ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಜಿನಿಕಾಂತ್ ಹೇಳಿಕೆ ಎಫೆಕ್ಟ್‌: ಪೆರಿಯಾರ್ ಪ್ರತಿಮೆ ಭಗ್ನ

|
Google Oneindia Kannada News

Recommended Video

ರಜಿನಿಕಾಂತ್ ವಿರುದ್ಧ ಚೆನ್ನೈನಲ್ಲಿ ಪ್ರತಿಭಟನೆ | Oneindia Kannada

ಚೆನ್ನೈ, ಜನವರಿ 24: ಸೂಪರ್‌ ಸ್ಟಾರ್ ರಜಿನಿಕಾಂತ್, ಪೆರಿಯಾರ್ ಕುರಿತು ಹೇಳಿಕೆ ನೀಡಿದ ಬೆನ್ನಲ್ಲೇ ಪೆರಿಯಾರ್ ಪ್ರತಿಮೆಯನ್ನು ಭಗ್ನಗೊಳಿಸಿರುವ ಘಟನೆ ನಡೆದಿದೆ.

ತಮಿಳುನಾಡಿನ ಚೆಂಗಲ್ಪಟ್ಟುವಿನಲ್ಲಿ ಸಮಾಜಿಕ ಪರಿವರ್ತಕ ಪೆರಿಯಾರ್ ಅವರ ಪ್ರತಿಮೆಯನ್ನು ಭಗ್ನಗೊಳಿಸಲಾಗಿದ್ದು, ಕೈ ಹಾಗು, ತಲೆಯ ಭಾಗವನ್ನು ಊನ ಮಾಡಲಾಗಿದೆ.

ಪೆರಿಯಾರ್ ಕುರಿತ ಹೇಳಿಕೆಗೆ ಕ್ಷಮೆಯಾಚಿಸಲ್ಲ: ರಜನಿಕಾಂತ್ಪೆರಿಯಾರ್ ಕುರಿತ ಹೇಳಿಕೆಗೆ ಕ್ಷಮೆಯಾಚಿಸಲ್ಲ: ರಜನಿಕಾಂತ್

ಕೆಲವು ದಿನಗಳ ಹಿಂದಷ್ಟೆ ರಜನೀಕಾಂತ್ ಅವರು 'ತುಘ್ಲಕ್' ಮಾಸಿಕದ ಐವತ್ತನೇ ವಾರ್ಷಿಕೋತ್ಸವದಲ್ಲಿ ಮಾತನಾಡಿ, '1971 ರಲ್ಲಿ ಪೆರಿಯಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಶ್ರೀ ರಾಮ, ಸೀತೆಯ ಬೆತ್ತಲೇ ಚಿತ್ರಗಳನ್ನು ಪ್ರದರ್ಶಿಸಲಾಗಿತ್ತು, ಅವಕ್ಕೆ ಚಪ್ಪಲಿ ಹಾರ ಹಾಕಲಾಗಿತ್ತು, ಆದರೆ ಅದನ್ನು ಯಾವ ಪತ್ರಿಕೆಗಳೂ ವರದಿ ಮಾಡಲಿಲ್ಲ' ಎಂದಿದ್ದರು.

Rajinikanth Statement Effect Periyar Statue Vandalized

ರಜನಿಕಾಂತ್ ಅವರ ಈ ಹೇಳಿಕೆ ತಮಿಳುನಾಡಿನಲ್ಲಿ ಭಾರಿ ವಿವಾದ ಎಬ್ಬಿಸಿದೆ. ರಜನಿಕಾಂತ್ ಅವರು ಕ್ಷಮೆ ಕೇಳಬೇಕು ಎಂದು ಹಲವರು ಒತ್ತಾಯಿಸಿದ್ದಾರೆ. ಆದರೆ ತಮ್ಮ ಹೇಳಿಕೆಗೆ ಬದ್ಧ ಎಂದು ರಜನಿ ಈಗಾಗಲೇ ಹೇಳಿದ್ದಾರೆ.

ರಜನಿ ಹೇಳಿಕೆಗೆ ಬೆಂಬಲವನ್ನೂ ಹಲವರು ನೀಡಿದ್ದಾರೆ. ದ್ರಾವಿಡ ಸಂಘಟನೆಗಳು ರಜನಿ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕ್ಷಮೆ ಯಾಚನೆಗೆ ಒತ್ತಾಯಿಸಿವೆ. ಡಿಎಂಕೆ ಪ್ರತಿಭಟನೆಯನ್ನೇ ಆರಂಭಿಸಿದೆ.

ರಜನಿ ಹೇಳಿಕೆ ನಂತರ ತಮಿಳುನಾಡಿನಲ್ಲಿ ಪೆರಿಯಾರ್ ಕುರಿತು ಎರಡು ಬಣಗಳಾದಂತಾಗಿದ್ದು, ಇದೀಗ ಪೆರಿಯಾರ್ ಪ್ರತಿಮೆಯನ್ನೇ ಭಗ್ನಗೊಳಿಸಲಾಗಿದೆ.

English summary
Social reformer Periyar statue vandalized in Tamil Nadu after Rajanikanth statement about Periyar create controversy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X