ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಜನಿಕಾಂತ್ ಪಕ್ಷದ ಚಿಹ್ನೆ, ಹೆಸರು ಇದೇ ಇರಬಹುದೇ?

|
Google Oneindia Kannada News

ಚೆನ್ನೈ, ಡಿ.15: ಸಕ್ರಿಯ ರಾಜಕೀಯ ಪ್ರವೇಶದ ಬಗ್ಗೆ ಘೋಷಣೆ ಮಾಡಿರುವ ಸೂಪರ್ ಸ್ಟಾರ್ ರಜನಿಕಾಂತ್ ಅವರು ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಈ ನಡುವೆ ರಜನಿ ಅವರ ಪಕ್ಷದ ಹೆಸರು ಹಾಗೂ ಚಿಹ್ನೆ ಬಗ್ಗೆ ಕುತೂಹಲ ಮೂಡಿದೆ. ಈ ಬಗ್ಗೆ ಸದ್ಯಕ್ಕೆ ಲಭ್ಯವಾದ ಮಾಹಿತಿ ಹೆಕ್ಕಿ ಇಲ್ಲಿ ನೀಡಲಾಗಿದೆ

ಜನವರಿ 21,2021ರಂದು ಹೊಸ ರಾಜಕೀಯ ಬದುಕು ಆರಂಭ, ಡಿಸೆಂಬರ್ 31ರಂದು ಹೊಸ ಪಕ್ಷದ ಬಗ್ಗೆ ಘೋಷಣೆ ಮಾಡುವುದಾಗಿ ರಜನಿಕಾಂತ್ ಘೋಷಿಸಿದ್ದಾರೆ.ರಜನಿ ಅವರ ರಾಜಕೀಯ ಪ್ರವೇಶದೊಂದಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಟಾರ್ ನಟ ಕಮಲ್ ಹಾಸನ್ ಅವರ ನಂತರ ಮತ್ತೊಬ್ಬ ಸ್ಟಾರ್ ಎಂಟ್ರಿ ಅಧಿಕೃತವಾಗಿದೆ.

ತಮಿಳುನಾಡಿನ ಜನರಿಗಾಗಿ ಜೀವ ಕೊಡಲೂ ಸಿದ್ಧ: ರಜನಿಕಾಂತ್ತಮಿಳುನಾಡಿನ ಜನರಿಗಾಗಿ ಜೀವ ಕೊಡಲೂ ಸಿದ್ಧ: ರಜನಿಕಾಂತ್

ಜನವರಿ 21,2021ರಂದು ಹೊಸ ರಾಜಕೀಯ ಬದುಕು ಆರಂಭ, ಡಿಸೆಂಬರ್ 31ರಂದು ಹೊಸ ಪಕ್ಷದ ಬಗ್ಗೆ ಘೋಷಣೆ ಮಾಡುವುದಾಗಿ ರಜನಿಕಾಂತ್ ಘೋಷಿಸಿದ್ದಾರೆ.ರಜನಿ ಅವರ ರಾಜಕೀಯ ಪ್ರವೇಶದೊಂದಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಟಾರ್ ನಟ ಕಮಲ್ ಹಾಸನ್ ಅವರ ನಂತರ ಮತ್ತೊಬ್ಬ ಸ್ಟಾರ್ ಎಂಟ್ರಿ ಅಧಿಕೃತವಾಗಲಿದೆ.

ಪಕ್ಷದ ಉಸ್ತುವಾರಿಗಳ ನೇಮಕ ಪೂರ್ಣ

ಪಕ್ಷದ ಉಸ್ತುವಾರಿಗಳ ನೇಮಕ ಪೂರ್ಣ

ರಜನಿಕಾಂತ್ ಅವರು ರಜನಿ ಮಕ್ಕಳ್ ಮಂಡ್ರಮ್ ಸಂಘಟನೆಯ ಮುಖ್ಯ ಸಂಯೋಜಕರನ್ನಾಗಿ ಬಿಜೆಪಿ ರಾಜ್ಯ ಬೌದ್ಧಿಕ ಘಟಕದ ಅಧ್ಯಕ್ಷರಾಗಿದ್ದ ರಾ. ಅರ್ಜುನ್ ಮೂರ್ತಿ ಅವರನ್ನು ನೇಮಿಸಿದ್ದಾರೆ. ತಮ್ಮ ರಾಜಕೀಯ ಪಕ್ಷದ ಸ್ಥಾಪನೆಯ ಪ್ರಯತ್ನಗಳನ್ನು ತಮಿಳರುವಿ ಮಣಿಯನ್ ಅವರು ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ರಜನಿ ತಿಳಿಸಿದ್ದಾರೆ. ಹೊಸ ಪಕ್ಷದ ಚಿಹ್ನೆ ಹಾಗೂ ಹೆಸರು ಡಿಸೆಂಬರ್ ಅಂತ್ಯಕ್ಕೆ ಘೋಷಣೆಯಾಗುವ ಸಾಧ್ಯತೆಯಿದೆ

