ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೇಲ್ ಡೀಲ್ ಪುಸ್ತಕವನ್ನು ಮುಟ್ಟುಗೋಲು ಹಾಕಿದ್ದು ಯಾರು?

|
Google Oneindia Kannada News

ಚೆನ್ನೈ, ಏಪ್ರಿಲ್ 03: ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ವಿವರಗಳನ್ನೊಳಗೊಂಡ "ರಫೇಲ್: ದಿ ಸ್ಕ್ಯಾಮ ದಟ್ ಶೂಕ್ ದಿ ನೇಶನ್"(Rafale: The Scam That Shook the Nation") ಪುಸ್ತಕವನ್ನು ಮುಟ್ಟುಗೋಲು ಹಾಕಿ, ನಂತರ ವಾಪಸ್ ನೀಡಿದ ನಾಟಕೀಯ ಘಟನೆ ತಮಿಳುನಾಡಿನ ಚೆನ್ನೈ ನಲ್ಲಿ ನಡೆದಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಎಂಜಿನಿಯರ್ ಆಗಿರುವ ಎಸ್ ವಿಜಯನ್ ಎಂಬುವವರು ಈ ಪುಸ್ತಕವನ್ನು ಬರೆದಿದ್ದರು. ಈ ಪುಸ್ತಕವನ್ನು ಮಂಗಳವಾರ ಬಿಡುಗಡೆ ಮಾಡಬೇಕಿತ್ತು. ಆದರೆ ಅದಕ್ಕೂ ಮುನ್ನ ಚುನಾವಣಾ ಆಯೋಗದಿಂದ ಬಂದಿದೆ ಎನ್ನಲಾದ ಪತ್ರವನ್ನಿಟ್ಟುಕೊಂಡು ಅಧಿಕಾರಿಯೊಬ್ಬರು ಬಂದು ಪುಸ್ತಕಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಅವರು ನೀಡಿದ ಪತ್ರದಲ್ಲಿ ಯಾವುದೇ ಸರ್ಕಾರಿ ಸೀಲ್ ಆಗಲೀ, ಚುನಾವಣಾ ಆಯೋಗದ ಲೆಟರ್ ಹೆಡ್ ಆಗಲಿ ಇರಲಿಲ್ಲ. ಖಾಲಿ ಬಿಳಿ ಹಾಳೆ ಮೇಲೆ ಬರೆಯಲಾಗಿತ್ತು.

ವಿದ್ಯಾರ್ಥಿನಿ ಎದುರೂ ರಫೇಲ್ ಬಗ್ಗೆಯೇ ಸಮಾ ಭಾಷಣ ಮಾಡಿದ ರಾಹುಲ್ ವಿದ್ಯಾರ್ಥಿನಿ ಎದುರೂ ರಫೇಲ್ ಬಗ್ಗೆಯೇ ಸಮಾ ಭಾಷಣ ಮಾಡಿದ ರಾಹುಲ್

ಸುಮಾರು 150 ಕ್ಕೂ ಹೆಚ್ಚು ಪುಸ್ತಕಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಈ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಪುಸ್ತಕ ಬಿಡುಗಡೆ ಮಾಡಲಿದ್ದ ದಿ ಹಿಂದು ಪತ್ರಿಕೆಯ ಪತ್ರಕರ್ತ ಎನ್ ರಾಮ್ ಅವರು ಈ ಘಟನೆಯನ್ನು ಖಂಡಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಜೀವಚರಿತ್ರೆಯ ಚಲನಚಿತ್ರ ಬಿಡುಗಡೆಗೆ ತಡೆ ನೀಡುವುದಿಲ್ಲ ಎಂದ ಮೇಲೆ ಈ ಪುಸ್ತಕ ಬಿಡುಗಡೆಗೆ ಮಾತ್ರ ನೀತಿ ಸಂಹಿತೆ ಅನ್ವಯವಾಗುತ್ತದೆಯೇ ಎಂದು ಪ್ರಶ್ನಿಸಿದ್ದರು.

Rafale: The Scam That Shook the Nation, book seized in Chennai

ಈ ಘಟನೆಯ ನಂತರ ಎಚ್ಚೆತ್ತುಕೊಂಡ ಚುನಾವಣಾ ಆಯೋಗ, ನಾವು ಪುಸ್ಕವನ್ನು ವಶಕ್ಕೆ ಪಡೆಯುವಂತೆ ಯಾರಿಗೂ ಹೇಳಿಲ್ಲ. ಜಿಲ್ಲಾ ಚುನಾವಣಾಧಿಕಾರಿಗಳ ಬಳಿ ಈ ಕುರಿತು ವರದಿ ನೀಡುವಂತೆ ಸೂಚಿಸಿದ್ದೇವೆ ಎಂದಿದೆ.

ರಫೇಲ್ ಡೀಲ್: ಸೂಕ್ಷ್ಮ ಮಾಹಿತಿಗೂ ಆರ್‌ಟಿಐ ಅನ್ವಯ ಎಂದ ಸುಪ್ರೀಂರಫೇಲ್ ಡೀಲ್: ಸೂಕ್ಷ್ಮ ಮಾಹಿತಿಗೂ ಆರ್‌ಟಿಐ ಅನ್ವಯ ಎಂದ ಸುಪ್ರೀಂ

ಭಾರತ ಮತ್ತು ಫ್ರಾನಸ್ ನಡುವೆ ನಡೆದ ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಈ ಪುಸ್ತಕದಲ್ಲಿ ಬರೆಯಲಾಗಿದೆ.

English summary
I book on Rafale deal, "Rafale: The Scam That Shook the Nation", was seized due to the model code of conduct in Chennai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X