ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ... ಕ್ಷಮಿಸಿ... ಅಲ್ಲ ನೀರವ್, ಛೆಛೆ ನೀರವ್ ಅಲ್ಲ ನರೇಂದ್ರ!

|
Google Oneindia Kannada News

Recommended Video

lok sabha elections 2019: ನರೇಂದ್ರ... ಕ್ಷಮಿಸಿ... ಅಲ್ಲ ನೀರವ್, ಛೆಛೆ ನೀರವ್ ಅಲ್ಲ ನರೇಂದ್ರ!

ಚೆನ್ನೈ, ಮಾರ್ಚ್ 13 : ನರೇಂದ್ರ ಮೋದಿ, ನೀರವ್ ಮೋದಿ, ಲಲಿತ್ ಮೋದಿಯವರನ್ನು ಒಂದಿಲ್ಲೊಂದು ಭಾಷಣದಲ್ಲಿ ನೆನಪಿಸಿಕೊಳ್ಳುತ್ತಲೇ ಇರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇದೇ 'ಮೋದಿ' ಹೆಸರನ್ನು ಜಪಿಸಲು ಹೋಗಿ ಪೇಚಿಗೆ ಸಿಲುಕಿದ ಘಟನೆ ಚೆನ್ನೈನಲ್ಲಿ ಬುಧವಾರ ಜರುಗಿದೆ.

ಮೋದಿಯನ್ನು ಏಕೆ ತಬ್ಬಿಕೊಂಡೆ: ರಾಹುಲ್ ಗಾಂಧಿ ಕೊಟ್ಟರು ಕಾರಣಮೋದಿಯನ್ನು ಏಕೆ ತಬ್ಬಿಕೊಂಡೆ: ರಾಹುಲ್ ಗಾಂಧಿ ಕೊಟ್ಟರು ಕಾರಣ

ಚೆನ್ನೈನ ಸ್ಟೆಲ್ಲಾ ಮೇರೀಸ್ ಕಾಲೇಜಿನ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ ಅವರು, ಬ್ಯಾಂಕುಗಳಿಗೆ ಕೋಟಿಗಟ್ಟಲೆ ಮೋಸ ಮಾಡಿ ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿಯವರ ಹೆಸರು ಹೇಳುವ ಬದಲು ನರೇಂದ್ರ ಮೋದಿ ಹೆಸರು ಹೇಳಿ, ವಿದ್ಯಾರ್ಥಿನಿಯರಲ್ಲಿ ನಗೆಯುಕ್ಕಿಸಿದರು.

ಮಹಿಳೆಯರು ಪುರುಷರಿಗಿಂತಲೂ ಬುದ್ಧಿವಂತರು: ರಾಹುಲ್ ಗಾಂಧಿ ಮಹಿಳೆಯರು ಪುರುಷರಿಗಿಂತಲೂ ಬುದ್ಧಿವಂತರು: ರಾಹುಲ್ ಗಾಂಧಿ

ಒಂದು ಬಾರಿ ಹೀಗಾಗಿದ್ದರೆ ಓಕೆ ಎನ್ನಬಹುದು. ಆದರೆ, ನರೇಂದ್ರ ಮೋದಿಯವರ ಹೆಸರು ಪ್ರಸ್ತಾಪಿಸುವ ಸಂದರ್ಭದಲ್ಲಿಯೂ ರಾಹುಲ್ ಗಾಂಧಿ ಅವರು ನೀರವ್ ಮೋದಿ ಎಂದು ಹೇಳಿ ಎರಡನೇ ಬಾರಿ ಸ್ಟೆಲ್ಲಾ ಮೇರೀಸ್ ವಿದ್ಯಾರ್ಥಿನಿಯರನ್ನು ನಗೆಗಡಲಿನಲ್ಲಿ ತೇಲಾಡಿಸಿದರು.

Rahul Gandhi fumbles while taking names of Narendra and Nirav

ನರೇಂದ್ರ ಮೋದಿ... ಅಲ್ಲ ನೀರವ್ ಮೋದಿಯಂಥ ಹದಿನೈದರಿಂದ ಹದಿನೇಳು ಭ್ರಷ್ಟ ವ್ಯಾಪಾರಿಗಳಿಗೆ ಹೋಗುತ್ತಿರುವ ಹಣವನ್ನು ನಾವು ಹೋಗದಂತೆ ತಡೆಯಬೇಕಾಗಿದೆ ಎಂದು ಹೇಳುತ್ತಿದ್ದ ಅವರು, ಸಾವರಿಸಿಕೊಂಡು ನರೇಂದ್ರ... ಕ್ಷಮಿಸಿ... ಅಲ್ಲ ನೀರವ್ ಮೋದಿ ಎಂದು, ನೀಲಿ ಬಣ್ಣದ ಜೀನ್ಸ್ ಮತ್ತು ಬೂದು ಬಣ್ಣದ ಟೀಶರ್ಟ್ ಧರಿಸಿದ್ದ ಗುಳಿಕೆನ್ನೆಯ ರಾಹುಲ್ ಅವರು ಸರಿಪಡಿಸಿಕೊಂಡರು.

'ಮಸೂದ್ ಅಜರ್ ಜೀ' ಹೇಳಿಕೆ ರಾಹುಲ್ ಗಾಂಧಿ ವಿರುದ್ಧ ದೂರು'ಮಸೂದ್ ಅಜರ್ ಜೀ' ಹೇಳಿಕೆ ರಾಹುಲ್ ಗಾಂಧಿ ವಿರುದ್ಧ ದೂರು

ಮತ್ತೊಂದು ಬಾರಿ, ಮಾತು ಆಡಾಡುತ್ತಲೇ, ಭಾರತದಲ್ಲಿ ನೀರವ್ ಮೋದಿ ಎಷ್ಟು ಉದ್ಯೋಗಳನ್ನು ಸೃಷ್ಟಿಸಿದ್ದಾರೆ? ವ್ಯಾಪಾರ ಆರಂಭಿಸಲು ನೀಡಲಾಗುವ 30 ಲಕ್ಷ ರುಪಾಯಿ ಹಣದೊಂದಿಗೆ ಬೇಕಾದಷ್ಟು ಉದ್ಯೋಗಳನ್ನು ಸೃಷ್ಟಿಸಬಹುದು ಎಂದು ಹೇಳುವ ಭರದಲ್ಲಿ, ನರೇಂದ್ರ ಮೋದಿ ಎನ್ನುವ ಬದಲು ನೀರವ್ ಮೋದಿ ಅಂದರು ರಾಹುಲ್ ಗಾಂಧಿ. ಯಾವಾಗಲೂ ಮೋದಿ ಮೋದಿ ಎಂದು ಜಪಿಸುತ್ತಿರುವಾಗ ಇಂಥ ತಪ್ಪುಗಳಾಗುವುದು ಸಹಜ.

English summary
Rahul Gandhi fumbles while taking names of Narendra Modi and Nirav Modi at a interactive session with girl students in Chennai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X