ತಮಿಳುನಾಡಿನಲ್ಲಿ ಬದಲಾವಣೆ ತರುವ ಕನಸು

ತಮಿಳುನಾಡಿನಲ್ಲಿ ಬದಲಾವಣೆ ತರುವ ಕನಸು

'ತಮಿಳುನಾಡಿನಲ್ಲಿ ಬದಲಾವಣೆ ತರುವ ಸಲುವಾಗಿ ನಾನು ರಾಜಕೀಯಕ್ಕೆ ಬರಲು ನಿರ್ಧರಿಸಿದ್ದೇನೆ. ಈ ಯೋಜನೆಯಲ್ಲಿ ನಾನು ಸಣ್ಣ ಸಾಧನವಷ್ಟೇ. ನಾನು ಯಶಸ್ವಿಯಾದರೆ ಅದು ಜನರ ಯಶಸ್ಸಾಗಲಿದೆ. ನನ್ನ ಪ್ರಯತ್ನದಲ್ಲಿ ನಾನು ಸೋಲು ಕಂಡರೆ ಅದು ನಿಮ್ಮ ಸೋಲಾಗಲಿದೆ. ಈ ಪರಿವರ್ತನೆಯ ಪ್ರಯತ್ನದಲ್ಲಿ ನೀವು ನನ್ನ ಜತೆ ನಿಲ್ಲುವಂತೆ ಮನವಿ ಮಾಡುತ್ತೇನೆ. ಎಲ್ಲವನ್ನೂ ಪರಿವರ್ತನೆ ಮಾಡೋಣ. ಅದು ಈಗ ಸಾಧ್ಯವಾಗದಿದ್ದರೆ, ಎಂದಿಗೂ ಸಾಧ್ಯವಾಗಲಾರದು' ಎಂದು ರಜನಿ ಹೇಳಿದ್ದಾರೆ.

ಈಗಾಗಲೇ ಬಳಕೆಯಲ್ಲಿರುವ ಚಿಹ್ನೆ ಉಪಯೋಗಕ್ಕೆ

ಈಗಾಗಲೇ ಬಳಕೆಯಲ್ಲಿರುವ ಚಿಹ್ನೆ ಉಪಯೋಗಕ್ಕೆ

ಈಗಾಗಲೇ ಚಾಲ್ತಿಯಲ್ಲಿರುವ ಆಯೋಗದಿಂದ ಮಾನ್ಯತೆ ಪಡೆದ ಪಕ್ಷದ ಚಿಹ್ನೆಯನ್ನೇ ರಜನಿಕಾಂತ್ ಅವರ ಹೊಸ ಪಕ್ಷ ಬಳಕೆ ಮಾಡುವ ಸಾಧ್ಯತೆಯಿದೆ. ಹೊಸ ಚಿಹ್ನೆಗಾಗಿ ಅರ್ಜಿ ಸಲ್ಲಿಸಿ, ಅನುಮತಿ ಪಡೆಯಲು ಕಾಲಾವಕಾಶ ಕಡಿಮೆಯಿದೆ. ಮಕ್ಕಳ್ ಸೇವೈ ಕಚ್ಚಿ(ಮಕ್ಕಳ ಸೇವೆ ಪಕ್ಷ) ಮೂಲಕ ಚುನಾವಣಾ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಈ ಪಕ್ಷದ ಹೆಸರು ನೋಂದಣಿಯಾಗಿದೆ. ಹೀಗಾಗಿ ತಕ್ಷಣಕ್ಕೆ ಪಕ್ಷದ ಚಟುವಟಿಕೆ ಆರಂಭಿಸಲು ಅನುಕೂಲ ಎಂಬ ಚರ್ಚೆ ನಡೆದಿದೆ.

ಆಟೋರಿಕ್ಷಾ ಪಕ್ಷದ ಚಿಹ್ನೆಯೇ?

ಆಟೋರಿಕ್ಷಾ ಪಕ್ಷದ ಚಿಹ್ನೆಯೇ?

ಅಣ್ಣೈತಿಂಥಿಯಾ ಮಕ್ಕಳ್ ಶಕ್ತಿ ಕಳಗಂ ಹೆಸರಿನಲ್ಲಿ ನೋಂದಣಿಯಾಗಿದ್ದ ಪಕ್ಷ ನಂತರ ಮಕ್ಕಳ್ ಸೇವೈ ಕಚ್ಚಿ ಎಂದು ಬದಲಾಗಿದೆ. ಸುಮಾರು ಎರಡೂವರೆ ತಿಂಗಳ ಹಿಂದೆ ಪಕ್ಷದ ಸ್ವರೂಪ ತಿದ್ದುಪಡಿ ಬಗ್ಗೆ ಆಯೋಗದ ಅನುಮತಿ ಪಡೆದುಕೊಳ್ಳಲಾಗಿದೆ. ಬಹುತೇಕ ಆಟೋರಿಕ್ಷಾ ಪಕ್ಷದ ಚಿಹ್ನೆಯಾಗಿ ಬಳಕೆಯಾಗುವುದು ನಿಚ್ಚಳವಾಗಿದೆ. ರಜನಿಕಾಂತ್ ಹಾಗೂ ಇನ್ನಿತರ ಹೆಸರುಗಳನ್ನು ಸೇರ್ಪಡೆಗೊಳಿಸಲು ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಇದಲ್ಲದೆ, ಬಾಬಾ ಚಿತ್ರದ ಎರಡು ಬೆರಳೆತ್ತಿರುವ ಧ್ಯಾನ ಮುದ್ರೆಯನ್ನು ಚಿಹ್ನೆಯಾಗಿ ಬಳಸಲು ಕೂಡಾ ಕೋರಲಾಗಿದೆ ಎಂಬ ಸುದ್ದಿಯಿದೆ. ಇನ್ನೊಂದೆಡೆ ಆಟೋರಿಕ್ಷಾ ಚಿಹ್ನೆ ಬಳಕೆಗೂ ಮನವಿ ಬಂದಿದೆ. ಬಾಷಾ ಚಿತ್ರದ ಆಟೋರಿಕ್ಷಾ ಚಾಲಕನ ಪಾತ್ರ ಅತ್ಯಂತ ಜನಪ್ರಿಯವಾಗಿದ್ದನ್ನು ಇಲ್ಲಿಸ್ಮರಿಸಬಹುದು.

English summary
There is a likelihood that super star Rajinikanth may use an already used, but an unrecognised party as his political launch vehicle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X