ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಜನಿಕಾಂತ್ ವೆಬ್ ಸೈಟ್, ಆಂಡ್ರಾಯ್ಡ್ ಆಪ್ ಲೋಕಾರ್ಪಣೆ

By Mahesh
|
Google Oneindia Kannada News

ಚೆನ್ನೈ, ಜನವರಿ 01: ತಮ್ಮ ರಾಜಕೀಯ ಪ್ರವೇಶವನ್ನು ಖಚಿತಪಡಿಸಿದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಈಗ ವೆಬ್ ಸೈಟ್ ಹಾಗೂ ಆಂಡ್ರಾಯ್ಡ್ ಆಪ್ ಗಳನ್ನು ಲೋಕರ್ಪಣೆ ಮಾಡಿದ್ದು, ಈ ಮೂಲಕ ಅಭಿಮಾನಿಗಳು ತಮ್ಮನ್ನು ಹಿಂಬಾಲಿಸಬಹುದು ಹಾಗೂ ಪಕ್ಷದ ಚಟುವಟಿಕೆಗಳ ಬಗ್ಗೆ ತಿಳಿಯಬಹುದು ಎಂದು ರಜನಿ ಹೇಳಿದ್ದಾರೆ.

ಬಾಬಾಜಿ ಹಾಗೂ ಗುರುರಾಯರ ಕೃಪೆಯಿಂದ ರಜನಿ ರಾಜಕೀಯ ಎಂಟ್ರಿಬಾಬಾಜಿ ಹಾಗೂ ಗುರುರಾಯರ ಕೃಪೆಯಿಂದ ರಜನಿ ರಾಜಕೀಯ ಎಂಟ್ರಿ

ರಜನಿಮಂದ್ರಂ.ಆರ್ಗ್ ಹೆಸರಿನ ವೆಬ್ ಸೈಟ್ ಪೂರ್ಣವಾಗಿ ತಮಿಳು ಭಾಷೆಯಲ್ಲಿದೆ. ವೆಬ್ ಸೈಟ್ ನ ಬಲಭಾಗದಲ್ಲಿ ಸದಸ್ಯತ್ವ ನೋಂದಣಿ ಅರ್ಜಿಯಿದೆ.

Rajinikanth launches Website Android App and Urge Fans to Come Together

ಅಖಿಲ ಭಾರತ ರಜನಿಕಾಂತ್ ಅಭಿಮಾನಿಗಳ ಅಸೋಸಿಯೇಷನ್ ವತಿಯಿಂದ ಈ ವೆಬ್ ಸೈಟ್ ನಿರ್ವಹಿಸಲಾಗುತ್ತದೆ. ಇದೇ ಹೆಸರಿನಲ್ಲಿ ಗೂಗಲ್ ಪ್ಲೇ ಸ್ಟೋರಿನಲ್ಲೂ ಅಪ್ಲಿಕೇಷನ್ ಲಭ್ಯವಿದೆ.

ರಾಜಕೀಯಕ್ಕೆ ರಜನಿಕಾಂತ್ : ಕರ್ನಾಟಕದ ನಾಯಕರು ಏನು ಹೇಳಿದರು?ರಾಜಕೀಯಕ್ಕೆ ರಜನಿಕಾಂತ್ : ಕರ್ನಾಟಕದ ನಾಯಕರು ಏನು ಹೇಳಿದರು?

ಕಳೆದ ಮೇ ತಿಂಗಳಿನಲ್ಲಿ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದ ರಜನಿಕಾಂತ್ ಅವರು ನಂತರ ಈ ಬಗ್ಗೆ ಮೌನ ವಹಿಸಿದ್ದರು.

ರಜನಿ ರಾಜಕೀಯ ಭವಿಷ್ಯ; ಚಾಣಕ್ಯರಾಗಬೇಕು ಚಂದ್ರಗುಪ್ತರಲ್ಲರಜನಿ ರಾಜಕೀಯ ಭವಿಷ್ಯ; ಚಾಣಕ್ಯರಾಗಬೇಕು ಚಂದ್ರಗುಪ್ತರಲ್ಲ

ತಮ್ಮ ಡಿಸೆಂಬರ್ 07ರಂದು ಹುಟ್ಟುಹಬ್ಬದ ದಿನದಂದು ಏನಾದರೂ ಶುಭ ಸುದ್ದಿ ಘೋಷಿಸುವರೇ ಎಂದು ಅಭಿಮಾನಿಗಳು ಎಂದಿನಂತೆ ಕಾದಿದ್ದರು. ಆದರೆ, ಹುಟ್ಟುಹಬ್ಬ ಆಚರಣೆಯಿಂದ ರಜನಿ ದೂರ ಉಳಿದಿದ್ದರು.

ಆದರೆ, ಚೆನ್ನೈನ ರಾಘವೇಂದ್ರ ಹಾಲ್ ನಲ್ಲಿ ಅಭಿಮಾನಿಗಳ ಜತೆಗಿನ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾನುವಾರ(ಡಿಸೆಂಬರ್ 31)ದಂದು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಘೋಷಣೆ ಮಾಡಿದ್ದಾರೆ.

English summary
Rajinikanth ahs asked the fans to get themselves registered on his new website rajinimandram. He thanked his fans for accepting 'my political entry'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X