರ ಸರ್ಕಾರವು ಉಚಿತ ಕೊಡುಗೆಗಳ ಬಗ್ಗೆ ಟೀಕಿಸಿದ್ದಕ್ಕೆ ತರಾಟೆ ತೆಗೆದುಕೊಂಡಿದ್ದು, ಯಾವ ಆಧಾರದ ಮೇಲೆ ರಾಜ್ಯ ಸರ್ಕಾರಗಳು ನಿಮ್ಮ ನೀತಿಯನ್ನು ಪಾಲಿಸಬೇಕು ಎಂದು ಕೇಳಿದ್ದಾರೆ.

ಪಳನಿವೇಲ್‌ ತ್ಯಾಗರಾಜನ್ ಅವರು ಕೇಂದ್ರ ಸರ್ಕಾರಕ್ಕೆ, ಒಂದೋ ನೀವು ಹೇಳುವುದನ್ನು ನಾವು ಮಾಡಲು ನೀವು ಸಾಂವಿಧಾನಿಕ ಆಧಾರವನ್ನು ಹೊಂದಿರಬೇಕು ಅಥವಾ ನೀವು ವಿಶೇಷ ಪರಿಣತಿಯನ್ನು ಹೊಂದಿರಬೇಕು. ನೀವು ಅರ್ಥಶಾಸ್ತ್ರದಲ್ಲಿ ಡಬಲ್ ಪಿಎಚ್‌ಡಿ ಹೊಂದಿರಬೇಕು ಅಥವಾ ಇಲ್ಲವೇ ಮಾಡಬೇಕು. ನೀವು ನೋಬಲ್ ಪ್ರಶಸ್ತಿಯನ್ನು ಹೊಂದಿರಿ ಅಥವಾ ನಮಗಿಂತ ನೀವು ಚೆನ್ನಾಗಿ ತಿಳಿದಿರುವಿರಿ ಎಂದು ಹೇಗೆ ನಂಬುವುದು. ಅದಕ್ಕೆ ನೀವು ಹೆಚ್ಚು ಕಾರ್ಯಕ್ಷಮತೆಯ ದಾಖಲೆಯನ್ನು ಹೊಂದಿರಬೇಕು ಎಂದು ಹೇಳಿದ್ದಾರೆ.

ತಮಿಳುನಾಡು ಸಂಸದ ರಾಜಾರಿಂದ ಪ್ರತ್ಯೇಕ ರಾಷ್ಟ್ರದ ಬೇಡಿಕೆ?ತಮಿಳುನಾಡು ಸಂಸದ ರಾಜಾರಿಂದ ಪ್ರತ್ಯೇಕ ರಾಷ್ಟ್ರದ ಬೇಡಿಕೆ?

ನೀವು ಆರ್ಥಿಕತೆಯನ್ನು ಅದ್ಭುತವಾಗಿ ಬೆಳೆಸಿದ್ದೀರಾ ಅಥವಾ ನೀವು ಸಾಲವನ್ನು ಕಡಿಮೆಗೊಳಿಸಿದ್ದೀರಾ, ತಲಾ ಆದಾಯವನ್ನು ಹೆಚ್ಚಿಸಿದ್ದೀರಾ ಅಥವಾ ಉದ್ಯೋಗಗಳನ್ನು ಸೃಷ್ಟಿಸಿದ್ದೀರಾ. ಆ ಸಂದರ್ಭದಲ್ಲಿ ನಾವೆಲ್ಲರೂ ನಿಮ್ಮ ಮಾತು ಕೇಳುತ್ತೇವೆ. ಇದ್ಯಾವ ಕೆಲಸವೂ ನಿಜವಲ್ಲದಿದ್ದಾಗ, ನಾವು ಯಾರೊಬ್ಬರ ಅಭಿಪ್ರಾಯವನ್ನು ಏಕೆ ಕೇಳಬೇಕು? ಎಂದು ಸಚಿವ ತ್ಯಾಗರಾಜನ್‌ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

