ನಟ ರಜನಿಕಾಂತ್-ಫ್ಯಾನ್ಸ್ ಮೆಗಾ ಮೀಟಿಂಗ್ ರದ್ದು
ಸೂಪರ್ ಸ್ಟಾರ್ ರಜನಿಕಾಂತ್ ಅವರು ಅಭಿಮಾನಿಗಳನ್ನು ಏಪ್ರಿಲ್ 12 ರಿಂದ 16 ರವೆಗೆ ಭೇಟಿ ಮಾಡುವ ಕಾರ್ಯಕ್ರಮ ರದ್ದಾಗಿದೆ.
ಚೆನ್ನೈ, ಏಪ್ರಿಲ್ 09: ಸೂಪರ್ ಸ್ಟಾರ್ ರಜನಿಕಾಂತ್ ಅವರು ಅಭಿಮಾನಿಗಳನ್ನು ಏಪ್ರಿಲ್ 12 ರಿಂದ 16 ರವೆಗೆ ಭೇಟಿ ಮಾಡುವ ಕಾರ್ಯಕ್ರಮ ರದ್ದಾಗಿದೆ. ರಜನಿ ಅವರ ರಾಜಕೀಯ ಭವಿಷ್ಯದ ಬಗ್ಗೆ ಅಭಿಮಾನಿಗಳ ಸಂಘಟನೆಗಳು ಚರ್ಚಿಸಿದ್ದು, ರಜನಿ ಮೇಲೆ ಒತ್ತಡ ಹೇರಲು ಮುಂದಾಗಿದ್ದರು. ಆದರೆ, ಈ ಮೆಗಾ ಮೀಟಿಂಗ್ ಸದ್ಯಕ್ಕೆ ನಡೆಯುತ್ತಿಲ್ಲ.
ಏಪ್ರಿಲ್
ಮೊದಲ
ವಾರ
ನಡೆದ
ಸಭೆಯಲ್ಲಿ
ರಜನಿಕಾಂತ್
ಅವರ
ರಾಜಕೀಯ
ಪ್ರವೇಶ
ಕುರಿತಾಗಿ
ಚರ್ಚಿಸಲಾಗಿತ್ತು.
ಆದರೆ,
ರಾಜಕೀಯ
ಪ್ರವೇಶದ
ಬಗ್ಗೆ
ಮತ್ತೊಮ್ಮೆ
ರಜನಿಕಾಂತ್
ಅವರು
ನಕಾರಾತ್ಮಕ
ಧೋರಣೆ
ಮುಂದುವರೆಸಿದ್ದರು.
ಈ
ನಡುವೆ
ಅಭಿಮಾನಿಗಳ
ಜತೆ
ಭೇಟಿ
ರದ್ದಾಗಲು
ಫ್ಯಾನ್ಸ್
ಸಂಖ್ಯೆ
ಹೆಚ್ಚಳವಾಗಿದ್ದು
ಕಾರಣ
ಎನ್ನಲಾಗಿದೆ.
ರಜನಿ ಅವರು ಅಭಿಮಾನಿಗಳ ಜತೆ ಫೋಟೋ ತೆಗೆಸಿಕೊಳ್ಳುವ ಪ್ರಕ್ರಿಯೆ ಆಗಾಗ ನಡೆಯುತ್ತದೆ. ಆದರೆ, ಈ ಬಾರಿ ಅಭಿಮಾನಿಗಳ ಸಂಖ್ಯೆ ಅಧಿಕವಾಗಿದ್ದು, ಒಂದೇ ಕಾರ್ಯಕ್ರಮದಲ್ಲಿ ಎಲ್ಲರನ್ನು ಕಾಣಲು ಕಷ್ಟವಾಗಿದ್ದು, ಪ್ರತಿ ಜಿಲ್ಲೆಯಲ್ಲಿಯೂ ಕಾರ್ಯಕ್ರಮ ಮಾಡಿ ಅಭಿಮಾನಿಗಳ ಬೇಡಿಕೆ ಈಡೇರಿಸುವುದಾಗಿ ರಜನಿಕಾಂತ್ ಭರವಸೆ ನೀಡಿದ್ದಾರೆ.