ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜೀವ್ ಗಾಂಧಿ ಹತ್ಯೆ ಅಪರಾಧಿ ನಳಿನಿ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನ

|
Google Oneindia Kannada News

ಚೆನ್ನೈ, ಜುಲೈ 21: ಭಾರತದ ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಅಪರಾಧಿಯಾಗಿರುವ ನಳಿನಿ ಶ್ರೀಹರನ್ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪಿ ಪರ ವಕೀಲರು ಹೇಳಿದ್ದಾರೆ.

Recommended Video

Elephant : ಈ ಆನೆಯ ಕೋಪ ನೋಡಿದ್ರೆ ಭಯ ಆಗುತ್ತೆ | Angry Elephant found in Bandipur National Park | Oneindia Kannada

ಕಳೆದ ಮೂರು ದಶಕಗಳಿಂದ ಜೈಲಿನಲ್ಲಿರುವ ನಳಿನಿ ಶ್ರೀಹರನ್ ಸೋಮವಾರ ರಾತ್ರಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದಾರೆ ಎಂದು ಆಕೆಯ ವಕೀಲ ಪುಗಲೆಂತಿ ಇಂಡಿಯಾ ಟುಡೇ ಮಾಧ್ಯಮಕ್ಕೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ರಾಜೀವ್ ಗಾಂಧಿ ಹಂತಕಿಗೆ ಬಿಡುಗಡೆ ಭಾಗ್ಯವಿಲ್ಲರಾಜೀವ್ ಗಾಂಧಿ ಹಂತಕಿಗೆ ಬಿಡುಗಡೆ ಭಾಗ್ಯವಿಲ್ಲ

ಕಳೆದ 29 ವರ್ಷಗಳಿಂದ ವೆಲ್ಲೂರು ಮಹಿಳಾ ಜೈಲಿನಲ್ಲಿರುವ ನಳಿನಿ ಶ್ರೀಹರನ್ ಇದೇ ಮೊದಲ ಬಾರಿಗೆ ಇಂತಹ ನಿರ್ಧಾರಕ್ಕೆ ಮುಂದಾಗಿದ್ದಾರೆ ಎಂದು ವಕೀಲ ಪುಗಲೆಂತಿ ಹೇಳಿದ್ದಾರೆ. ಮುಂದೆ ಓದಿ....

ಸಹ ಕೈದಿ ಜೊತೆ ಜಗಳ

ಸಹ ಕೈದಿ ಜೊತೆ ಜಗಳ

ಘಟನೆಯ ಬಗ್ಗೆ ವಿವರಣೆ ನೀಡಿರುವ ವಕೀಲ ಪುಗಲೆಂತಿ, ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಇನ್ನೊಬ್ಬ ಅಪರಾಧಿ ಜೊತೆ ನಳಿನಿ ಶ್ರೀಹರ್‌ಗೆ ಜಗಳ ಆಗಿದೆ. ಈ ವಿಚಾರವನ್ನು ಇತರೆ ಕೈದಿಗಳು ಜೈಲರ್‌ಗೆ ತಿಳಿಸಿದ್ದಾರೆ. ಆ ಬಳಿಕ ನಳಿನಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ವಕೀಲರು ಮಾಹಿತಿ ನೀಡಿದ್ದಾರೆ. ಇದೇ ಮೊದಲ ಸಲ ಇಂತಹ ಘಟನೆಯಾಗಿರುವುದರಿಂದ ಈ ಬಗ್ಗೆ ನಿಖರವಾದ ಕಾರಣ ತಿಳಿಯಲು ನಾನು ಮುಂದಾಗಿದ್ದೇವೆ ಎಂದು ವಕೀಲ ಪುಗಲೆಂತಿ ಹೇಳಿದ್ದಾರೆ.

ಜೈಲು ಬದಲಾಯಿಸಲು ಪತಿ ಮನವಿ

ಜೈಲು ಬದಲಾಯಿಸಲು ಪತಿ ಮನವಿ

ವೆಲ್ಲೂರು ಜೈಲಿನಲ್ಲಿ ನಳಿನಿ ಶ್ರೀಹರನ್ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಳಿಕ ಆಕೆಯ ಪತಿ ಮುರುಗನ್ ಪತ್ನಿಯನ್ನು ವೆಲೂರು ಜೈಲಿನಿಂದ ಪುಜಾಲ್ ಜೈಲಿಗೆ ಸ್ಥಳಾಂತರಿಸಿ ಎಂದು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ವಕೀಲರು ಜೈಲಿಗೂ ಭೇಟಿ ನೀಡಿ ಬಂದಿದ್ದಾರೆ. ಈ ಕುರಿತು ನ್ಯಾಯಾಲಯದಲ್ಲಿ ಮನವಿ ಸಹ ಮಾಡಲಾಗುವುದು ಎಂದು ವಕೀಲು ಪುಗಲೆಂತಿ ಹೇಳಿದ್ದಾರೆ.

