Sankranti Special: ಪೊಂಗಲ್ ಪ್ರಯುಕ್ತ ಪುದುಚೆರಿ ಶಾಲೆಗಳಿಗೆ 4 ದಿನ ರಜೆ ಘೋಷಣೆ
ಚೆನ್ನೈ, ಜನವರಿ 12: ಪೊಂಗಲ್ ಪ್ರಯುಕ್ತ ಪುದುಚೆರಿ ಶಾಲೆಗಳಿಗೆ 4 ದಿನ ರಜೆ ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ.
ಜನವರಿ 13ರಿಂದ 17ರವರೆಗೆ ಶಾಲೆಗಳಿಗೆ ರಜೆ ಇರಲಿದೆ. ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಸತತ 9 ತಿಂಗಳಿನಿಂದ ಕೊರೊನಾ ಭಯದಿಂದಾಗಿ ಶಾಲೆಗಳು ಬಾಗಿಲು ಮುಚ್ಚಿದ್ದು, ಜನವರಿ 4 ರಂದು ಶಾಲೆಗಳು ತೆರೆದಿದ್ದವು, ವಿದ್ಯಾರ್ಥಿಗಳಿಗೆ ಸಿಹಿಯನ್ನು ಕೊಟ್ಟು ಬರಮಾಡಿಕೊಳ್ಳಲಾಗಿತ್ತು.
ಶಾಲೆಗಳಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 1ರವರೆಗೆ ತರಗತಿಗಳು ನಡೆಯಲಿವೆ.ತಮಿಳುನಾಡಿನಲ್ಲಿ ಪೊಂಗಲ್ ವಿಶೇಷ ಸ್ಥಾನವನ್ನು ಪಡೆದಿದ್ದು, ಜನವರಿ ಮಧ್ಯದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಕರ್ನಾಟಕ ಇನ್ನುಳಿದೆಡೆ ಸಂಕ್ರಾಂತಿಯನ್ನು ಆಚರಿಸಿದರೆ ತಮಿಳುನಾಡಿನಾದ್ಯಂತ ಪೊಂಗಲ್ ಅನ್ನು ಸಡಗರದಿಂದ ಆಚರಿಸುತ್ತಾರೆ.
ಈ ಹಬ್ಬ ನಾಲ್ಕು ದಿನಗಳ ಕಾಲ ನಡೆಯುತ್ತದೆ. ಈ ವರ್ಷ ಜನವರಿ 14 ರಂದು ಪೊಂಗಲ್ ಹಬ್ಬ ಆಚರಿಸಲಾಗುತ್ತಿದೆ.
ಈ ಹಬ್ಬವನ್ನು ಚಳಿಗಾಲದ ಅಂತ್ಯವೆಂದು ಕರೆಯಲಾಗುತ್ತದೆ. ಇದಾದ ಬಳಿಕ ಮೂರು ತಿಂಗಳುಗಳ ಕಾಲ ಬೇಸಿಗೆ ಕಾಲ ಇರುತ್ತದೆ. ಆದರೆ ಅನಿಶ್ಚಿತ ಮಳೆಯಿಂದಾಗಿ ಈ ಬಾರಿ ಚಳಿಯ ಪರಿಣಾಮ ಕಡಿಮೆಯಾಗಿದೆ.