ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನ್ಮದಿನದ ಸಂದರ್ಭದಲ್ಲಿ ಕಮಲ್ ಹಾಸನ್ ಹೊಸ ಘೋಷಣೆ

|
Google Oneindia Kannada News

ಚೆನ್ನೈ, ನವೆಂಬರ್ 7: ಬುಧವಾರ 64ನೇ ವಯಸ್ಸಿಗೆ ಕಾಲಿಟ್ಟ ನಟ-ರಾಜಕಾರಣಿ ಕಮಲ್ ಹಾಸನ್, ತಮ್ಮ ಸಂಸ್ಥಾಪನೆಯ ಮಕ್ಕಳ್ ನೀದಿ ಮೈಯಂ ಪಕ್ಷ ತಮಿಳುನಾಡಿನ 20 ವಿಧಾನಸಭಾ ಕ್ಷೇತ್ರಗಳಲ್ಲಿನ ಉಪ ಚುನಾವಣೆಗಳಿಗೆ ಸ್ಪರ್ಧಿಸಲು ಸಿದ್ಧರಾಗಿರುವುದಾಗಿ ಹೇಳಿದ್ದಾರೆ.

ಉಪ ಚುನಾವಣೆ ನಡೆಯಲಿದೆಯೇ ಅಥವಾ ಇಲ್ಲವೇ ಎನ್ನುವುದು ಯಾರಿಗೂ ಗೊತ್ತಿಲ್ಲ. ಆದರೆ, ಚುನಾವಣೆ ನಡೆದರೆ ನಾವು ಸ್ಪರ್ಧಿಸಲು ಸಿದ್ಧ ಎಂದು ಕಮಲ್ ನುಡಿದರು.

ಲೋಕಸಭಾ ಚುನಾವಣೆಗೆ ನಾವು ಸಿದ್ಧ: ಕಮಲ್ ಹಾಸನ್ಲೋಕಸಭಾ ಚುನಾವಣೆಗೆ ನಾವು ಸಿದ್ಧ: ಕಮಲ್ ಹಾಸನ್

'ಆಶ್ವಾಸನೆಗಳನ್ನು ನೀಡುವುದರ ಬಗ್ಗೆ ನನಗೆ ನಂಬಿಕೆಯಿಲ್ಲ. ನಾನು ಜನರಿಂದ ಸಲಹೆಗಳನ್ನು ಪಡೆದುಕೊಳ್ಳುತ್ತಿದ್ದೇನೆ' ಎಂದು ತಿಳಿಸಿದರು.

ready to contest tamil nadu by elections kamal haasan on his birthday

ದೆಹಲಿಯಲ್ಲಿ ರಾಹುಲ್ ಗಾಂಧಿ ಭೇಟಿಯಾದ ಕಮಲ್ ಹಾಸನ್ದೆಹಲಿಯಲ್ಲಿ ರಾಹುಲ್ ಗಾಂಧಿ ಭೇಟಿಯಾದ ಕಮಲ್ ಹಾಸನ್

ಎಎಂಎಂಕೆ ಮುಖಂಡ ಟಿಟಿವಿ ದಿನಕರನ್ ಅವರ ಬೆಂಬಲಿಗ 18 ಎಐಎಡಿಎಂಕೆ ಶಾಸಕರ ಅನರ್ಹತೆಯನ್ನು ಮದ್ರಾಸ್ ಹೈಕೋರ್ಟ್ ಎತ್ತಿಹಿಡಿದಿತ್ತು. ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಮತ್ತು ತಿರುಪರಂಕುಂಡ್ರಮ್‌ನ ಎಐಎಡಿಎಂಕೆ ಶಾಸಕ ಎಕೆ ಬೋಸ್ ಅವರ ನಿಧನದಿಂದ ಇನ್ನೆರಡು ಸ್ಥಾನಗಳು ತೆರವಾಗಿದ್ದವು.

ತಮಿಳುನಾಡು ರಾಜಕೀಯದ ಮುಂದಿನ ಕಿಂಗ್ ಯಾರು? ತಮಿಳುನಾಡು ರಾಜಕೀಯದ ಮುಂದಿನ ಕಿಂಗ್ ಯಾರು?

ಹೀಗಾಗಿ ಈ ಎಲ್ಲ 20 ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿದೆ. ಚುನಾವಣಾ ಆಯೋಗ ಉಪ ಚುನಾವಣೆಯ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ. ಈ ಚುನಾವಣೆಯು ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಸರ್ಕಾರಕ್ಕೆ ಅತಿ ಮಹತ್ವದ್ದಾಗಿದೆ.

English summary
Actor turned politician Kamal Haasan on Wednesday announced on 64th birthday that his Makkal Needhi Maiam party is ready to contest by elections 20 assembly seats in Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X