ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರಾವಳಿ ಮೇಲೆ ಕಣ್ಗಾವಲಿರಿಸಲಿದೆ 'ವಿಗ್ರಹ ': ರಾಜನಾಥ್ ಸಿಂಗ್

|
Google Oneindia Kannada News

ದೇಶದ ಭದ್ರತಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ದೇಶದ ಭದ್ರತಾ ಸಾಮರ್ಥ್ಯ ಬಲಗೊಂಡಿದ್ದು, ಮುಂಬೈಯಲ್ಲಿ 2008ರ ಭಯೋತ್ಪಾದನಾ ದಾಳಿಯ ನಂತರ ಸಮುದ್ರ ಮಾರ್ಗದಲ್ಲಿ ಯಾವುದೇ ಭಯೋತ್ಪಾದಕ ಘಟನೆ ನಡೆದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಶನಿವಾರ ಐಸಿಜಿ ಹಡಗು ವಿಗ್ರಹವನ್ನು ನಿಯೋಜಿಸಿದ ನಂತರ ಮಾತನಾಡಿ, ಭಾರತದ ಕೋಸ್ಟ್ ಗಾರ್ಡ್ ಬೆಳವಣಿಗೆಯ ಪ್ರಯಾಣವು ಸಾಧಾರಣವಾಗಿ ಆರಂಭವಾಯಿತು. 5ರಿಂದ 7 ಸಣ್ಣ ದೋಣಿಗಳಿಂದ ಇಂದು 20 ಸಾವಿರಕ್ಕೂ ಹೆಚ್ಚು ಸಕ್ರಿಯ ಸಿಬ್ಬಂದಿಯಾಗಿ ಬೆಳೆದಿದೆ.

Rajnatah Singh Says India Has Great Scope To Become Indigenous Ship-Building Hub

ಕಳೆದ 40ರಿಂದ 45 ವರ್ಷಗಳಲ್ಲಿ 150 ಹಡಗುಗಳು ಮತ್ತು 65 ಕ್ಕಿಂತ ಹೆಚ್ಚು ವಿಮಾನಗಳನ್ನು ಹೊಂದಿದೆ. ಭಾರತೀಯ ಕರಾವಳಿ ಕಾವಲುಪಡೆಯು ಕರಾವಳಿ ಭದ್ರತೆ ಹಾಗೂ ಕಡಲ ಬಿಕ್ಕಟ್ಟುಗಳು ಮತ್ತು ವಿಪತ್ತಿನ ಸಂದರ್ಭಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪು ಮೂಡಿಸಿದೆ ಎಂದರು.

ಜಗತ್ತು ಅತ್ಯಂತ ವೇಗವಾಗಿ ಮತ್ತು ಆರ್ಥಿಕವಾಗಿ ಬದಲಾಗುತ್ತಿದೆ, ದೇಶಗಳ ನಡುವಿನ ರಾಜಕೀಯ ಮತ್ತು ವ್ಯಾಪಾರ ಸಂಬಂಧಗಳು ನಿರಂತರವಾಗಿ ಏರುಪೇರಾಗುತ್ತಿವೆ ಎಂದರು.

ನಮ್ಮ ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಮೀನುಗಾರ ಸಮುದಾಯದ ರಕ್ಷಣೆ, ಕಸ್ಟಮ್ಸ್ ಇಲಾಖೆ ಅಥವಾ ಇತರ ರೀತಿಯ ಅಧಿಕಾರಿಗಳಿಗೆ ಸಹಾಯವನ್ನು ವಿಸ್ತರಿಸುವುದು, ನಮ್ಮ ದ್ವೀಪಗಳು ಮತ್ತು ಟರ್ಮಿನಲ್‌ಗಳ ರಕ್ಷಣೆ, ಅಥವಾ ವೈಜ್ಞಾನಿಕ ದತ್ತಾಂಶ ಸಂಗ್ರಹ ಮತ್ತು ಬೆಂಬಲ ಸೇರಿದಂತೆ ರಾಷ್ಟ್ರಕ್ಕೆ ಹಲವು ರೀತಿಯಲ್ಲಿ ಸೇವೆ ಸಲ್ಲಿಸಿದ್ದೀರಿ ಎಂದು ಅವರು ಹೇಳಿದರು.