ರಾಜೀವ್ ಗಾಂಧಿ ಹಂತಕರಿಗೆ ಜೀವಾವಧಿ ಶಿಕ್ಷೆರಾಜೀವ್ ಗಾಂಧಿ ಹಂತಕರಿಗೆ ಜೀವಾವಧಿ ಶಿಕ್ಷೆ

ಯಾರು ಈ ನಳಿನಿ ಶ್ರೀಹರನ್?

ಯಾರು ಈ ನಳಿನಿ ಶ್ರೀಹರನ್?

1991ರ ಮೇ 21ರ ರಾತ್ರಿ ತಮಿಳುನಾಡಿನ ಶ್ರೀಪೆರುಂಬುದೂರಿನಲ್ಲಿ ಚುನಾವಣ ಪ್ರಚಾರಕ್ಕೆಂದು ಆಗಮಿಸಿದ್ದ ರಾಜೀವ್ ಗಾಂಧಿ ಅವರನ್ನು ಮಹಿಳೆಯೊಬ್ಬರು ಆತ್ಮಾಹುತಿ ಬಾಂಬ್ ಸ್ಫೋಟಿಸುವ ಮೂಲಕ ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ಎಲ್‌ಟಿಟಿಇ ಆಪರೇಟಿವ್‌ನ ಆಪ್ತ ಸಹಾಯಕಿಯಾಗಿದ್ದ ನಳಿನಿಯನ್ನು ತನಿಖೆ ವೇಳೆ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ನಳಿನಿ, ಆಕೆಯ ಪತಿ ಮುರುಗನ್ ಸೇರಿದಂತೆ ಏಳು ಮಂದಿಗೆ ನ್ಯಾಯಾಲಯ ಮರಣ ದಂಡನೆ ವಿಧಿಸಿತು. ಬಳಿಕ, ಮರಣ ದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಾಡು ಮಾಡಲಾಯಿತು.

ರಾಜೀವ್ ಹತ್ಯೆಗೆ ವಿಷಾದ ವ್ಯಕ್ತಪಡಿಸಿದ್ದ ನಳಿನಿ

ರಾಜೀವ್ ಹತ್ಯೆಗೆ ವಿಷಾದ ವ್ಯಕ್ತಪಡಿಸಿದ್ದ ನಳಿನಿ

ರಾಜೀವ್ ಗಾಂಧಿ ಹತ್ಯೆ ಬಗ್ಗೆ ಆರೋಪಿ ನಳಿನಿ ಶ್ರೀಹರನ್ ವಿಷಾದಿಸಿದ್ದರು ಎಂದು ಈ ಹಿಂದೆ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿತ್ತು. ರಾಜೀವ್ ಗಾಂಧಿ ಅವರ ಸಾವಿನಿಂದ ದೇಶಕ್ಕೆ ನಷ್ಟವಾಗಿದೆ ಎಂದು ನಳಿನಿ ಹೇಳಿದ್ದರು ಎಂದು ವರದಿ ಮಾಡಿದೆ. ಕಳೆದ ವರ್ಷ ತನ್ನ ಮಗಳ ಮದುವೆ ಹಿನ್ನೆಲೆ ಒಂದು ತಿಂಗಳು ಪೆರೋಲ್ ಅನ್ವಯ ಜೈಲಿನಿಂದ ಹೊರಗೆ ಬಂದಿದ್ದರು. ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ನಳಿನಿ ಜೊತೆ ಪತಿ ಮುರುಗನ್, ಎ.ಜಿ.ಪೆರರಿವಾಲನ್, ಸಂತತಿ, ಜಯಕುಮಾರ್, ರವಿಚಂದ್ರನ್ ಮತ್ತು ರಾಬರ್ಟ್ ಪ್ಯಾಸ್ ಸಹ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು.

English summary
Indian EX prime minister Rajiv Gandhi killer Nalini attempts suicide at Vellore prison.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X