ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್ 15ರೊಳಗೆ 75 ವಂದೇ ಭಾರತ್ ವೇಗದ ರೈಲುಗಳ ಸಂಚಾರ

|
Google Oneindia Kannada News

ಚೆನ್ನೈ ಮೇ 20: "ಈ ವರ್ಷದ ಆಗಸ್ಟ್ 15ರೊಳಗೆ 75 ವಂದೇ ಭಾರತ್ ರೈಲುಗಳು ಸಂಚಾರ ನಡೆಸಲಿವೆ" ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಹೇಳಿದ್ದಾರೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ದೇಶಿಯ ನಿರ್ಮಿತ ಅತಿ ವೇಗದ ರೈಲುಗಳಾಗಿವೆ.

ಚೆನ್ನೈನಲ್ಲಿ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಇಂಟೆಗ್ರಲ್ ಕೋಚ್ ಫ್ಯಾಕ್ಟರಿಗೆ ಭೇಟಿ ನೀಡಿ ವಂದೇ ಭಾರತ್ ರೈಲು ಬೋಗಿಗಳ ತಯಾರಿಕೆಯ ಬಗ್ಗೆ ಪರಿಶೀಲನೆ ನಡೆಸಿದರು. ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ವಂದೇ ಭಾರತ್ ರೈಲುಗಳ ತಯಾರಿಕೆಯು ಫಾಸ್ಟ್ ಟ್ರ್ಯಾಕ್ ಮೋಡ್‌ನಲ್ಲಿದ್ದು ವಂದೇ ಭಾರತ್ ಉತ್ಪಾದನೆಯು ವೇಗದ ಹಾದಿಯಲ್ಲಿದೆ ಎಂದು ಅವರು ಹೇಳಿದ್ದಾರೆ.

chennai

ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಗೆ ಸಚಿವರು ಭೇಟಿ ನೀಡಿದರು. ಕೋಚ್‌ ತಯಾರಿಗೆ ಬಗ್ಗೆ ಪರಿಶೀಲನೆ ನಡೆಸಿದರು. ವಂದೇ ಭಾರತ್ ರೈಲುಗಳ ಬೋಗಿ ತಯಾರಿಕೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮುಂದಿನ ವರ್ಷದೊಳಗೆ ಹೆಚ್ಚಿನ ರೈಲುಗಳನ್ನು ಉತ್ಪಾದಿಸುವ ಬಗ್ಗೆ ಘೋಷಣೆ ಮಾಡಿದರು.

ವಂದೇ ಭಾರತ್ ರೈಲುಗಳು; ಸಚಿವ ಅಶ್ವಿನಿ ವೈಷ್ಣವ್, "ಆಗಸ್ಟ್ 15, 2023 ರೊಳಗೆ 75 ವಂದೇ ಭಾರತ್ ರೈಲುಗಳು ಸಂಚಾರ ನಡೆಸಲಿವೆ. ಒಟ್ಟು 75 ರೈಲುಗಳನ್ನು ಉತ್ಪಾದಿಸಲಾಗುವುದು. ಈ ಹೊಸ ರೈಲುಗಳು ಹಳೆಯ ಮಾದರಿಗಳಿಗಿಂತ ಉತ್ತಮವಾದ ಸುಧಾರಿತ ಆವೃತ್ತಿಯಾಗಿರುತ್ತವೆ" ಎಂದರು.

ಟ್ವಿಟರ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಅವರು, "ಐಸಿಎಫ್ ಚೆನ್ನೈನಲ್ಲಿ ಕ್ಷಿಪ್ರಗತಿಯಲ್ಲಿ ವಂದೇ ಭಾರತ್ ನಿರ್ಮಾಣವಾಗುತ್ತಿದೆ" ಎಂದು ಹೇಳಿದ್ದಾರೆ.

rail

2019ರಲ್ಲಿ ಪರಿಚಯಿಸಲಾದ ವಂದೇ ಭಾರತ್ ಸೆಮಿ-ಹೈ ಸ್ಪೀಡ್ ರೈಲುಗಳು ಮೂಲತಃ ಟ್ರೈನ್ 18 ಎಂದು ಕರೆಯಲ್ಪಡುತ್ತವೆ. ಪ್ರಸ್ತುತ ದೆಹಲಿ-ವಾರಣಾಸಿ ಮತ್ತು ದೆಹಲಿ-ಕರ್ತಾ ಮಾರ್ಗಗಳಲ್ಲಿ ಈ ರೈಲುಗಳು ಓಡುತ್ತಿವೆ. ಮುಂದಿನ ಮೂರು ವರ್ಷಗಳಲ್ಲಿ 400 ವಂದೇ ಭಾರತ್ ರೈಲುಗಳನ್ನು ತಯಾರಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಘೋಷಿಸಿದ್ದರು.

ಹೊಸ ರೈಲುಗಳು; ಬಜೆಟ್ ಘೋಷಣೆಯ ಪ್ರಕಾರ 16 ಕೋಚ್ ವಂದೇ ಭಾರತ್ ರೈಲಿಗೆ 120 ಕೋಟಿ ರೂ. ಅನುದಾನ ನೀಡಲಾಗಿದೆ. ಈ ಹೊಸ ಆವೃತ್ತಿಯ ರೈಲುಗಳಲ್ಲಿ ವಂದೇ ಭಾರತ್ ರೈಲುಗಳು ಹಗುರವಾಗಿರುತ್ತವೆ, ಆಧುನಿಕ ಸೌಕರ್ಯಗಳನ್ನು ಮತ್ತು ಪ್ರಯಾಣಿಕ ಸ್ನೇಹ ಸೌಕರ್ಯಗಳನ್ನು ಹೊಂದಿರುತ್ತವೆ.

ಹೊಸದಾಗಿ ನಿರ್ಮಾಣವಾಗುತ್ತಿರುವ ರೈಲುಗಳು ದೂರದ ಪ್ರಯಾಣವನ್ನು ಸುಲಭಗೊಳಿಸಲಿವೆ. ಹೊಸ ರೈಲುಗಳು AC-1, AC-2 ಮತ್ತು AC-3 ಕೋಚ್‌ಗಳೊಂದಿಗೆ 3 ವಿಭಾಗವನ್ನು ಹೊಂದಿರುತ್ತವೆ. ಸದ್ಯ ಇರುವ ವಂದೇ ಭಾರತ್ ರೈಲುಗಳು ಚೇರ್ ಕಾರ್ ಸೀಟಿಂಗ್ ಮಾದರಿಯಲ್ಲಿವೆ.

English summary
Indian Railways will connect the country's different regions with Vande Bharat Express trains said union railway minister Ashwini Vaishnaw . He visited integral coach factory at Chennai and inspected the Vande Bharat express coach production.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X