 ಕೇಂದ್ರದ ಖಜಾನೆಗೆ ದೊಡ್ಡ ನಿವ್ವಳ ಕೊಡುಗೆದಾರರು

ಕೇಂದ್ರದ ಖಜಾನೆಗೆ ದೊಡ್ಡ ನಿವ್ವಳ ಕೊಡುಗೆದಾರರು

ತ್ಯಾಗರಾಜನ್ ಅವರು ತಮಿಳುನಾಡು ರಾಜ್ಯವು ಹಲವಾರು ಮಾನದಂಡಗಳಲ್ಲಿ ಕೇಂದ್ರ ಸರ್ಕಾರವನ್ನು ಮೀರಿಸಿದೆ. ನಾವು ಕೇಂದ್ರದ ಖಜಾನೆಗೆ ದೊಡ್ಡ ನಿವ್ವಳ ಕೊಡುಗೆದಾರರಾಗಿದ್ದೇವೆ. ನಮ್ಮಿಂದ ನಿಮಗೆ ಇನ್ನೇನು ಬೇಕು? ಯಾವ ಆಧಾರದ ಮೇಲೆ ನಾವು ನಿಮಗಾಗಿ ನನ್ನ ನೀತಿಯನ್ನು ಬದಲಾಯಿಸಬೇಕು ಎಂದು ಅವರು ಕೇಂದ್ರ ಸರ್ಕಾರವನ್ನು ಕೇಳಿದರು.

ರಾಹುಲ್ ಗಾಂಧಿ ಇಡಿ ವಿಚಾರಣೆ ಒಂದು ರಾಜಕೀಯ ಸೇಡಿನ ಕ್ರಮ: ಸ್ಟಾಲಿನ್ ಟೀಕೆರಾಹುಲ್ ಗಾಂಧಿ ಇಡಿ ವಿಚಾರಣೆ ಒಂದು ರಾಜಕೀಯ ಸೇಡಿನ ಕ್ರಮ: ಸ್ಟಾಲಿನ್ ಟೀಕೆ

 ನೀವು ನೋಬಲ್ ಪ್ರಶಸ್ತಿ ಹೊಂದಿದ್ದೀರಾ?

ನೀವು ನೋಬಲ್ ಪ್ರಶಸ್ತಿ ಹೊಂದಿದ್ದೀರಾ?

ವಾಗ್ದಾಳಿ ಮುಂದುವರಿಸಿದ ಸಚಿವ ತ್ಯಾಗರಾಜನ್‌, ನಿಮ್ಮ ಮಾತು ಕೇಳಲೇಬೇಕು ಎನ್ನಲು ನಿಮಗೆ ಸಾಂವಿಧಾನಿಕ ಆಧಾರವಿದೆಯೇ? ಇಲ್ಲ. ನೀವು ಆರ್ಥಿಕ ತಜ್ಞರೇ? ಇಲ್ಲ. ನೀವು ನೋಬಲ್ ಪ್ರಶಸ್ತಿ ಹೊಂದಿದ್ದೀರಾ? ಇಲ್ಲ. ನೀವು ನಮಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದ್ದೀರಾ? ಇಲ್ಲ. ಮತ್ತೆ ಯಾವ ಆಧಾರದ ಮೇಲೆ ನಾವು ನಮ್ಮ ನೀತಿಯನ್ನು ಬದಲಾಯಿಸಬೇಕು. ಇದೇನಾದರೂ ಸ್ವರ್ಗದಿಂದ ಬರುವ ಹೆಚ್ಚುವರಿ ಸಂವಿಧಾನಾತ್ಮಕ ಆದೇಶವೇ? ಎಂದು ಅವರು ಕೇಳಿದರು.

