ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಿತಾಭ್‌ ಬಚ್ಚನ್ ಸಲಹೆ ಧಿಕ್ಕರಿಸಿದ ರಜನೀಕಾಂತ್

|
Google Oneindia Kannada News

ಚೆನ್ನೈ, ಡಿಸೆಂಬರ್ 17: ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ ಸಲಹೆಯನ್ನು ಧಿಕ್ಕರಿಸಿ ರಾಜಕೀಯ ಪ್ರವೇಶಿಸಿರುವುದನ್ನು ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಹೊರಹಾಕಿದ್ದಾರೆ.

ರಾಜಕೀಯ ಸೇರ್ಪಡೆ ಬೇಡ ಎನ್ನುವ ಬಿಗ್‌ಬಿಯ ಸ್ಪಷ್ಟ ನಿಲುವಿನ ಹೊರತಾಗಿಯೂ ಅನಿವಾರ್ಯ ಕಾರಣಗಳಿಂದ ರಾಜಕೀಯಕ್ಕೆ ಪ್ರವೇಶಿಸಿದೆ ಎಂದು ರಜನೀಕಾಂತ್ ತಿಳಿಸಿದ್ದಾರೆ.

2021ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ರಜನೀಕಾಂತ್ ಪಕ್ಷವು ಚುನಾವಣೆಗೆ ದುಮುಕಲಿದೆ. ಈ ಹಂತದಲ್ಲಿ ತಮ್ಮ ಭವಿಷ್ಯದ ರಾಜಕೀಯ ನಡೆ ಬಗ್ಗೆ ಮಾತನಾಡಿದ ರಜನೀಕಾಂತ್ ನಾನು ಅಮಿತಾಭ್ ಬಚ್ಚನ್‌ನಿಂದ ಪ್ರೇರಣೆಯಾಗಿದ್ದೇನೆ ಇದು ಸ್ಕ್ರೀನ್ ಮೇಲೆ ಹಾಗೂ ಸ್ಕ್ರೀನ್ ಹೊರತಾಗಿಯೂ ಹೌದು.

rajinikanth

ಯಶಸ್ವಿ ಜೀವನಕ್ಕಾಗಿ ಮೂರು ಸೂತ್ರಗಳನ್ನು ಪಾಲಿಸುವಂತೆ ಅಮಿತಾಭ್ ಹೇಳಿದ್ದರು.ಮೊದಲನೆಯದಾಗಿ ವ್ಯಾಯಾಮ, ಎರಡನೆಯದಾಗಿ ಸದಾ ಕೆಲಸದಲ್ಲಿ ತೊಡಗಿರುವುದು, ಮೂರನೆಯದಾಗಿ ಯಾವುದೇ ಕಾರಣಕ್ಕೂ ರಾಜಕೀಯವನ್ನು ಪ್ರವೇಶಿಸಕೂಡದು ಎಂದು ಹೇಳಿದ್ದರು.

ಆದರೆ ಕೆಲ ರಾಜಕೀಯ ಸನ್ನಿವೇಶಗಳು ಸೃಷ್ಟಿಯಾದ ಹಿನ್ನೆಲೆಯಲ್ಲಿ ಸದ್ಯ ದರ್ಬಾರ್ ಚಿತ್ರ ಮಾಡುತ್ತಿರುವ ರಜನೀಕಾಂತ್ ರ ವಿಧಾನಸಭಾ ಚುನಾವಣೆಯೊಳಗೆ ಅವರ ಪಕ್ಷ ಚುನಾವಣೆಗೆ ನಿಂತು ಜನರ ವಿಶ್ವಾಸ ಗಳಿಸುವ ಭರವಸೆ ಹೊಂದಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಹಾಗೂ ಉಪ ಚುನಾವಣೆಯಲ್ಲಿ ರಜನೀಕಾಂತ್ ಪಕ್ಷ ಸ್ಪರ್ಧಿಸಿರಲಿಲ್ಲ. ಈ ಚುನಾವಣೆಗೂ ಮುನ್ನವೇ ಪಕ್ಷವನ್ನು ಘೋಷಿಸಿದ್ದರು.

ಹೀಗಾಗಿ ರಜನೀಕಾಂತ್ ರಾಜಕೀಯ ಪ್ರವೇಶವೇ ದೊಡ್ಡ ನಗೆಪಾಟಲಾಗಿತ್ತು. ಅನಾವಶ್ಯಕವಾಗಿ ರಾಜಕೀಯ ಪ್ರವೇಶಿಸಿದ್ದಾರೆ. ಚುನಾವಣಾ ರಾಜಕೀಯಕ್ಕೆ ದೊಡ್ಡ ಹಾಸ್ಯ ಎಂದು ಜನರ ನಗೆಯಾಡಿದ್ದರು.

ಹೀಗಾಗಿ ರಜನೀಕಾಂತ್ ರಾಜಕೀಯ ಪಕ್ಷದ ಬಗ್ಗೆ ಕುತೂಹಲವಿದ್ದರೂ ಇದು ಕಾರ್ಯಗತವಾಗದ ರಾಜಕೀಯ ಯೋಜನೆ ಎಂದು ತಮಿಳುನಾಡಿನ ಜನತೆ ಮಾತನಾಡಿಕೊಂಡಿದ್ದರು. ಅತ್ತ ಕಮಲ್‌ಹಾಸನ್ ಪಕ್ಷ ಘೋಷಿಸಿ ನೀರಸ ಪ್ರದರ್ಶನ ತೋರುತ್ತಿರುವ ಬೆನ್ನಲ್ಲೇ ರಜನೀಕಾಂತ್ ಈಗ ತಮ್ಮ ನಿಲುವನ್ನು ಮತ್ತೆ ಸ್ಪಷ್ಟಪಡಿಸಿದ್ದಾರೆ.

English summary
Superstar Rajinikanth on Monday revealed that Amitabh Bachchan had asked him not to enter politics but he could not follow the advice due to certain circumstances.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X