ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಣ್ಣಲ್ಲಿ ಮಣ್ಣಾದ ಕ್ಷಿಪಣಿ ಮಾನವ ಡಾ. ಕಲಾಂ

|
Google Oneindia Kannada News

ಚೆನ್ನೈ, ಜುಲೈ 30 : ಸೋಮವಾರ ನಿಧನರಾದ ಕ್ಷಿಪಣಿ ಮಾನವ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಅಂತ್ಯಕ್ರಿಯೆ ತಮಿಳುನಾಡಿನ ರಾಮೇಶ್ವರಂನಲ್ಲಿ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ರಾಮೇಶ್ವರಂಗೆ ಆಗಮಿಸಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ಆಗಲಿದ ಚೇತನಕ್ಕೆ ಅಂತಿಮ ನಮನ ಸಲ್ಲಿಸಿದರು.

ಗುರುವಾರ ಬೆಳಗ್ಗೆ ಅಂತಿಮ ವಿಧಿವಿಧಾನಗಳು ಆರಂಭವಾದವು. ಕಲಾಂ ಅವರ ನಿವಾಸಕ್ಕೆ ಮೃತದೇಹವನ್ನು ತೆಗೆದುಕೊಂಡು ಹೋಗಿ ಕುಟುಂಬದವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲಾಯಿತು. ಸಾವಿರಾರು ಜನರು ರಾಮೇಶ್ವರಂಗೆ ಆಗಮಿಸಿ, ಡಾ.ಕಲಾಂ ಅವರಿಗೆ ಅಂತಿಮ ನಮನ ಸಲ್ಲಿಸಿದರು.[ಕಲಾಂ ಆಡಿದ ಕೊನೆ ಘಳಿಗೆಯ ಮಾತುಗಳೇನು?]

madurai2

ಕಲಾಂ ಅವರ ನಿವಾಸದಿಂದ ಸುಮಾರು 5 ಕಿ.ಮೀ.ದೂರದಲ್ಲಿರುವ ಪೆಯಿಕರಂಬು ಮೈದಾನದಲ್ಲಿ ಅಬ್ದುಲ್ ಕಲಾಂ ಅವರ ಅಂತ್ಯಕ್ರಿಯೆ ನಡೆಯಿತು. ಕಲಾಂ ಅವರ ನಿವಾಸದಿಂದ ಸೇನೆಯ ವಾಹನದಲ್ಲಿ ಪಾರ್ಥಿವ ಶರೀರವನ್ನು ಮೈದಾನಕ್ಕೆ ತೆಗೆದುಕೊಂಡು ಬರಲಾಯಿತು.

ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ವಿವಿಧ ಕೇಂದ್ರ ಸಚಿವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ತಮಿಳುನಾಡು ರಾಜ್ಯಪಾಲ ರೋಸಯ್ಯ ಸೇರಿದಂತೆ ಹಲವಾರು ಗಣ್ಯರು ಅಂತಿಮ ನಮನ ಸಲ್ಲಿಸಿದರು. ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಯಿತು. [ಅಬ್ದುಲ್ ಕಲಾಂರ ಜೀವನ ಮತ್ತು ಸಾಧನೆ ಚಿತ್ರಗಳು]

ಸಮಯ 12.05 : ಮಣ್ಣಲ್ಲಿ ಮಣ್ಣಾದ ಕ್ಷಿಪಣಿ ಮಾನವ, ಜನರ ರಾಷ್ಟ್ರಪತಿ ಅಬ್ದುಲ್ ಕಲಾಂ

ಸಮಯ 12 ಗಂಟೆ : ಅಂತ್ಯ ಸಂಸ್ಕಾರದ ಪ್ರಕ್ರಿಯೆಗಳು ಪೂರ್ಣ

ಸಮಯ 11.48 : ಕುಟುಂಬದವರಿಗೆ ಕಲಾಂ ಪಾರ್ಥಿವ ಶರೀರ ಹಸ್ತಾಂತರ

ಸಮಯ 11.40 : ಕಲಾಂ ಪಾರ್ಥಿವ ಶರೀರದ ಮೇಲಿದ್ದ ರಾಷ್ಟ್ರಧ್ವಜವನ್ನು ತೆಗೆದ ಸೇನಾ ಸಿಬ್ಬಂದಿ

ಸಮಯ 11.30 : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ವಿವಿಧ ಕೇಂದ್ರ ಸಚಿವರು ಕಲಾಂಗೆ ಅಂತಿಮ ನಮನ ಸಲ್ಲಿಸಿದರು

abdul kalam

ಸಮಯ 11.20 : ಅಂತಿಮ ನಮನ ಸಲ್ಲಿಸಿದ ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ

ಸಮಯ 11.14 : ಪ್ರಧಾನಿ ನರೇಂದ್ರ ಮೋದಿ ಅವರಿಂದ ಡಾ.ಕಲಾಂ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಕೆ

ಸಮಯ 11.03 : ಪೆಯಿಕರಂಬು ಮೈದಾನ ತಲುಪಿದ ಡಾ.ಕಲಾಂ ಪಾರ್ಥಿವ ಶರೀರ

ಸಮಯ 11 ಗಂಟೆ : 500ಕ್ಕೂ ಹೆಚ್ಚು ಗಣ್ಯರು ಡಾ.ಕಲಾಂ ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ರಾಮೇಶ್ವರಂಗೆ ಆಗಮಿಸಿದ್ದಾರೆ

ಸಮಯ 10.49 : ರಾವೇಶ್ವರಂಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

ಸಮಯ 10.35 : ಕೇರಳ ಸಿಎಂ ಉಮನ್ ಚಾಂಡಿ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ವಿವಿಧ ಕೇಂದ್ರ ಸಚಿವರು, ತಮಿಳುನಾಡು ಹಣಕಾಸು ಸಚಿವ ಪನ್ನೀರ್ ಸೆಲ್ವಂ ಮುಂತಾದವರು ರಾಮೇಶ್ವರಂಗೆ ಆಗಮಿಸಿದ್ದಾರೆ.[ಚಿತ್ರಗಳು : ಅಬ್ದುಲ್ ಕಲಾಂಗೆ ಅಂತಿಮ ನಮನ]

ಸಮಯ 10.27 : ಅಬ್ದುಲ್ ಕಲಾಂ ಅವರ ನಿವಾಸದಿಂದ ಪೆಯಿಕರಂಬು ಮೈದಾನಕ್ಕೆ ಮೃತದೇಹವನ್ನು ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಲಾಗುತ್ತಿದೆ.

ಸಮಯ 10 ಗಂಟೆ : ಮಧುರೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

ಸಮಯ 9.30 : ಮಧುರೈ ವಿಮಾನ ನಿಲ್ದಾಣಕ್ಕೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆಗಮನ, ಹೆಲಿಕಾಪ್ಟರ್ ಮೂಲಕ ರಾಮೇಶ್ವರಂಗೆ ಪ್ರಯಾಣ

English summary
Thousands of people bid an an emotional farewell to former president APJ Abdul Kalam. The funeral proceedings held on Thursday, July 30 in Rameswaram, Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X