ಉಚಿತ ಕೊಡುಗೆಗಳನ್ನು 'ರೇವಡಿ' ಸಂಸ್ಕೃತಿ ಎಂದು ಕರೆದ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗಳು ಈಗ ದೇಶದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. 'ರೇವಡಿ'(ಉಚಿತ)ವು ದೇಶಕ್ಕೆ ಅಪಾಯಕಾರಿ ಮತ್ತು ದೂರಗಾಮಿ ಆರ್ಥಿಕ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಮೋದಿ ಅವರು ಹೇಳಿದ್ದರು.

 ಆರ್ಥಿಕ ನ್ಯಾಯ ಉದ್ದೇಶದಿಂದ ಉಚಿತ ಸೇವೆ

ಆರ್ಥಿಕ ನ್ಯಾಯ ಉದ್ದೇಶದಿಂದ ಉಚಿತ ಸೇವೆ

ಏತನ್ಮಧ್ಯೆ, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮಂಗಳವಾರ 'ಉಚಿತ' ಎಂಬ ವ್ಯಾಖ್ಯಾನವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. "ಸುರಕ್ಷಿತ ಸಾಮಾಜಿಕ ಸುವ್ಯವಸ್ಥೆ" ಮತ್ತು "ಆರ್ಥಿಕ ನ್ಯಾಯ" ಉದ್ದೇಶದಿಂದ ಉಚಿತ ಸೇವೆಗಳನ್ನು ನೀಡಲಾಗುತ್ತದೆ ಎಂದು ಅದು ವಾದಿಸಿದೆ. ತ್ಯಾಗರಾಜನ್ ಅವರ ಡಿಎಂಕೆ, ಆಮ್ ಆದ್ಮಿ ಪಾರ್ಟಿ (ಎಎಪಿ) ನಂತರ ನ್ಯಾಯಾಲಯದಲ್ಲಿ ಕೇಂದ್ರವನ್ನು ಪ್ರಶ್ನಿಸಿದ ಎರಡನೇ ಪಕ್ಷವಾಗಿದೆ. ಡಿಎಂಕೆಯ ಅರ್ಜಿಯು ಉಚಿತ ಕೊಡುಗೆ ರಾಜ್ಯಕ್ಕೆ ಆರ್ಥಿಕ ನಷ್ಟವನ್ನು ತರಬಹುದು ಎಂಬ ಹೇಳಿಕೆಯನ್ನು ಪ್ರಶ್ನಿಸಿದೆ.

"ಉಚಿತ" ಎಂದರೇನು ಎಂದು ವ್ಯಾಖ್ಯಾನಿಸುವುದು ಅತ್ಯಗತ್ಯ

ರಾಜಕೀಯ ಪಕ್ಷಗಳು ಭರವಸೆಗಳನ್ನು ನೀಡುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಪ್ರತಿಪಾದಿಸಿದೆ. "ಉಚಿತ" ಎಂದರೇನು ಎಂದು ವ್ಯಾಖ್ಯಾನಿಸುವುದು ಅತ್ಯಗತ್ಯ. ಭಾರತದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠವು, ಸಾರ್ವತ್ರಿಕ ಆರೋಗ್ಯ ರಕ್ಷಣೆ, ಕುಡಿಯುವ ನೀರಿನ ಲಭ್ಯತೆ ಮತ್ತು ಗ್ರಾಹಕರಿಗೆ ಉಚಿತ ವಿದ್ಯುತ್‌ ನೀಡುವುದನ್ನು ಉಚಿತ ಎಂದು ಪರಿಗಣಿಸಬಹುದೇ?" ಎಂದು ಕೇಳಿದೆ. ಚುನಾವಣೆಗೆ ಮುನ್ನ ಮತದಾರರಿಗೆ ರಾಜಕೀಯ ಪಕ್ಷಗಳು ಉಚಿತ ಭರವಸೆ ನೀಡುವುದನ್ನು ತಡೆಯಬೇಕು ಎಂದು ಕೋರಿ ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

English summary
Tamil Nadu Finance Minister Palanivel Thiagarajan took a swipe at the central government for criticizing the freebies and asked on what basis the state governments should follow your policy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X