ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುರಿ-ಕೋಳಿ ರೀತಿ ಮಕ್ಕಳ ಮಾರಾಟ ದಂಧೆ ನಡೆಸುತ್ತಿದ್ದ ನರ್ಸಮ್ಮನ ಕರ್ಮ ಕಾಂಡ

|
Google Oneindia Kannada News

ಮಕ್ಕಳನ್ನು ಪಡೆಯಬೇಕು ಎಂಬುದು ದಂಪತಿಗಳ ಹಂಬಲ. ಎಷ್ಟೋ ಮಂದಿಗೆ ತಪಸ್ಸು. ಮತ್ತೆಷ್ಟೋ ಮಂದಿಗೆ ತಮಗೆ ಮಕ್ಕಳೇ ಆಗುವುದಿಲ್ಲ ಎಂಬ ಕೊರಗು. ಇಂಥ ಭಾವನೆಗಳನ್ನೇ ಬಂಡವಾಳ ಮಾಡಿಕೊಂಡು ಮಕ್ಕಳನ್ನೇ ಮಾರಾಟದ ವಸ್ತುಗಳನ್ನಾಗಿ ಮಾಡಿಕೊಂಡವರ ಬಗ್ಗೆ ನಿಮಗೆ ಗೊತ್ತಿದೆಯಾ? ಅವರ ಮಾತು ಹೇಗಿರುತ್ತದೆ ಗೊತ್ತಾ?

"ನಿಮಗೆ ಗಂಡು ಮಗು ಬೇಕೋ ಅಥವಾ ಹೆಣ್ಣು ಮಗು ಬೇಕೋ?"

"ಬೆಲೆ ನಿರ್ಧಾರ ಆಗುವುದು ಲಿಂಗ, ತೂಕ ಹಾಗೂ ಬಣ್ಣದ ಆಧಾರದಲ್ಲಿ"

"ಮಗು ಆರೋಗ್ಯವಂತವಾಗಿ ಇದ್ದರೆ ಸಾಕಾ ಅಥವಾ ನೋಡುವುದಕ್ಕೆ ಸುಂದರವಾಗಿಯೂ ಇರಬೇಕಾ?"

"ನನಗೆ ಮೂವತ್ತು ಸಾವಿರ ರುಪಾಯಿ ಅಡ್ವಾನ್ಸ್ ಕೊಡಬೇಕು"

ಪರಿಚಿತರಿಂದಲೇ ಅಪಹರಣವಾಗಿದ್ದ ಮಗುವನ್ನು ರಕ್ಷಿಸಿದ ಪೊಲೀಸರುಪರಿಚಿತರಿಂದಲೇ ಅಪಹರಣವಾಗಿದ್ದ ಮಗುವನ್ನು ರಕ್ಷಿಸಿದ ಪೊಲೀಸರು

-ಮಕ್ಕಳ ಮಾರಾಟದ ವ್ಯವಹಾರ ನಡೆಯುವ ಬಗೆ ಇದು. ತಮಿಳುನಾಡಿನ ಸೇಲಂ ಜಿಲ್ಲೆಯ ರಾಸಿಪುರಂ ಸರಕಾರಿ ಆಸ್ಪತ್ರೆಯ ನಿವೃತ್ತ ನರ್ಸ್ ಹಾಗೂ ಮಗುವೊಂದನ್ನು ಖರೀದಿಸಲು ಬಂದಿದ್ದ ಪಶ್ಚಿಮ ತಮಿಳುನಾಡು ಭಾಗದ ವ್ಯಕ್ತಿಯೊಬ್ಬರ ಮಧ್ಯೆ ನಡೆದ ಸಂಭಾಷಣೆಯ ರೆಕಾರ್ಡ್ ಈಗ ಎಲ್ಲೆಡೆ ಹರಿದಾಡುತ್ತಿದೆ.

