ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈನಲ್ಲಿ ಇನ್ನೂ ಒಂದು ದಿನ ಮಳೆ, ಬಳಿಕ ಮತ್ತೆ ಒಣಹವೆ ಮುಂದುವರಿಕೆ

|
Google Oneindia Kannada News

ಚೆನ್ನೈ, ಜೂನ್ 21: ಚೆನ್ನೈನಲ್ಲಿ ಏಕಾಏಕಿ ಬಂದ ಮಳೆಯಿಂದ ಜನತೆ ಸಂಭ್ರಮಿಸಿದ್ದಾರೆ. ಆದರೆ ಇನ್ನು ಒಂದು ದಿನ ಮಳೆ ಸುರಿಯಲಿದ್ದು ಬಳಿಕ ಒಣಹವೆ ಮುಂದುವರೆಯಲಿದೆ ಎಂದು ಸ್ಕೈಮೆಟ್ ವೆದರ್ ವರದಿ ಮಾಡಿದೆ.

ಜಲಕ್ಷಾಮದಿಂದ ಬಳಲುತ್ತಿದ್ದ ಸಮುದ್ರನಗರಿ ಚೆನ್ನೈ ಜನತೆಗೆ ಮಳೆಯಿಂದಾಗಿ ಕೊಂಚ ನೆಮ್ಮದಿ ಬಂದಿದೆ. ಚೆನ್ನೈನ ಮೀನಾಂಬಕಂನಲ್ಲಿ 29 ಮಿ.ಮೀ ಮಳೆ ದಾಖಲಾಗಿದೆ.

12 ವರ್ಷಗಳಲ್ಲೇ ಈ ಬಾರಿ ನಿಧಾನಗತಿಯ ಮುಂಗಾರು 12 ವರ್ಷಗಳಲ್ಲೇ ಈ ಬಾರಿ ನಿಧಾನಗತಿಯ ಮುಂಗಾರು

ಬಂಗಾಳಕೊಲ್ಲಿಯಲ್ಲಿ ದೇಶದಲ್ಲಿ ಮುಂಗಾರು ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಕೆಲವೇ ಕೆಲವು ಕಡೆಗಳಲ್ಲಿ ಮಾತ್ರ ಮಳೆಯಾಗಿದೆ.

Rain will continue in chennai for a day

ಜೂನ್ 29ರ ಹೊತ್ತಿಗೆ ಇಡೀ ದೇಶವನ್ನೇ ಮುಂಗಾರು ಆಕ್ರಮಿಸಿಕೊಳ್ಳಲಿದೆ. ಜೂನ್ 22ರಂದು ಕೂಡ ಚೆನ್ನೈನಲ್ಲಿ ಮಳೆ ಮುಂದುವರೆಯಲಿದೆ. ಚೆನ್ನೈನಲ್ಲಿ 40 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಉಷ್ಣಾಂಶ ದಾಖಲಾಗಿದೆ.

ರಾಜ್ಯದಲ್ಲಿ ಮಳೆ ಕೊರತೆ, ಕುಡಿಯುವ ನೀರಿಗೂ ಅಭಾವ, ವಿದ್ಯುತ್ ವ್ಯತ್ಯಯ ಸಾಧ್ಯತೆ ರಾಜ್ಯದಲ್ಲಿ ಮಳೆ ಕೊರತೆ, ಕುಡಿಯುವ ನೀರಿಗೂ ಅಭಾವ, ವಿದ್ಯುತ್ ವ್ಯತ್ಯಯ ಸಾಧ್ಯತೆ

2018ರಲ್ಲಿ ಶೇ.44ರಷ್ಟು ಮುಂಗಾರು ಮಳೆಯ ಕೊರತೆಯಾಗಿತ್ತು. ಈಗಿರುವ ಜಲಾಶಗಳಲ್ಲಿ ನೀರಿನ ಮಟ್ಟವು ತೀರಾ ಕಡಿಮೆ ಇದೆ. ಬಂಗಾಳಕೊಲ್ಲಿಯಲ್ಲಿ ಮುಂದಿನ ಒಂದೆರೆಡು ದಿನಗಳಲ್ಲಿ ವಾಯುಭಾರ ಕುಸಿತ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಇದರಿಂದ ಉತ್ತರಾಭಿಮುಖವಾಗಿ ಮುಂಗಾರು ಮಾರುತ ಚಲಿಸಬಹುದು. ಇದರ ಸೂಚನೆ ಎಂಬಂತೆ ಕರಾವಳಿಯಲ್ಲಿ ಗುರುವಾರ ಸ್ವಲ್ಪ ಮಳೆಯಾಗಿದೆ. ದೆಹಲಿಯ ಜನಕ್‌ಪುರಿಯಲ್ಲೂ ಈಗ ಮಳೆಯಾಗುತ್ತಿದೆ.

English summary
Rain will continue in chennai for a day, Chennai’s Meenambakkam Observatory recorded 29 mm of rain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X