ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈನಲ್ಲಿ ಒಂದು ಇಲಿ ಹಿಡಿಯಲು ಸಾವಿರಾರು ರುಪಾಯಿ ಖರ್ಚು!

|
Google Oneindia Kannada News

ಚೆನ್ನೈ, ಅಕ್ಟೋಬರ್ 09: ಒಂದು ಇಲಿ ಹಿಡಿಯಲು ಭಾರತೀಯ ರೈಲ್ವೆ ಇಲಾಖೆಯ ಚೆನ್ನೈ ರೈಲ್ವೆ ವಿಭಾಗವು ಬರೋಬ್ಬರಿ 22,300 ರೂಪಾಯಿ ಖರ್ಚು ಮಾಡಿದೆ ಎಂಬ ಸತ್ಯವನ್ನು ಮಾಹಿತಿ ಹಕ್ಕು ಕಾಯ್ದೆ( ಆರ್ ಟಿಐ) ಅರ್ಜಿ ಹೊರಹಾಕಿದೆ.

ಇದಲ್ಲದೆ ಚೆನ್ನೈ ರೈಲ್ವೆ ಸ್ಟೇಷನ್ ಗಳಲ್ಲಿ ಇಲಿ ಹಾವಳಿ ತಪ್ಪಿಸಲು, ಬೋಗಿಗಳಿಂದ ಇಲಿಗಳನ್ನು ಓಡಿಸಲು ಕಳೆದ ಮೂರು ವರ್ಷಗಳಲ್ಲಿ ಸುಮಾರು 5.89 ಕೋಟಿ ರು ಖರ್ಚಾಗಿದೆ ಎಂಬ ಮಾಹಿತಿ ಸಿಕ್ಕಿದೆ. ರೈಲ್ವೆ ನಿಲ್ದಾಣದಲ್ಲಿ ಇಲಿ ನಿಯಂತ್ರಣಕ್ಕಾಗಿ 2016ರ ಮೇನಿಂದ 2019ರ ಎಪ್ರಿಲ್ ವರೆಗೆ 5.89 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ.

11 ಲಕ್ಷ ಸರ್ಕಾರಿ ನೌಕರರಿಗೆ ಹಬ್ಬದ ಬೋನಸ್ ಕೊಟ್ಟ ಮೋದಿ ಸರ್ಕಾರ 11 ಲಕ್ಷ ಸರ್ಕಾರಿ ನೌಕರರಿಗೆ ಹಬ್ಬದ ಬೋನಸ್ ಕೊಟ್ಟ ಮೋದಿ ಸರ್ಕಾರ

2018-19ನೇ ಸಾಲಿನಲ್ಲಿ ಒಟ್ಟು 2636 ಇಲಿಗಳು ಇಲಾಖೆಯ ಬೋನಿಗೆ ಸಿಕ್ಕಿಬಿದ್ದಿವೆ. ಈ ಪೈಕಿ 1,715 ಇಲಿಗಳನ್ನು ಚೆನ್ನೈ ಸೆಂಟ್ರಲ್, ಎಗ್ಮೋರ್, ಚೆಂಗಲ್ಪಟ್ಟು, ತಾಂಬರಮ್ ಹಾಗೂ ಜೋಳಾರ್ ಪೇಟ್ ಜಂಕ್ಷನ್ ಗಳಲ್ಲಿ ಹಿಡಿಯಲಾಗಿದೆ, 921 ಇಲಿಗಳನ್ನು ರೈಲ್ವೆ ಕೋಚಿಂಗ್ ಕೇಂದ್ರದಲ್ಲಿ ಹಿಡಿಯಲಾಗಿದೆ ಎಂದು ಆರ್.ಟಿ.ಐ. ಮೂಲಕ ಕೇಳಲಾದ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಲೆಕ್ಕಾಚಾರವನ್ನು ಗಮಿಸಿದರೆ ಒಂದು ಇಲಿ ಹಿಡಿಯಲು ಸುಮಾರು 22,334 ರು ಖರ್ಚಾಗಿದೆ.

ಆರ್ ಟಿಐ ಎಂದರೇನು? ಹೇಗೆ ಅರ್ಜಿ ಸಲ್ಲಿಸುವುದು?ಆರ್ ಟಿಐ ಎಂದರೇನು? ಹೇಗೆ ಅರ್ಜಿ ಸಲ್ಲಿಸುವುದು?

Rat menance haunts Chennai Railway Division, Rs 22k to Trap One Rodent

ಆರ್ ಟಿಐ ಅರ್ಜಿ ಮೂಲಕ ಹೊರ ಬಂದಿರುವ ಮಾಹಿತಿ ಕಂಡು ಸಾರ್ವಜನಿಕರು ಹುಬ್ಬೇರಿಸಿ, ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆದರೆ, ಚೆನ್ನೈ ರೈಲ್ವೆ ನಿಲ್ದಾಣದ ಸಿಪಿಆರ್ ಒ ಧನಂಜಯ್, ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಓಂ ಪ್ರಕಾಶ್ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

English summary
From May 2016 to April 2019, the Chennai division of Indian Railways have spent a whopping Rs 5.89 crore to tackle rat menace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X