Retired govt nurse held in TN for selling newborns

ನಲವತ್ತೆಂಟು ವರ್ಷ ಅಮುದಾ ನವಜಾತ ಶಿಶುಗಳ ಕಾನೂನು ಬಾಹಿರ ಮಾರಾಟ ದಂಧೆಯಲ್ಲಿ ತೊಡಗಿರುವುದನ್ನು ಹತ್ತು ನಿಮಿಷದ ಸಂಭಾಷಣೆಯಲ್ಲಿ ಕೇಳಬಹುದು. ಅಷ್ಟೇ ಅಲ್ಲ, ಯಾರು ಖರೀದಿ ಮಾಡುತ್ತಾರೋ ಅವರದೇ ಹೆಸರಿಗೆ ಮಗುವಿನ ಜನನ ಪ್ರಮಾಣಪತ್ರವನ್ನು ಮಾಡಿಸಿಕೊಡುತ್ತಾರೆ. ಅಲ್ಲಿಗೆ ಎಲ್ಲವೂ ಕಾನೂನು ಬದ್ಧ ಆದಂತೆ.

ಕುರಿಯೋ, ಕೋಳಿಯೋ ಅಥವಾ ರಾಸುಗಳ ವ್ಯಾಪಾರ ಮಾಡುವುದನ್ನು ನೀವು ನೋಡಿದ್ದರೆ, ಈ ಅಮುದಾ ಮಾತನಾಡುವುದರಲ್ಲೂ ಆ ವ್ಯಾಪಾರಗಳಲ್ಲೂ ಏನೂ ವ್ಯತ್ಯಾಸ ಅನಿಸುವುದಿಲ್ಲ. ಮಗು ಗಂಡೋ ಹೆಣ್ಣೋ, ಬಣ್ಣ ಹಾಗೂ ತೂಕದ ಆಧಾರದಲ್ಲಿ ಬೆಲೆ ನಿರ್ಧಾರ ಆಗುತ್ತದೆ. ಹೆಣ್ಣು ಮಗುವಿನ ಬೆಲೆ ಶುರುವಾಗುವುದು ಎರಡೂ ಮುಕ್ಕಾಲು ಲಕ್ಷದಿಂದ.

ಬೈಕ್‌ನಿಂದ ಬಿದ್ದು 6 ತಿಂಗಳ ಮಗು ಸಾವು, ತಂದೆ-ತಾಯಿಗೆ ಗಾಯಬೈಕ್‌ನಿಂದ ಬಿದ್ದು 6 ತಿಂಗಳ ಮಗು ಸಾವು, ತಂದೆ-ತಾಯಿಗೆ ಗಾಯ

ಹೆಣ್ಣು ಮಗು ಒಳ್ಳೆ ತೂಕ ಇದ್ದು, ಬೆಳ್ಳಗೆ ಇದ್ದರೆ ಆಗ ಬೆಲೆ ಮೂರು ಲಕ್ಷದ ತನಕ ಹೇಳುತ್ತಾರೆ. ಇನ್ನು ಕಪ್ಪು ಬಣ್ಣದ ಗಂಡು ಮಕ್ಕಳಿಗೆ ಮೂರೂ ಕಾಲು ಲಕ್ಷದಿಂದ ಮೂರೂ ಮುಕ್ಕಾಲು ಲಕ್ಷ ಕೇಳುತ್ತಾರೆ. ಅದೇ ಬೆಳ್ಳಗೆ, ಗುಂಡ ಗುಂಡಗೆ ಇರುವ ಆರೋಗ್ಯವಂತ ಮಗುವಿಗೆ ನಾಲ್ಕು ಲಕ್ಷ ರುಪಾಯಿ ಎನ್ನುತ್ತಾಳೆ ಅಮುದಾ.

