ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

56 ಇಂಚ್ ಎದೆಯ ವ್ಯಕ್ತಿಗೆ ಚೀನಾ ಹೆಸರೆತ್ತುವ ತಾಕತ್ತಿಲ್ಲ: ರಾಹುಲ್ ಗಾಂಧಿ

|
Google Oneindia Kannada News

ಚೆನ್ನೈ, ಜನವರಿ 25: ತಮಿಳುನಾಡಿನಲ್ಲಿ ಚುನಾವಣಾ ಪೂರ್ವ ಪ್ರಚಾರದ ಎರಡನೆಯ ದಿನವಾದ ಭಾನುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚೀನಾ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದರು. ಚೀನಾ ಪಡೆಗಳು ಭಾರತದ ಜಾಗವನ್ನು ಅತಿಕ್ರಮಿಸಿಕೊಂಡಿವೆ. ಆದರೆ 56 ಇಂಚ್ ಎದೆಯ ವ್ಯಕ್ತಿಗೆ ನಮ್ಮ ನೆರೆಯ ದೇಶದ ಹೆಸರನ್ನು ಕೂಡ ಹೇಳಲು ಆಗುತ್ತಿಲ್ಲ ಎಂದು ಟೀಕಿಸಿದರು.

ಈರೋಡ್‌ನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರವು ಐದಾರು ಉದ್ಯಮಿಗಳಿಂದ ಮಾತ್ರವೇ ನಡೆಯುತ್ತಿದೆ ಎಂದು ಆರೋಪಿಸಿದರು. ಮೋದಿ ಸರ್ಕಾರವು ದೇಶದ ಭವಿಷ್ಯವಾಗಿರುವ ಮತ್ತು ರಾಜ್ಯದ ಈ ಭಾಗದಲ್ಲಿ ವಿಪುಲವಾಗಿರುವ ರೈತರು, ಕಾರ್ಮಿಕರು ಅಥವಾ ಸಣ್ಣ ಹಾಗೂ ಮಧ್ಯಮ ಸಾಹಸೋದ್ಯಮಗಳಿಗಾಗಿ ಇಲ್ಲ ಎಂದರು.

Rahul Gandhi Slams Narendra Modi Says 56 Inch-Chest Cannot Even Utter The Name Of China

'ಭಾರತದ ಪ್ರದೇಶವನ್ನು ಚೀನೀ ಪಡೆಗಳು ಅತಿಕ್ರಮಿಸಿರುವುದನ್ನು ಇದೇ ಮೊದಲ ಬಾರಿ ಭಾರತದ ಜನರು ನೋಡುತ್ತಿದ್ದಾರೆ. ಇಂದಿನ ಬಗ್ಗೆ ಹೇಳುವುದಾದರೆ ಸಾವಿರಾರು ಚೀನೀ ಸೈನಿಕರು ನಮ್ಮ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದಾರೆ. ಆದರೆ 56 ಇಂಚ್ ಎದೆಯ ವ್ಯಕ್ತಿ ಚೀನಾ ಎಂಬ ಪದವನ್ನು ಕೂಡ ಹೇಳಲು ಆಗುವುದಿಲ್ಲ. ಇದು ನಮ್ಮ ದೇಶದ ವಾಸ್ತವ' ಎಂದು ಟೀಕಾಪ್ರಹಾರ ನಡೆಸಿದರು.

ತಮಿಳುನಾಡಿನ ಜನತೆಯೊಂದಿಗೆ ತಮ್ಮನ್ನು ಬೆಸೆಯಲು ತಮಿಳು ಭಾಷೆ ಮತ್ತು ಸಂಸ್ಕೃತಿಯನ್ನು ಬಳಸಿಕೊಂಡ ಅವರು, ತಾವು ದೆಹಲಿಯಲ್ಲಿ ತಮಿಳರ ಪರವಾದ ಸೈನಿಕನಾಗಲು ಬಯಸಿದ್ದು, ತಮಿಳು ಸಂಸ್ಕೃತಿಯನ್ನು ಕೇರಸಿ ಪಕ್ಷ ಹಾಳುಗೆಡವಲು ಬಿಡುವುದಿಲ್ಲ ಎಂದರು.

English summary
Congress leader Rahul Gandhi in Tamil Nadu criticizes PM Narendra Modi and said the man with 56 inch-chest cannot even utter the name of China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X