ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಬಾಲಿಗೆ ಪೈರಸಿ ಭೀತಿ, ಹೈಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ

By Mahesh
|
Google Oneindia Kannada News

ಚೆನ್ನೈ, ಜುಲೈ 14: 'ಉಡ್ತಾ ಪಂಜಾಬ್', 'ಗ್ರೇಟ್ ಗ್ರ್ಯಾಂಡ್ ಮಸ್ತಿ' ಹಾಗೂ 'ಸುಲ್ತಾನ್' ಚಿತ್ರಗಳು ಬಿಡುಗಡೆಗೆ ಮುನ್ನ ಆನ್ ಲೈನ್ ನಲ್ಲಿ ಸೋರಿಕೆಯಾಗಿದ್ದು ತಿಳಿದಿರಬಹುದು. ಈಗ ರಜನಿಕಾಂತ್ ಅವರ ಕಬಾಲಿ ಚಿತ್ರಕ್ಕೂ ಪೈರಸಿ ಭೀತಿ ಕಾಡುತ್ತಿದೆ. ಈ ನಿಟ್ಟಿನಲ್ಲಿ ಸುರಕ್ಷತೆ ಕೋರಿ ಚಿತ್ರದ ನಿರ್ಮಾಪಕರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕಬಾಲಿ ಕೂಡಾ ಆನ್ ​ಲೈನ್​ನಲ್ಲಿ ಲೀಕ್ ಆಗಿದೆ ಎಂಬ ಸುದ್ದಿ ಹಬ್ಬಿದೆ. ಸುಮಾರು 180 ವೆಬ್ ಸೈಟ್ ಗಳಲ್ಲಿ ಪೈರಸಿ ಲಿಂಕ್ ಕಂಡು ಬಂದಿದ್ದು, ಇಲ್ಲಿಂದ ಲೆಕ್ಕಕ್ಕೆ ಸಿಗದಷ್ಟು ಡೌನ್ ಲೋಡ್ ಲಿಂಕ್ ಗಳು ಉತ್ಪತ್ತಿಯಾಗುವ ಭೀತಿ ಇದೆ. ಹೀಗಾಗಿ ಕೂಡಲೇ ಈ ವೆಬ್ ಸೈಟ್ ಹಾಗೂ ಲಿಂಕ್ ಗಳನ್ನು ಕಿತ್ತು ಹಾಕಲು ಕ್ರಮ ಜರುಗಿಸುವಂತೆ ಕೋರಿ ಚೆನ್ನೈ ಹೈಕೋರ್ಟ್ ಗೆ ನಿರ್ಮಾಪಕ ಎಸ್ ಧನು ಅರ್ಜಿ ಸಲ್ಲಿಸಿದ್ದಾರೆ. [ಉಡ್ತಾ ಪಂಜಾಬ್ 700ಪ್ಲಸ್ ವೆಬ್ ಸೈಟ್ ಗಳಲ್ಲಿ ರನ್ನಿಂಗ್]

Rajinikanth’s Kabali Fear Piracy, Producer Thanu moves to HC,

ಜುಲೈ 22ರಂದು ದೇಶ-ವಿದೇಶದಲ್ಲಿ ಏಕಕಾಲದಲ್ಲಿ ತೆರೆಕಾಣಲು ಸಿದ್ಧವಾಗಿದೆ. ಯುಎಸ್ ನಲ್ಲಿ 400 ಸ್ಕ್ರೀನ್ ಗಳಲ್ಲಿ ತೆರೆ ಕಾಣಲಿದ್ದು 25 ಡಾಲರ್ ಬೆಲೆ ನಿಗದಿ ಮಾಡಲಾಗಿದೆ. ಇದಕ್ಕೂ ಮುನ್ನ ಚಿತ್ರ ಡೌನ್ ಲೋಡ್ ಆಗಲು ಆರಂಭವಾದರೆ ಭಾರಿ ನಷ್ಟವಾಗುತ್ತದೆ ಎಂದು ನಿರ್ಮಾಪಕರು ಹೇಳಿದ್ದಾರೆ.[ರಜನಿಗೆ SMS ಕಳುಹಿಸಲು ಏರ್ ಟೆಲ್ ನಿಂದ ವಿಶೇಷ ಕೂಪನ್]

ಈ ಬಗ್ಗೆ ಕ್ರಮ ಜರುಗಿಸುವಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಗೆ ಸೂಚನೆ ನೀಡಬೇಕು ಎಂದೂ ಥನು ಮನವಿ ಮಾಡಿಕೊಂಡಿದ್ದಾರೆ.[ಅಂದಿನ ಬಸ್ ಕಂಡಕ್ಟರ್ ಇಂದು ವಿಮಾನದ ಮೇಲೆ ಜಾಹೀರಾತಾದ್ರು]

ಸುಮಾರು 200 ಕೋಟಿ ರು ವೆಚ್ಚದಲ್ಲಿ ನಿರ್ಮಿಸಲಾಗಿರುವ ಬಹುಭಾಷಾ ಚಿತ್ರ ಏನಾದರೂ ಆನ್ ಲೈನ್ ನಲ್ಲಿ ಸೋರಿಕೆಯಾದರೆ ಒಟ್ಟು ಆದಾಯದ ಶೇ 70ರಷ್ಟು ನಷ್ಟವಾಗಲಿದೆ ಎಂದಿದ್ದಾರೆ.['ಕಬಾಲಿ' ಸೆನ್ಸಾರ್ ಆಯ್ತು: ರಿಲೀಸ್ ಡೇಟ್ ಕೂಡ ಫಿಕ್ಸ್ ಆಯ್ತು.!]

ರಜನಿಕಾಂತ್ ಅಲ್ಲದೆ ರಾಧಿಕಾ ಆಪ್ಟೆ, ಕಿಶೋರ್, ಕಲೈರಾಸನ್, ದಿನೇಶ್, ಧನ್ಸಿಕಾ, ತೈವಾನಿನ ನಟ ವಿನ್ಸ್ಟನ್ ಚೋ ಚಿತ್ರದಲ್ಲಿದ್ದಾರೆ.

English summary
Kabali producer S Thanu has filed a petition in the Madras high court to stop illegal download of the film by about 180 named websites and countless unknown sites, according to a Times of India report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X