ಆಕೆಗೆ ಮೂವತ್ತು ಸಾವಿರ ರುಪಾಯಿ ಅಡ್ವಾನ್ಸ್ ಕೊಟ್ಟರೆ, ಮಗು ಮಾರಾಟಕ್ಕೆ ಬರುತ್ತಲೇ ತಿಳಿಸುತ್ತೀನಿ ಎನ್ನುತ್ತಾಳೆ ಆಕೆ. ಅಮುದಾ ನಿರೀಕ್ಷೆ ಮಾಡಿದಂತೆ ಈ ವ್ಯವಹಾರ ಆಗಲಿಲ್ಲವಂತೆ. ಆದರೆ ಆಕೆಗೆ ಮಕ್ಕಳ ಮಾರಾಟದಲ್ಲಿ ಮೂವತ್ತು ವರ್ಷದ ಅನುಭವ ಇದೆಯಂತೆ. ಯಾವಾಗ ಸಂಭಾಷಣೆಯ ಕ್ಲಿಪಿಂಗ್ ಸಾಮಾಜಿಕ ಹರಿದಾಡಲು ಶುರುವಾಯಿತೋ ಆಗ ಪೊಲೀಸರ ಗಮನಕ್ಕೆ ಬಂದು, ಆಕೆಯನ್ನು ಬಂಧಿಸಿದ್ದಾರೆ.

ಏಳು ವರ್ಷದ ಹಿಂದೆ ಕೆಲಸದಿಂದ ನಿವೃತ್ತಳಾಗಿರುವ ಅಮುದಾ, ಈ ತನಕ ಮಾರಾಟ ಮಾಡಿಸಿರುವುದು ಮೂರು ಹೆಣ್ಣುಮಕ್ಕಳನ್ನು. ಆ ಪೈಕಿ ಒಂದು ಮಗುವನ್ನು ಕಾನೂನುಬದ್ಧವಾಗಿ ದತ್ತಕಕ್ಕೆ ಕೊಡಿಸಿದ್ದಾಳೆ. ಆದರೆ ತನ್ನ ಬಳಿಗೆ ಖರೀದಿಗೆ ಬರುವವರ ಹತ್ತಿರ ನಂಬಿಕೆ ಬರಲಿ ಎಂಬ ಕಾರಣಕ್ಕೆ, ಮೂವತ್ತು ವರ್ಷಗಳಿಂದ ಇದೇ ಕೆಲಸ ಮಾಡುತ್ತಿರುವುದಾಗಿ ಹೇಳುತ್ತಾಳೆ ಎನ್ನುತ್ತಾರೆ ಪೊಲೀಸರು.

ಇನ್ನು ಜನನ ಪ್ರಮಾಣ ಪತ್ರಕ್ಕೋಸ್ಕರ ಆಕೆ ಮುನ್ಸಿಪಾಲಿಟಿಗೆ ಎಪ್ಪತ್ತು ಸಾವಿರ ರುಪಾಯಿ ಖರ್ಚು ಮಾಡುತ್ತಾಳಂತೆ. ಮಗುವನ್ನು ಖರೀದಿಸಬೇಕು ಅಂದುಕೊಳ್ಳುವವರಿಗೆ ಆಕೆ ವಾಟ್ಸ್ ಅಪ್ ಮೂಲಕ ಫೋಟೋ ಕಳುಹಿಸುತ್ತಿದ್ದಳಂತೆ. ಪೊಲೀಸರು ಗುಮಾನಿ ಪಡುವ ಪ್ರಕಾರ, ಈಕೆ ಮಾರಾಟದ ಸರಪಳಿಯ ಕೊನೆ ಕೊಂಡಿ. ಆದರೆ ಅದಕ್ಕೂ ಮುನ್ನ ಮಕ್ಕಳನ್ನು ಎಲ್ಲಿ, ಹೇಗೆ ತರುತ್ತಿದ್ದರು? ಆ ಹಂತದಲ್ಲಿ ಯಾರು ಕೆಲಸ ಮಾಡುತ್ತಿದ್ದರು ಎಂಬುದು ಬಯಲಾಗಬೇಕಿದೆ.

English summary
"The rate depends on gender, colour and weight. If it is a female, the rate begins at Rs. 2.70 lakh, if the girl is fair and is of good weight the price could go up to Rs.3 lakh. For a dark baby boy the rate is between Rs.3.30 lakh and Rs.3.70 lakh and if you want a beautiful Amul baby it is over Rs.4 lakh,", Retired govt nurse Amuda held in TN for selling newborns.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X