ಇದು ನಮ್ಮಲ್ಲಿರುವ ಭದ್ರತಾ ಸಾಮರ್ಥ್ಯಗಳಲ್ಲಿನ ವರ್ಧನೆಯ ಫಲಿತಾಂಶವಾಗಿದೆ 2008 ರ ಮುಂಬೈ ದಾಳಿಯ ನಂತರ ಸಮುದ್ರ ಮಾರ್ಗದ ಮೂಲಕ ಯಾವುದೇ ಭಯೋತ್ಪಾದಕ ಆಘಾತವನ್ನು ದೇಶ ಅನುಭವಿಸಿಲ್ಲ "ಎಂದು ರಾಜನಾಥ್ ಸಿಂಗ್ ಹೇಳಿದರು.

ಕಡಲಾಚೆಯ ಕಣ್ಗಾವಲು ಹಡಗುಗಳ ಸರಣಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಏಳನೆಯ ಭಾರತೀಯ ಕೋಸ್ಟ್ ಗಾರ್ಡ್ ಐಸಿಜಿ ಹಡಗು 'ವಿಗ್ರಹ'ವನ್ನು ನಿಯೋಜಿಸಿದ್ದಾರೆ.

ಚೆನ್ನೈನಲ್ಲಿ ಶನಿವಾರ ನಡೆದ ಕಾರ್ಯಾರಂಭ ಸಮಾರಂಭದಲ್ಲಿ ಕೈಗಾರಿಕಾ ಸಚಿವ ತಂಗಂ ಭಾಗವಹಿಸಿದ್ದರು ತೆನ್ನರಸು, ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಎಂ ಎಂ ನರವಾಣೆ , ಭಾರತೀಯ ಕೋಸ್ಟ್ ಗಾರ್ಡ್ ಮಹಾನಿರ್ದೇಶಕರು ಕೆ ನಟರಾಜನ್, ಕೇಂದ್ರ, ರಾಜ್ಯ ಸರ್ಕಾರಗಳ ಇತರ ಗಣ್ಯರು ಉಪಸ್ಥಿತರಿದ್ದರು. ಸ್ವದೇಶಿ ನಿರ್ಮಿತ ಹಡಗು ಎಲ್ ಆ್ಯಂಡ್ ಟಿ ಹಡಗು ತಯಾರಿಕಾ ಸಂಸ್ಥೆಯಿಂದ ನಿರ್ಮಾಣಗೊಂಡಿದೆ. ಸುಧಾರಿತ ಅಗ್ನಿಶಾಮಕ ಶಕ್ತಿಯೊಂದಿಗೆ ಅತ್ಯಾಧುನಿಕ ತಂತ್ರಜ್ಞಾನದಿಂದ ಹಡಗು ವಿನ್ಯಾಸಗೊಂಡಿದೆ. ಒಂದು ಅವಳಿ ಎಂಜಿನ್ ಹೆಲಿಕಾಪ್ಟರ್ ನಾಲ್ಕು ಅತಿ ವೇಗದ ದೋಣಿಗಳನ್ನು ಇದರಲ್ಲಿ ಸಾಗಿಸಬಹುದಾಗಿದೆ.

ಐಸಿಜಿ ಹಡಗು ವಿಗ್ರಹವನ್ನು ನಿಯೋಜಿಸಿದ ನಂತರ ಮಾತನಾಡಿದ ಅವರು, ಪ್ರಪಂಚದಾದ್ಯಂತ ನಡೆಯುತ್ತಿರವ ಇಂತಹ ಹಲವು ಬದಲಾವಣೆಗಳು ಭಾರತದ ಕಾಳಜಿಯ ವಿಷಯವಾಗಿದೆ. ಒಂದು ರಾಷ್ಟ್ರವಾಗಿ, ಈ ಸಮಯದಲ್ಲಿ ತನ್ನ ರಕ್ಷಣಾ ಸಾಮರ್ಥ್ಯ ಹೆಚ್ಚಿನ ಮಟ್ಟದಲ್ಲಿ ಇರಿಸಿಕೊಳ್ಳಬೇಕಿದೆ ಎಂದರು.

English summary
Defence Minister Rajnath Singh on Saturday said the country has “great scope” to become an indigenous ship-building hub, while pointing out that the Centre has introduced policies to help the domestic industry become world class
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X