ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈನಲ್ಲಿ ರೆಮ್‌ಡಿಸಿವಿರ್ ಔಷಧಿ ಖರೀದಿಗೆ ಈ ದಾಖಲೆಗಳು ಕಡ್ಡಾಯ

|
Google Oneindia Kannada News

ಚೆನ್ನೈ, ಏಪ್ರಿಲ್ 27: ಕೊರೊನಾವೈರ್ ಸಾಂಕ್ರಾಮಿಕ ಪಿಡುಗು ಹರಡುವಿಕೆ ನಡುವೆ ತಮಿಳುನಾಡು ವೈದ್ಯಕೀಯ ಸೇವಾ ನಿಗಮವು ರೆಮ್‌ಡಿಸಿವಿರ್ ಇಂಜೆಕ್ಷನ್ ಮಾರಾಟಕ್ಕಾಗಿ ಕಿಲಪೌಕ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪ್ರತ್ಯೇಕ ಕೇಂದ್ರವನ್ನು ತೆರೆದಿದೆ. ಔಷಧಿಯು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೂ ಮಾರಾಟ ಮಾಡಲಾಗುತ್ತದೆ.

ಕೊವಿಡ್-19 ಜೀವ ರಕ್ಷಕ ಔಷಧಿಯನ್ನು ಕೊಳ್ಳುವುದಕ್ಕಾಗಿ ಜನರು ಸರದಿ ಸಾಲಿನಲ್ಲಿ ಕಾದು ನಿಂತಿದ್ದರು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದಿಲ್ಲ ದೊಡ್ಡ ಸವಾಲಾಗಿತ್ತು. ಕೇಂದ್ರದ ಬಳಿ ನಿಯಂತ್ರಣವಿಲ್ಲದೇ ಔಷಧಿ ಖರೀದಿಗೆ ಮುಗಿಬಿದ್ದ ಜನರ ನಡುವೆಯೇ ವಾಗ್ವಾದಗಳು ನಡೆದವು.

ಕಪ್ಪು ಮಾರುಕಟ್ಟೆ: ಒಂದು ಡೋಸ್ ರೆಮ್‌ಡಿಸಿವಿರ್ ಲಸಿಕೆಗೆ 25 ರಿಂದ 40 ಸಾವಿರ ರೂ.!ಕಪ್ಪು ಮಾರುಕಟ್ಟೆ: ಒಂದು ಡೋಸ್ ರೆಮ್‌ಡಿಸಿವಿರ್ ಲಸಿಕೆಗೆ 25 ರಿಂದ 40 ಸಾವಿರ ರೂ.!

ಜನರನ್ನು ನಿಯಂತ್ರಿಸುವ ಉದ್ದೇಶದಿಂದ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಇದರ ಜೊತೆಗೆ ಮಂಗಳವಾರ ಹೆಚ್ಚುವರಿ ಔಷಧಿ ಮಾರಾಟ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ತಮಿಳುನಾಡು ವೈದ್ಯಕೀಯ ಸೇವಾ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಿ ಉಮಾನಾಥ್ ಹೇಳಿದ್ದಾರೆ.

Remdesivir Injection Counter Opened In Chennai; Rate And Needed Documents For Purchase

ಒಂದು ಬಾಟಲಿ ರೆಮ್‌ಡಿಸಿವಿರ್ ಲಸಿಕೆ ಬೆಲೆ:

ಒಬ್ಬ ವ್ಯಕ್ತಿಯು ಗರಿಷ್ಠ 6 ರೆಮ್‌ಡಿಸಿರ್ ಲಸಿಕೆ ಬಾಟಲಿಗಳನ್ನು ಖರೀದಿಸಲು ಅವಕಾಶವಿದೆ. ಒಂದು ಬಾಟಲಿ ರೆಮ್‌ಡಿಸಿರ್ ಲಸಿಕೆಗೆ ಜಿಎಸ್ ಟಿ ಸೇರಿ 1568 ರೂ. ಬೆಲೆ ನಿಗದಿಗೊಳಿಸಲಾಗಿದೆ. ಚೆನ್ನೈನಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ ಹಿನ್ನೆಲೆ ಆರಂಭಿಕವಾಗಿ ಈ ಪ್ರದೇಶದಲ್ಲಿ ಮಾತ್ರ ಲಸಿಕೆ ಮಾರಾಟ ಕೇಂದ್ರ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಇತರೆ ಪ್ರದೇಶಗಳಲ್ಲೂ ರೆಮ್‌ಡಿಸಿವಿರ್ ಲಸಿಕೆ ಮಾರಾಟ ಕೇಂದ್ರವನ್ನು ಆರಂಭಿಸಲಾಗುತ್ತದೆ ಎಂದು ಉಮಾನಾಥ್ ಹೇಳಿದರು.

ರೆಮ್‌ಡಿಸಿವಿರ್ ಲಸಿಕೆ ಖರೀದಿಗೆ ಈ ದಾಖಲೆ ಕಡ್ಡಾಯ:

ಕೊರೊನಾವೈರಸ್ ಸೋಂಕಿತರ ಜೀವ ರಕ್ಷಣೆಗೆ ಬಳಸುವ ರೆಮ್‌ಡಿಸಿವಿರ್ ಲಸಿಕೆಯನ್ನು ಎಲ್ಲರಿಗೂ ಮಾರಾಟ ಮಾಡುವುದಕ್ಕೆ ಅನುಮತಿಯಿಲ್ಲ. ರೆಮ್‌ಡಿಸಿವಿರ್ ಲಸಿಕೆ ಖರೀದಿಗೂ ಮೊದಲು ಅಗತ್ಯ ದಾಖಲೆಗಳನ್ನು ತೋರಿಸುವುದು ಕಡ್ಡಾಯವಾಗಿದೆ. ವೈದ್ಯರ ಸಲಹೆ ಪತ್ರ, ಕೊವಿಡ್-19 ರೋಗಿ ಆಸ್ಪತ್ರೆಯಲ್ಲಿ ದಾಖಲಾತಿ ಪತ್ರ, ಕೊರೊನಾವೈರಸ್ ಸೋಂಕಿನ ಬಗ್ಗೆ RT-PCR ಮತ್ತು CT ಸ್ಕ್ಯಾನ್ ವರದಿಯನ್ನು ಹೊಂದಿರಬೇಕು.

English summary
Remdesivir Injection Counter Opened In Chennai; Here Read Rate And Needed Documents For Purchase.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X